Advertisement
ಹಳೆ ವಾಹನಗಳಿಗೆ ಇದೆಯೇ?ಹಳೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದಕ್ಕೆ ಎರಡು ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ. ರಾಜ್ಯ ಸರಕಾರಗಳು ಅನುಮತಿಸಿದಲ್ಲಿ ಡೀಲರ್‌ಗಳು ಹಳೆ ವಾಹನಗಳಿಗೆ ಕೂಡ ಎಚ್‌ಎಸ್‌ಆರ್‌ಪಿ ಅಳವಡಿಸಬಹುದು.
ಇದು ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ಹೆಚ್ಚುವರಿ ಭದ್ರತಾ ಅಂಶಗಳನ್ನೊಳಗೊಂಡ ಒಂದು ಏಕರೂಪದ ವ್ಯವಸ್ಥೆಯಾಗಿದೆ. 2002ರಲ್ಲಿ ಉಗ್ರರು ನಕಲಿ ನಂಬರ್‌ಪ್ಲೇಟ್ ಅಳವಡಿಸಿದ ವಾಹನವೊಂದರಲ್ಲಿ ಆಗಮಿಸಿ ಸಂಸತ್ ಮೇಲೆ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ 2005ರಷ್ಟು ಹಿಂದೆಯೇ ದೇಶಾದ್ಯಂತ ಎಚ್‌ಎಸ್‌ಆರ್‌ಪಿ ಜಾರಿಗೆ ತರುವಂತೆ ಸರಕಾರಕ್ಕೆ ಸೂಚಿಸಿತ್ತು. 2012ರಲ್ಲಿ ಅದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಕರ್ನಾಟಕ, ಉತ್ತರ ಪ್ರದೇಶ ಸಹಿತ ಸುಮಾರು 12 ರಾಜ್ಯಗಳು ಈ ಆದೇಶವನ್ನು ಇನ್ನೂ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿಲ್ಲ. ಎಚ್‌ಎಸ್‌ಆರ್‌ಪಿಯಲ್ಲಿನ ವಿಶೇಷತೆಗಳು
* ಅಲ್ಯುಮಿನಿಯಂ ನಂಬರ್‌ಪ್ಲೇಟ್
* ಬಿಸಿ ಮಾಡಿ ಅಳವಡಿಸಲಾದ ಕ್ರೋಮಿಯಂ ಆಧಾರಿತ ಹೋಲೊಗ್ರಾಮ್ ಸ್ಟಿಕ್ಕರ್
* ಹೋಲೊಗ್ರಾಮ್‌ನಲ್ಲಿ ಅಶೋಕ ಚಕ್ರದ ಚಿಹ್ನೆ
* ಕನಿಷ್ಠ 7 ಅಂಕೆಗಳ ಖಾಯಂ ಗುರುತು ಸಂಖ್ಯೆ
* ಗುರುತು ಸಂಖ್ಯೆಯಲ್ಲಿ 45 ಡಿಗ್ರಿ ವಾಲುವಿಕೆಯಲ್ಲಿ “ಇಂಡಿಯಾ’ ಎಂಬ ಕೆತ್ತನೆ
* ನಂಬರ್ ಪ್ಲೇಟನ್ನು ಕಳಚಲು ಅಥವಾ ಮರುಬಳಸಲು ಸಾಧ್ಯವಾಗದಂಥ ಲಾಕ್ ವ್ಯವಸ್ಥೆ
* ಕಳಚಲು ಯತ್ನಿಸಿದಲ್ಲಿ ನಂಬರ್‌ಪ್ಲೇಟ್ ಒಡೆದುಹೋಗುವುದು.