ಪಡುಬಿದ್ರಿ: ಉಚ್ಚಿಲ ಮಹಾಲಿಂಗೇಶ್ವರ ದೇಗುಲದೆದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ವಲಯ ಎಂದು ಪಡುಬಿದ್ರಿ ಪೊಲೀಸರು ಗುರುತಿಸಿದ ಪ್ರದೇಶದಲ್ಲಿ ಹೆದ್ದಾರಿ ಡಿವೈಡರ್ ಮಧ್ಯದಲ್ಲಿ ಪ್ಲಾಸಿಕ್ ಬಲೆ ಅಳವಡಿಸುತ್ತಿದ್ದ ಹೆದ್ದಾರಿ ಗುತ್ತಿಗೆದಾರ ನವಯುಗ ಕಂಪನಿಯ ನೌಕರರನ್ನು ಸ್ಥಳೀಯರು ಹಾಗೂ ಬಡಾ ಗ್ರಾ. ಪಂ. ಸದಸ್ಯರು ಹಿಂದೆ ಕಳಿಸಿದ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಉಚ್ಚಿಲ ಬಡಾ ಗ್ರಾಮದ ವ್ಯಾಪ್ತಿಯ ಪೇಟೆಯಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು, ಮಹಾಲಕ್ಷ್ಮೀ ಆಂಗ್ಲಮಾಧ್ಯಮ ಶಾಲೆಯ ಎದುರು, ಬುಧಿಯಾ ಪೆಟ್ರೋಲ್ ಪಂಪ್ ಎದುರು ಹಾಗೂ ಕಲ್ಯಾಣಿ ಬಾರ್ ಎದುರು ಅಪಘಾತ ವಲಯ ಪ್ರದೇಶ ಎಂದು ಪಡುಬಿದ್ರಿ ಪೊಲೀಸರು ಹೆದ್ದಾರಿ ಇಲಾಖಾಧಿಕಾರಿಗಳಿಗೆ ಪತ್ರಬರೆದು ಅಪಘಾತಗಳನ್ನು ತಡೆಯುವಂತೆ ಕ್ರಮ ಕೈಗೊಳ್ಳಬೇಕಾಗಿ ತಿಳಿಸಿದ್ದರು.
ಪಡುಬಿದ್ರಿ ಪೊಲೀಸರ ಮಾಹಿತಿ ಆಧರಿಸಿ ಹೆಜಮಾಡಿಯ ಟೋಲ್ ಗೇಟ್ ಸಿಬ್ಬಂದಿ ಪೊಲೀಸರು ಸೂಚಿಸಿದ 4 ಸ್ಥಳಗಳಲ್ಲಿ ಹಸಿರು ಪ್ಲಾಸ್ಟಿಕ್ ಬಲೆಯನ್ನು ಅಳವಡಿಸಲು ಮುಂದಾಗಿದ್ದರು.
ಬಲೆಯನ್ನು ಅಳವಡಿಸುತ್ತಿರುವ ಪ್ರಾರಂಭದಲ್ಲಿಯೇ ಸ್ಥಳೀಯರು ಹಾಗೂ ತಾಲೂಕು ಪಂಚಾಯತು ಸದಸ್ಯ ಯು. ಸಿ. ಶೇಕಬ್ಬ ಹಾಗೂ ಗ್ರಾ. ಪಂ. ನ ಕೆಲ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದರು. ಸ್ಥಳೀಯ ಅಟೋರಿಕ್ಷಾ ಚಾಲಕರು ಹೆದ್ದಾರಿ ಗುತ್ತಿಗೆದಾರರೊಂದಿಗೆ, ಸರ್ವೀಸ್ ರಸ್ತೆ ನಿರ್ಮಾಣ ಹಾಗೂ ದಾರಿ ದೀಪ ಆಳವಡಿಸುವಂತೆ ಬೇಡಿಕೆ ಇಟ್ಟರು. ಇವೆಲ್ಲವುಗಳಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಯಿತು.
ಪಡುಬಿದ್ರಿ ಠಾಣಾಕಾರಿ ಸುಬ್ಬಣ್ಣ ಸ್ಥಳಕ್ಕೆ ಆಗಮಿಸಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲು ಪ್ರಯತ್ನಿಸಿದದರಾದರೂ, ಸ್ಥಳೀಯರು ತೀವ್ರ ವಿರೋಧ ವ್ಯಕ್ತ ಪಡಿಸಿದರು. ಸುಬ್ಬºಣ್ಣ ಅವರು ಟೋಲ್‌ಗೇಟ್ ಸಿಬ್ಬಂದಿ ಬಲೆಯನ್ನು ಹಾಕುತ್ತಿದ್ದುದನ್ನು ತೆಗೆಯಲು ಹೇಳಿದ ಅನಂತರ ಪೇಟೆಯಲ್ಲಿ ಹಾಕಲಾದ ಬಲೆಯನ್ನು ತೆಗೆಯಲಾಗಿದೆ.