ಪ್ರೈಮರಿ, ಹೈಸ್ಕೂಲ್ ಮುಗಿಸಿ, ಪದವಿಪೂರ್ವ ಶಿಕ್ಷಣ ಕೂಡ ಮುಗಿಸಿ, ಈಗ ಪದವಿ ಶಿಕ್ಷಣದಲ್ಲಿದ್ದೀನಿ. ಸಮಯ ಹೇಗೆ ಹೋಯಿತು ಅಂತಾ ಗೊತ್ತೇ ಆಗ್ತಿಲ್ಲ. ಆದ್ರೂ ಪ್ರೈಮರಿ, ಹೈಸ್ಕೂಲ್ ಜೀವನ ಮರೆಯಲಾಗದ ಜೀವನ. ನನಗೆ ಮಾತ್ರ ಅಲ್ಲ, ಎಲ್ಲರಿಗೂ ಹಾಗೆ ಹೇಳ್ತಾರಲ್ಲ ದಿನಗಳು ಕಳೆದು ಹೋದ್ರೂ ನೆನಪುಗಳು ಮಾತ್ರ ಹಾಗೆ ನಮ್ಮಲ್ಲಿ ಉಳೀತಾವೆ ಅಂತ. ಈಗ ನಮ್ಮ ಜೊತೆ ಇರೋದು ನೆನಪುಗಳ ಗುತ್ಛ . ಪುಟ್ಟ ಪುಟ್ಟ ಹೆಜ್ಜೆ ಹಾಕೊಂಡು ಶಾಲೆಗೆ ಹೋಗಿ, ನನ್ನ ಪ್ರೀತಿಯ ಟೀಚರ್ ಅ, ಆ, ಇ, ಈ ಮಾತ್ರವಲ್ಲದೇ ಡ್ಯಾನ್ಸ್, ಪದ್ಯ, ಕಥೆ ಹೇಳಿ ಆಟ ಆಡಿಸಿ ಮನೆಯ ನೆನಪು ಶಾಲೇಲಿ ಬಾರದ ಹಾಗೆ ನೋಡಿ ಖುಷಿಯಲ್ಲಿರಿಸಿದ್ದಾರೆ. ಆಮೇಲೆ 1ರಿಂದ 7ನೇ ತರಗತಿ ತನಕ ಗಣಿತ, ಪರಿಸರ ವಿಜ್ಞಾನ, ಕನ್ನಡ, ಇಂಗ್ಲಿಷ್ ಕಲಿಸಿದ ಆ ನನ್ನ ಟೀಚರ್ ನನ್ನ ಶಿಕ್ಷಣಕ್ಕೆ ಅಡಿಪಾಯ ಹಾಕಿ ಕೊಟ್ಟವರು. ಫ್ರೆಂಡ್ಸ್‌ಗಳ ಜೊತೆ ಸೇರಿ ಸಂಜೆ ಹೊತ್ತು ಶಾಲೇಲಿ ಗಿಡಗಳಿಗೆ ನೀರು ಹಾಕಿ, ಮರಳಲ್ಲಿ ಆಡಿ, ಬಂಡೆಕಲ್ಲಿನ ಮೇಲೆ ಓಡಾಡಿ ನಮ್ಮ ನೆನಪಿನ ಹೆಜ್ಜೆ ಗುರುತು ಅಲ್ಲೇ ಬಿಟ್ಟಿದ್ದೇವೆ. ಇನ್ನೂ ಹೈಸ್ಕೂಲ್ ಮೆಟ್ಟಿಲು ಹತ್ತಿದ ನಮಗೆ ಕನ್ನಡ ಮೀಡಿಯಂನಲ್ಲಿದ್ದು ಇಂಗ್ಲಿಷ್ ಮೀಡಿಯಂಗೆ ಹೋದಾಗ ಕಾಲಲ್ಲಿ ಚುಚ್ಚಿದ ಮುಳ್ಳಿನ ಹಾಗೆ ಆಯಿತು.
