ಸಿಡ್ನಿ: ಕೆಲವರಿಗೆ ಮದ್ಯ ಸೇವಿಸುವ ಚಟವಿರುತ್ತದೆ. ಇನ್ನು ಕೆಲವರಿಗೆ ಅಪರೂಪಕ್ಕೊಮ್ಮೆ ಯಾವುದೋ ಒಂದು ಸಂಭ್ರಮದಲ್ಲಿ ಅಥವಾ ತಲೆಬಿಸಿಯಲ್ಲಿ ಮದ್ಯ ಸೇವಿಸುವ ಅಭ್ಯಾಸವಿರುತ್ತದೆ. ದಿನದಲ್ಲಿ ಜಾಸ್ತಿ ಅಂದರೆ ನೀವು ಎಷ್ಟು ಕುಡಿಯಬಹುದು? ಒಂದು ದಿನದಲ್ಲಿ ನೀವು ಎಷ್ಟು ಬಾರ್ ಗಳಿಗೆ ಭೇಟಿ ನೀಡಿ, ಖರ್ಚು ಮಾಡಬಹುದು? ನಿಮ್ಮ ಜೇಬು ಖಾಲಿಯಾಗುವವರೆಗಂತೂ ಅಲ್ಲವೇ ಅಲ್ಲ ಬಿಡಿ.
ಆದರೆ ಇಲ್ಲಿಬ್ಬರು ಸ್ನೇಹಿತರು ಒಂದು ದಿನದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಬಾರ್ ಗೆ ಹೋಗಿರುವುದೇ ವಿಶ್ವದಾಖಲೆಯಾಗಿದೆ.!
ಅಚ್ಚರಿಯಾಗಬೇಡಿ. ಆಸ್ಟ್ರೇಲಿಯದ ಸಿಡ್ನಿಯಲ್ಲಿರುವ ಹ್ಯಾರಿ ಕೂರೋಸ್ ಮತ್ತು ಜೇಕ್ ಲೋಯ್ಟರ್ಟನ್ ಎಂಬ ಸ್ನೇಹಿತರು ಒಂದು ದಿನದಲ್ಲಿ ಬರೋಬ್ಬರಿ 99 ಬಾರ್ ಗಳಿಗೆ ಭೇಟಿ ನೀಡಿಯೇ ಗಿನ್ನಿಸ್ ದಾಖಲೆ ಬರೆದಿದ್ದಾರೆ.
ಮದ್ಯರಾತ್ರಿ 12 ಗಂಟೆಗೆ ಬಾರ್ ಗಳಿಗೆ ಹೋಗುವ ಪ್ಲ್ಯಾನ್ ಗೆ ಚಾಲನೆ ನೀಡಿದರು. ಆದರೆ ಆ ಸಮಯದಲ್ಲಿ ಬಹುತೇಕ ಹೆಚ್ಚಿನ ಪಬ್ (ಬಾರ್ ಗಳು) ಮುಚ್ಚಿರುವುದರಿಂದ ಇಬ್ಬರು ಸವಾಲುಗಳನ್ನು ಎದುರಿಸಬೇಕಾಯಿತು. ನಡೆದುಕೊಂಡೇ ಹೋಗಿ ಬಾರ್ ತೆರೆದಿದ್ದ ಬಾರ್ ಗಳಿಗೆ ಹೋಗಿ ಕುಡಿಯಲು ಶುರು ಮಾಡಿದ್ದಾರೆ. ಆ ಬಳಿಕ ಕೆಲ ಸಮಯ ವಿಶ್ರಾಂತಿ ತೆಗೆದುಕೊಂಡು ಮುಂಜಾನೆ ಮತ್ತೆ ಬಾರ್ ಗಳಿಗೆ ಹೋಗಿದ್ದಾರೆ.
