Advertisement

ಆಯುಷ್ ಆರೋಗ್ಯ ಸೇವೆಗಳ ಉನ್ನತಿಗೆ ಉನ್ನತ ಮಟ್ಟದ ಸಭೆ: ಅಶ್ವತ್ಥನಾರಾಯಣ

03:02 PM Jul 31, 2022 | Team Udayavani |

ಬೆಂಗಳೂರು: ಆಯುಷ್ ವೈದ್ಯಕೀಯ ಪದ್ಧತಿ ಸೇರಿದಂತೆ ಹಲವು ದೇಶಿಯ ಧ್ಯಾನ ಪರಂಪರೆಗಳ ಬೆಳವಣಿಗೆಗೆ ಸಂಬಂಧಿಸಿದಂತೆ ಸದ್ಯದಲ್ಲೇ ಸಂಬಂಧಿಸಿದ ಅಧಿಕಾರಿಗಳ ಉನ್ನತ ಮಟ್ಟದ ಸಭೆ ಕರೆಯಲಾಗುವುದು ಎಂದು ಐಟಿ ಮತ್ತು ಬಿಟಿ ಸಚಿವ ಡಾಕ್ಟರ್ ಸಿ ಎನ್ ಅಶ್ವತ ನಾರಾಯಣ ಹೇಳಿದ್ದಾರೆ.

Advertisement

ನಗರದಲ್ಲಿ ಏರ್ಪಡಿಸಿದ್ದ ಜಿಜ್ಞಾಸ ರಾಷ್ಟ್ರೀಯ ಆರೋಗ್ಯ ಉತ್ಸವದಲ್ಲಿ ಭಾನುವಾರ ಅವರು ಪಾಲ್ಗೊಂಡು ಮಾತನಾಡಿದರು.

ಇಂದು ಕೃತಕ ಉಪಗ್ರಹ ತಂತ್ರಜ್ಞಾನ ಅಗಾಧವಾಗಿ ಬೆಳೆದಿದೆ. ಇದನ್ನು ಜನಸಮುದಾಯಗಳ ಒಳಿತಿಗೆ ಬಳಸಿಕೊಂಡು ನಾವು ಮುನ್ನಡೆಯಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಆಳುವ ಸರಕಾರಗಳಿಗೆ ಪ್ರಬಲ ಇಚ್ಛಾಶಕ್ತಿ ಇದ್ದಾಗ ಎಂತಹ ಪರಿವರ್ತನೆಯನ್ನು ಬೇಕಾದರೂ ತರಲು ಸಾಧ್ಯವಿದೆ. ರಾಜ್ಯ ಮತ್ತು ಕೇಂದ್ರಗಳಲ್ಲಿರುವ ಬಿಜೆಪಿ ಸರ್ಕಾರಗಳು ತಮ್ಮ ಸಕಾರಾತ್ಮಕ ಮನೋಭಾವದೊಂದಿಗೆ ಇದನ್ನು ಮಾಡಿ ತೋರಿಸಿವೆ ಎಂದರು.

ಆಧುನಿಕ ಜೀವನಶೈಲಿಯಿಂದ ಹಲವು ಬಗೆಯ ಸಂಕೀರ್ಣ ಆರೋಗ್ಯ ಸಮಸ್ಯೆಗಳು ಇಂದು ನಮ್ಮ ಸಮಾಜವನ್ನು ಕಾಡುತ್ತಿವೆ. ಹೀಗಿರುವಾಗ ಕೈಗೆಟಕುವ ದರದಲ್ಲಿ ಮತ್ತು ಮನೆ ಬಾಗಿಲಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಗಳು ಸಿಗುವಂತಹ ವಾತಾವರಣವನ್ನು ನಿರ್ಮಿಸಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

Advertisement

ಪ್ರಯೋಗಾಲಯಗಳಲ್ಲಿ ಮತ್ತು ವಿಜ್ಞಾನದ ಬಲದಿಂದ ರೂಪಗೊಳ್ಳುವ ಚಿಕಿತ್ಸೆಗಳು ಸಾಮಾನ್ಯರಿಗೆ ತಲುಪಬೇಕು. ಇದನ್ನು ನಮ್ಮ ಸರಕಾರ ಮಾಡಿ ತೋರಿಸಲಿದೆ. ಈ ಮೂಲಕ ಆರೋಗ್ಯ ಕ್ಷೇತ್ರದಲ್ಲೂ ಕರ್ನಾಟಕವು ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂದು ಅವರು ಭರವಸೆ ನೀಡಿದರು.

ಆಯುಷ್ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆದಾರರು ಬಂಡವಾಳ ತೊಡಗಿಸಬೇಕು. ಇದಕ್ಕೆ ಭಾರಿ ದೊಡ್ಡ ಮಾರುಕಟ್ಟೆ ಇದ್ದು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಸಮಾಜದ ಸಬಲೀಕರಣವು ಕೂಡ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಜಿಜ್ಞಾಸ ಮುಖ್ಯಸ್ಥ ಡಾ ಅಲ್ಲಮ ಪ್ರಭು ಮತ್ತು ಉನ್ನತ ಅಧಿಕಾರಿ ನಿರಂಜನ ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next