Advertisement

ವಿಶೇಷ ಮಕ್ಕಳಿಂದ ಉನ್ನತ ಸಾಧನೆ ಸಾಧ್ಯ

11:28 AM Jul 12, 2017 | Team Udayavani |

ದೊಡ್ಡಬಳ್ಳಾಪುರ: ವಿಶೇಷ ಅವಶ್ಯಕತೆ ಇರುವ ಮಕ್ಕಳು ಸಹ ಉನ್ನತ ಸಾಧನೆ ಮಾಡಬಲ್ಲವರಾಗಿದ್ದಾರೆ. ಆದರೆ, ಇವರಿಗೆ ಇತರೆ ಮಕ್ಕಳಿಗಿಂತಲೂ ಹೆಚ್ಚಿನ ಸಹಕಾರ ಹಾಗೂ ಸೌಲಭ್ಯಗಳನ್ನು ಪೋಷಕರು ಹಾಗೂ ಸಮುದಾಯದಿಂದ ದೊರೆಯಬೇಕಾಗಿದೆ ಎಂದು ಮಹಿಳಾ ತಜ್ಞ ವೈದ್ಯೆ ಡಾ.ಆರ್‌.ಇಂದಿರಾ ಹೇಳಿದರು.

Advertisement

ನಗರದ ಕಮಲಾದೇವಿ ಚಟ್ಟೋಪಾಧ್ಯಾಯ ಮಹಿಳಾ ಚಿಂತನ ವೇದಿಕೆ ವತಿಯಿಂದ 2016ನೇ ಸಾಲಿನ ರಾಜ್ಯ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ ಪಡೆದಿರುವ “21ನೇ ಕ್ರೋಮೋಜೋಮ್‌ ಮತ್ತು ಇತರೆ ಕಥನಗಳು’ ಕೃತಿಯ ಲೇಖಕಿ ಚಂಪ ಜೈಪ್ರಕಾಶ್‌ ಅವರ ಅಭಿನಂದನಾ ಸಮರಂಭ ಹಾಗೂ ಪುಸ್ತಕ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು.

ಗರ್ಭಿಣಿಯರು ಶಾಂತಿಯಿಂದ ಇರಲು ಹಾಗೂ ಪೌಷ್ಟಿಕ ಆಹಾರ ಸೇವೆನೆ ಕಡೆಗೆ ಪ್ರಥಮ ಆದ್ಯತೆ ನೀಡಬೇಕು. ಇವತ್ತಿನ ಒತ್ತಡದ ಆಧುನಿಕ ಬದುಕಿನಲ್ಲಿ ಯಾವ ವಯಸ್ಸಿನಲ್ಲಿ ವಿವಾಹ ಆಗುವ ಮಹಿಳೆಗೆ ಹುಟ್ಟುವ ಮಕ್ಕಳಿಗೂ 21ನೇ ಕ್ರೋಮೋಜೋಮ್‌ ಸಮಸ್ಯೆ ಎದುರಾಗಿ ಮಕ್ಕಳು ಬುದ್ಧಿಮಾಂಧ್ಯ ಅಥವಾ ಇತರೆ ನ್ಯೂನತೆಗೆ ಒಳಗಾಗಬಹುದು. ಇಂತಹ ಮಕ್ಕಳನ್ನು ಪೋಷಣೆ ಮಾಡಲು ತಂದೆ, ತಾಯಿಗೆ ಮಾನಸಿಕವಾಗಿ ಇತರರು ಬೆಂಬಲ ನೀಡಬೇಕು ಎಂದು ಹೇಳಿದರು.

ವಿಶೇಷ ಅವಶ್ಯಕತೆ ಇರುವ ಮಕ್ಕಳನ್ನು ಸಾಕುವುದು ತಮ್ಮ ಕರ್ತವ್ಯ ಎಂದು ಭಾವಿಸಬೇಕು. ಇದನ್ನು ಹೊರೆಯೆಂದು ಭಾವಿಸಿ ಮನೆಯಲ್ಲಿಯೇ ಕೂಡಿಹಾಕಿಕೊಂಡು ಸಾಕಲು ಮುಂದಾದರೆ ಅಂತಹ ಮಗು ಮತ್ತಷ್ಟು ಮಾನಸಿಕವಾಗಿ ಕುಂಠಿತವಾಗುತ್ತದೆ. ವಿಶೇಷ ಅವಶ್ಯಕತೆ ಇರುವ ಮಕ್ಕಳ ಪೋಷಕರು ನೆರೆಹೊರೆಯವರ ಮುಂದೆ ಇಂತಹ ಮಗುವನ್ನು ಕರೆದುಕೊಂಡು ಹೋಗುವುದು ಹೇಗೆ ಎನ್ನುವ ಹಿಂಜರಿಕೆಯಿಂದ ಪೋಷಕರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟರೆ ಅಂತಹ ಮಗುವಿನ ಮಾನಸಿಕ ಬೆಳವಣಿಗೆ ಮತ್ತಷ್ಟು ಹಾಳಾಗುತ್ತದೆ ಎಂದರು.

ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿ ಮಾತನಾಡಿದ ಕನ್ನಡ ಉಪನ್ಯಾಸಕ ಪಿ.ಗೋವಿಂದರಾಜು, ಕನ್ನಡ ಸಾಹಿತ್ಯ ಲೋಕದಲ್ಲಿ ವಿಶೇಷ ಅವಶ್ಯಕತೆ ಇರುವ ಮಕ್ಕಳ  ತೊಂದರೆ, ಅವರನ್ನು ಸಾಕಿ ಸಲಹುವ ವಿವರಗಳನ್ನು ಒಳಗೊಂಡಿರುವ ಕೃತಿಗಳಲ್ಲಿ ಇದು ಪ್ರಥಮವಾಗಿದೆ.

Advertisement

ವಿಶೇಷ ಅವಶ್ಯಕ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸದೆ ಮೂಢನಂಬಿಕೆಯಲ್ಲಿಯೇ ಕಾಲಹರಣ ಮಾಡುತ್ತಾರೆ. ಇದರಿಂದಾಗಿ ಗುಣಮುಖ ಆಗುವಂತಹ ಸಾಧ್ಯತೆ ಇರುವ ಮಕ್ಕಳು ಸಹ ಸೂಕ್ತ ಚಿಕಿತ್ಸೆ ದೊರೆಯದೆ ಬುದ್ಧಿಮಾಂದ್ಯ ಮಕ್ಕಳಾಗಿಯೇ ಉಳಿಯುವಂತಾಗುತ್ತಿದೆ. ಥಾಮಸ್‌ಅಲ್ವಾಎಡಿಸನ್‌ ಅವರ ತಾಯಿಯಂತೆ ಮಕ್ಕಳನ್ನು ಸಾಕಾಣಿಕೆ ಮಾಡುವ ಪೋಷಕರ ಅವಶ್ಯಕತೆ ಇದೆ ಎಂದರು.

21ನೇ ಕ್ರೋಮೋಜೋಮ್‌ ಮತ್ತು ಇತರೆ ಕಥನಗಳು ಕೃತಿಯ ಲೇಖಕಿ ಚಂಪ ಜೈಪ್ರಕಾಶ್‌ ಮಾತನಾಡಿ, ಮಹಾರಾಷ್ಟ್ರ, ತಮಿಳುನಾಡು ಮತ್ತಿತರೆ ಕಡೆಗಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ತನ್ನ ವೃತ್ತಿ ಬದುಕಿನಲ್ಲಿ ಕಂಡುಕೊಂಡ ಸತ್ಯಗಳನ್ನು ಬರಹದ ಮೂಲಕ ಪೋಷಕರಿಗೆ ಅನುಕೂಲವಾಗುವ ರೀತಿಯಲ್ಲಿ ತಿಳಿಸಿದ್ದೇನೆ. ವಿಶೇಷ ಅವಶ್ಯಕತೆ ಇರುವ ತಮ್ಮ ಮಕ್ಕಳು ಯಶಸ್ವಿಯಾಗುವತ್ತ ಮುನ್ನಡೆಯುವಂತೆ ಮಾಡಲು ಈ ಪುಸ್ತಕ ಸಹಕಾರಿಗಲಿದೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿಜಾnನ ಪರಿಷತ್‌ ರಾಜ್ಯ ಉಪಾಧ್ಯಕ್ಷ ಡಾ.ಹುಲಿಕಲ್‌ ನಟರಾಜ್‌ ವಹಿಸಿದ್ದರು. ಕಮಲಾದೇವಿ ಚಟ್ಟೋಪಾಧ್ಯಾಯ ಮಹಿಳಾ ಚಿಂತನ ವೇದಿಕೆ ಸಂಚಾಲಕಿ ಕೆ.ಎಸ್‌.ಪ್ರಭಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next