ಹೋಗುವ ಪ್ರತಿ ಎರಡನೇ ಬಾರ್ ನಲ್ಲಿ ಹ್ಯಾರಿ ಕೂರೋಸ್ ಮತ್ತು ಜೇಕ್ ಲೋಯ್ಟರ್ಟನ್ ಮದ್ಯ ಕುಡಿಯುವ ಯೋಜನೆಯನ್ನು ಮೊದಲು ಹಾಕಿಕೊಂಡಿದ್ದರು. ಉಳಿದ ಬಾರ್ ನಲ್ಲಿ ಅಲ್ಕೋಹಾಲ್ ಮಿಶ್ರಿತವಿಲ್ಲದ ಪಾನೀಯಗಳನ್ನು ಕುಡಿಯಬೇಕೆನ್ನುವ ಪ್ಲ್ಯಾನ್ ಹಾಕಿಕೊಂಡಿದ್ದರು. ಆದರೆ ಆ ಬಳಿಕ ಅದನ್ನು ಬದಲಾಯಿಸಿದ್ದಾರೆ. ಸಿಡ್ನಿನಲ್ಲಿ ವಿಪರೀತ ಮದ್ಯಸೇವನೆ ಕುರಿತು ಕಟ್ಟುನಿಟ್ಟಾದ ಕಾನೂನುಯಿದೆ. ಈ ಕಾರಣದಿಂದ ಹೋಗುವ ಬಾರ್ ಗಳಲ್ಲಿ ಮಿತವಾಗಿ ಮದ್ಯ ಸೇವಿಸುತ್ತಿದ್ದ ಕಾರಣ ಎಲ್ಲ ಬಾರ್ ಗಳಿಗೆ ಇಬ್ಬರನ್ನು ಒಳಗೆ ಬಿಡುತ್ತಿದ್ದರು ಎಂದು ವರದಿ ತಿಳಿಸಿದೆ.
ನಾವು ಅಗತ್ಯವಿರುವ ಸೋಡ ಮಿಶ್ರಿತ ಲಿಕ್ವಿಡ್ ನ ಪಾನೀಯವನ್ನು ಸೇವಿಸುವಾಗಲು ನಿಯಂತ್ರಣವಾಗಿದ್ದೆವು. ನಾನು ಆ ಕಾರಣದಿಂದ ಅಗತ್ಯವಿದ್ದಾಗ ಜ್ಯೂಸ್ ಕುಡಿಯುತ್ತಿದ್ದೆ ಎಂದು ಹ್ಯಾರಿ ಹೇಳುತ್ತಾರೆ.
ವರದಿಗಳ ಪ್ರಕಾರ ಇಬ್ಬರು ಒಂದು ದಿನದಲ್ಲಿ 99 ಬಾರ್ ಗಳಿಗೆ ಭೇಟಿ ಕೊಟ್ಟು, ಸುಮಾರು 1,500 ಆಸ್ಟ್ರೇಲಿಯನ್ ಡಾಲರ್‌ಗಳನ್ನು (ಅಂದಾಜು. 82, 652) ಖರ್ಚು ಮಾಡಿದ್ದಾರೆ.
ಈ ಹಿಂದೆ 26 ವರ್ಷದ ದಕ್ಷಿಣ ಆಫ್ರಿಕಾದ ಹೆಲೆನ್ರಿಚ್ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದ ಯುವಕ ಒಂದು ದಿನದಲ್ಲಿ 78 ಪಬ್‌ಗಳಿಗೆ ಭೇಟಿ ನೀಡಿದ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಹ್ಯಾರಿ ಕೂರೋಸ್ ಮತ್ತು ಜೇಕ್ ಲೋಯ್ಟರ್ಟನ್ ಬ್ರೇಕ್ ಮಾಡಿ ಗಿನ್ನೆಸ್ ರೆಕಾರ್ಡ್ ಪುಟದಲ್ಲಿ ಸೇರಿದ್ದಾರೆ.
ಮಲ್ಟಿಪಲ್ ಸ್ಕ್ಲೆರೋಸಿಸ್ (MS) ನಲ್ಲಿ ಸಂಶೋಧನೆಗಾಗಿ ದುಡಿಯುತ್ತಿರುವ ಎಂಎಸ್ ಆಸ್ಟ್ರೇಲಿಯಾ ಎನ್ನುವ ಎನ್ ಜಿಒ ಸಂಸ್ಥೆಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಈ ಬಾರ್ ಗಳಿಗೆ ಭೇಟಿ ನೀಡುವುದರ ಹಿಂದಿನ ಉದ್ದೇಶ ಎಂದು ವರದಿ ತಿಳಿಸಿದೆ.