Advertisement

ಮಿಶ್ರಬೆಳೆ ಬೇಸಾಯದಿಂದ ಅಧಿಕ ಲಾಭ

05:16 PM May 28, 2023 | Team Udayavani |

ಗೌರಿಬಿದನೂರು: ಆಸಕ್ತಿ, ಶ್ರಮ, ಶ್ರದ್ಧೆ ಇದ್ದರೆ ಕೃಷಿಯಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದ್ದಕ್ಕೆ ಅಗ್ರಹಾರ ಸುರೇಶ್‌ ಉತ್ತಮ ನಿದರ್ಶನ. ಮೊದಲಿ ನಿಂದಲೂ ಕೃಷಿಯನ್ನೇ ತನ್ನ ಪೂರ್ಣ ಪ್ರಮಾಣದ ಕಸುಬನ್ನಾಗಿಸಿಕೊಂಡು ಕೃಷಿಯಲ್ಲಿ ಚೆನ್ನಾಗಿ ಪಳಗಿರುವ ಸುರೇಶ್‌, ತಮ್ಮ ಶಿಕ್ಷಣದ ಅವಧಿಯಲ್ಲಿಯೇ ಕೃಷಿ ಕ್ಷೇತ್ರ ಆಯ್ದುಕೊಂಡರು.

Advertisement

ಲಾಭದಾಯಕ: ತಂದೆಯಿಂದ ಬಂದ ಎರಡು ಎಕರೆ ಜಮೀನಿನಲ್ಲಿ ಯಾವುದೇ ರಾಸಾಯನಿಕ ಹಾಗೂ ಕೀಟನಾಶಕಗಳನ್ನು ಬಳಸದೇ ಮಿಶ್ರಬೆಳೆ ಬೇಸಾಯವನ್ನು ರಕ್ತಗತ ಮಾಡಿಕೊಂಡಿದ್ದು, ಯಾವುದೇ ನಷ್ಟವಿಲ್ಲದೇ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕಚೇರಿ ಬಾಗಿಲಿಗೆ ಅಲೆಯದೇ ವಿವಿಧ ಮಿಶ್ರ ಬೆಳೆ ಬೆಳೆಯುತ್ತಾ ರೈತರಿಗೆ ಮಾರ್ಗದರ್ಶಕರಾಗಿಯೂ ಲಾಭದಾಯಕ ಸಹಜ ಸಾವಯವ ಕೃಷಿಯನ್ನು ಮಾಡಿ ಲಾಭ ಗಳಿಸುತ್ತಿದ್ದಾರೆ.

