Advertisement
ಮೆಕ್ಕಾಗೆ ತೆರಳುವ ಎಲ್ಲ ಯಾತ್ರಿಕರು ಜೆಡ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಸ್ ಮೂಲಕ ಸಂಚರಿಸುತ್ತಿದ್ದರು. ಆದರೆ ಈ ವರ್ಷದಿಂದ ಜೆಡ್ಡಾದಲ್ಲಿನ ಭಾರತದ ರಾಯಭಾರಿ ಕಚೇರಿ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಿದ್ದು, ಭಾರತದಿಂದ ಬರುವ ಹಜ್ ಯಾತ್ರಿಕರನ್ನು ಹರಮೇನ್ ಹೈಸ್ಪೀಡ್ ರೈಲು ಮೂಲಕ ಮೆಕ್ಕಾಗೆ ಕಳಿಸುತ್ತಿದೆ. ಈ ರೈಲು ಪ್ರತೀ ಗಂಟೆಗೆ 300 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಪ್ರಸಕ್ತ ವರ್ಷ ಭಾರತದಿಂದ ತೆರಳಿರುವ ಸುಮಾರು 32,000 ಮುಸ್ಲಿಂ ಬಾಂಧವರಿಗೆ ರೈಲು ಸಂಚಾರದಿಂದ ಲಾಭವಾಗಲಿದೆ. ಈ ಹಿಂದೆ ರಸ್ತೆ ಮೂಲಕ ಪ್ರಯಾಣಿಸಲು 1 ಗಂಟೆಗೂ ಹೆಚ್ಚು ಸಮಯ ಬೇಕಿತ್ತು. ಈ ಸೌಲಭ್ಯದಿಂದ ಪ್ರಯಾಣದ ಸಮಯ ಅರ್ಧದಷ್ಟು ಕಡಿತವಾಗಲಿದೆ. ಈ ವರ್ಷ 1.75 ಲಕ್ಷ ಮಂದಿ ಭಾರತೀಯ ಯಾತ್ರಿಕರು ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. Advertisement
India ಹಜ್ ಯಾತ್ರಿಗಳಿಗೆ ಹೈಸ್ಪೀಡ್ ರೈಲು ಸೇವೆ ಆರಂಭ
01:12 AM May 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.