ಹೇಗೋ ಆಮೇಲೆ ಸುಧಾರಿಸಿತು. ಮಧ್ಯಾಹ್ನದ ಹೊತ್ತಿಗೆ ನಮ್ಮ ಫ್ರೆಂಡ್ಸ್ ಗ್ರೂಪ್ ಎಲ್ಲರೂ ಗುಡ್ಡೆಗೆ ಹೋಗಿ ಊಟ ಮಾಡೋದು ನಮ್ಮ ರೂಢಿ. ನಮ್ಮಲ್ಲಿದ್ದ ತಿಂಡೀನ ಎಲ್ಲರಿಗೂ ಹಂಚಿಕೊಂಡು, ಮನೆ ಸ್ಟೋರಿ, ಸೀರಿಯಲ್ ಸ್ಟೋರಿ ಹೇಳ್ತಾ ಅಲ್ಲೇ ಇದ್ದ ನಕ್ಷತ್ರಹಣ್ಣು, ನೆಲ್ಲಿಕಾಯಿ, ಮಾವಿನಕಾಯಿ ಕದ್ದು ತಿನ್ತಾ ಇದ್ವಿ. ಹೈಸ್ಕೂಲ್‌ಗೆ ಹೋದ ಮೇಲೆ ಆಡುವ ಆಟ, ಕಣ್ಣಾಮುಚ್ಚಾಲೆ, ಕುಂಟೆಬಿಲ್ಲೆ ಎಲ್ಲಾ ಹೋಗಿ ಆಟಕ್ಕೆ ಬೆಲ್ ಹೊಡಾªಗ ಅದೇ ಟೈಮ್‌ಗೆ ಕಾಯ್ತಾ ಇದ್ದ ನಾವು ಬಾಲ್ ಹಿಡ್ಕೊಂಡು ಗ್ರೌಂಡೆಲ್ಲ ಹಾಜರು. ವಾಲಿಬಾಲ್ ಕೋರ್ಟ್ ಗಾಗಿ ಅವರಿವರ ಜೊತೆ ಜಗಳ ಆಡ್ಕೊಂಡು ಪೀಟಿ ಸರ್ ಬಂದ ಮೇಲೆ ಜಗಳ ಇತ್ಯರ್ಥ ಆಗುತ್ತಿತ್ತು. ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಸಮಯದಲ್ಲಿ ತುಂಬಾ ಖುಷಿ, ಯಾಕಂದ್ರೆ ಮಾರ್ಚ್‌ಫಾಸ್ಟ್ ಪ್ರಾಕ್ಟೀಸ್ ಅಂತ ಪೇಟೆಯೊಳಗಿನ ಕಾಲೇಜಿಗೆ ಕರೊಡು ಹೋಗುತ್ತಿದ್ದರು. ಪೇಟೆಯೊಳಗೆ ಫ್ರೆಂಡ್ಸ್ ಜೊತೆ ಸುತ್ತಿಕೊಂಡು ಬರೋದು ಎಲ್ಲಿಲ್ಲದ ಖುಷಿ. ಮತ್ತೆ ಹೋಗಿ ಬರೋ ಟೈಮ್‌ಗಾಗುವಾಗ ಮಧ್ಯಾಹ್ನ ಆಗುತ್ತಿತ್ತು.
ಪೀರಿಯಡ್‌ಗಳು ಮುಗಿಯುವುದೆಂದರೆ ಇನ್ನಿಲ್ಲದ ಖುಷಿ. ಅದಕ್ಕಾಗಿ ನಿಧಾನವಾಗಿ ಬರಿ¤ದ್ವಿ. ಎಸ್‌ಎಸ್‌ಎಲ್‌ಸಿಯಲ್ಲಿರುವಾಗ ಯಾವುದೂ ಇಲ್ಲ. ಫುಲ್‌ಟೈಮ್ ಕ್ಲಾಸ್. ಗ್ರೌಂಡ್‌ಗೆ ಹೋದ್ರೆ ಬೈಯ್ತಿದ್ರು. ಹೇಗೋ ಟೀಚರ್ಗೆ ಪೂಸಿ ಹೊಡೆದು ಹೋಗುತ್ತಿದ್ವಿ. ಶಾಲಾ ಇಲೆಕ್ಷನ್ ಅಂದ್ರೆ ತುಂಬಾ ಖುಷಿ ಮತ್ತೆ ಎಲ್ಲಿಲ್ಲದ ಉಲ್ಲಾಸ, ಉತ್ಸಾಹ. ಶಾಲಾ ಮುಖ್ಯಮಂತ್ರಿಯಾಗಿ ನಿಂತದ್ದು ನನ್ನ ಫ್ರೆಂಡ್. ಪ್ರಚಾರ-ಗಿಚಾರ ಆದಮೇಲೆ ಮತದಾನ ಆಯಿತು, ಕಾಯ್ತಾ ಇದ್ವಿ ಫಲಿತಾಂಶಕ್ಕಾಗಿ. ಹೆಸರು ಹೇಳಿ ಆಯಿತು. ನನ್ನ ಫ್ರೆಂಡ್‌ಗೆ ಮುಖ್ಯಮಂತ್ರಿ ಪಟ್ಟ ಸಿಕು¤. ಅಲ್ಲದೆ ಎಲ್ಲರಿಗೂ ಒಂದೊಂದು ಮಂತ್ರಿ ಸ್ಥಾನ ಕೂಡ ಸಿಕು¤. ಇದೆಲ್ಲಾ ಆದ ಮೇಲೆ ಸ್ಕೂಲ್‌ಡೇ, ಪ್ರೈಜ್ ಮುಗಿದ ಹಾಗೆ ಎಕ್ಸಾಮ್ ಟೈಮ್ ಬಂತು. ಕೊನೆಗೆ ಫೇರ್‌ವೆಲ್, ಬೀಳ್ಕೊಡುಗೆ ಸಮಾರಂಭ. ಅತ್ತು, ನಲಿದು, ಖುಷಿಯಲ್ಲಿದ್ದ ಆ ಹೈಸ್ಕೂಲ್ ಸಮಯ ಈಗ ನೆನಪುಗಳ ಬುತ್ತಿ ಮಾತ್ರ.
ಚಾಂದಿನಿ ಕಡ್ಯ, ಸರಕಾರಿ ಕಾಲೇಜು, ಮಡಿಕೇರಿ