ಉಪಬೆಳೆಗಳು: ರಾಸಾಯನಿಕಗಳ ಬಳಕೆಯಿಂದ ಭೂಮಿಯ ಫ‌ಲವತ್ತತೆಯೂ ಹಾಳಾಗುತ್ತದೆ ಎಂದು ಅರಿತ ಇವರು, ಸಾವಯವ ಪದ್ಧತಿಯಲ್ಲಿ ಎಕರೆ ಜಮೀನಿನಲ್ಲಿ ಅಡಕೆ, ತೆಂಗು ಬೆಳೆ ಬೆಳೆದಿದ್ದು, ಅದು ಈಗ ಫ‌ಸಲು ಕೊಡುತ್ತಿದೆ. ಅದರಲ್ಲಿಯೇ ಉಪಬೆಳೆಗಳಾಗಿ ಕಾಳುಮೆಣಸು ಬಳ್ಳಿ, ನಿಂಬೆ ಗಿಡ, ಚಿಕ್ಕು, ಮಾವಿನ ಹಣ್ಣಿನ ಮರಗಳು,(ಕಾರ್ಡಿಮೆಮ್‌) ಏಲಕ್ಕಿ, ಸೇಬು, ಮೋಸಂಬಿ, ಜಮ್ಮುನೇರಳೆ, ಕಿತ್ತಳೆ ಸ್ಟಾರ್‌ ಫ್ರೂಟ್‌, ಬಟರ್‌ ಫ್ರೂಟ್‌, ವಿವಿಧ ಜಾತಿಯ ಹಲಸಿನ ಮರ, ವಿವಿಧ ರೀತಿಯ ತರಕಾರಿ, 3 ಜಾತಿಯ ಗೆಣಸು, ಮರಗೆಣಸು, ಸುಗಂಧರಾಜ ಹೂವಿನ ತೋಟ ಬೆಳೆಸಿದ್ದಾರೆ. ಸುರೇಶ್‌ ಅವರ ಸತತ ಶ್ರಮ, ವಿಶೇಷ ಆಸಕ್ತಿಯಿಂದಾಗಿ ಈ ಎಲ್ಲವೂ ಸಾಧ್ಯವಾಗಿದೆ. ಎಲ್ಲದರಿಂದಲೂ ವರ್ಷಪೂರ್ತಿ ಆದಾಯ ಬರುವುದರಿಂದ ಅವರ ಶ್ರಮವೂ ಸಾರ್ಥಕವಾಗಿದೆ. ಈ ಮೂಲಕ ಸುತ್ತಮುತ್ತಲಿನ ಜನರ ಗಮನ ಸೆಳೆದಿದ್ದಾರೆ. ಉತ್ತಮ ಆದಾಯ: ಅಡಕೆ ಇತರ ಬೆಳೆಗಳಿಂದ ವರ್ಷಕ್ಕೆ 5 ಲಕ್ಷದಿಂದ 6 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಮುಂದಿನ ಯೋಜನೆಗಳು: ನೀರಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಕೊಳವೆಬಾವಿ ಕೊರೆಯಿಸಿದ್ದಾರೆ. ಇವರ ಕೃಷಿ ಪ್ರಗತಿಯನ್ನು ಕಂಡ ಜನರು ಅವರ ಬಳಿ ಬಂದು ಸಲಹೆ ಪಡೆಯುತ್ತಿದ್ದಾರೆ.

ಮಿಶ್ರಬೆಳೆ ಲಾಭದಾಯಕ: ಆರಂಭದಲ್ಲಿ ಕೃಷಿ ಕ್ಷೇತ್ರದಲ್ಲಿ ಪೂರಕ ಮಾಹಿತಿ ಇಲ್ಲದೆ ನಷ್ಟ ಅನುಭವಿಸಬೇಕಾಗುತ್ತದೆ ಸಾವಯವ ಪದ್ಧತಿಯಲ್ಲಿ ಬೆಳೆಯುವುದು ಸ್ವಲ್ಪ ವಿಳಂಬವಾದರೂ ಲಾಭದ ಹಾದಿ ಕಾಣುವಂತಾಯಿತು. ಜನರು ಏಕಬೆಳೆಗೆ ಸೀಮಿತವಾಗದೆ ಮಿಶ್ರಬೆಳೆಯಲ್ಲಿ ತೊಡಗಿಕೊಂಡಾಗ ಯಶಸ್ಸು ಕಾಣಬಹುದು ಎನ್ನುತ್ತಾರೆ ಅಗ್ರಹಾರ ಹೊಸಳ್ಳಿ ಸುರೇಶ್‌. ಸಹಜ ಸ್ವಾಭಾವಿಕ ಹಾಗೂ ಸಾವಯವ ಮಿಶ್ರಬೇಸಾಯ ಮಾಡಲು ಆಸಕ್ತಿ ಇರುವವರು ನನ್ನಿಂದ ಉಚಿತ ಸಲಹೆ ಪಡೆಯಬಹುದು ಎನ್ನುವ ಅವರು, ಯಾವುದೇ ಔಷಧಿ ಬಳಸದ ಸಹಜವಾಗಿ ಹಣ್ಣಾಗುವ ಮಲ್ಲಿಕಾ ಮಾವಿನ ಹಣ್ಣು, ವಿವಿಧ ಬಗೆಯ ಕೆಂಪು ಹಲಸಿನ ಹಣ್ಣುಗಳನ್ನು ಕೊಳ್ಳಲು ಅವರನ್ನು ಸಂಪರ್ಕಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next