ಮಂಗಳೂರು: “ಸಾಲ ಪಡೆದ ಹಣವನ್ನು ಪಾವತಿ ಮಾಡಿದ್ದರೂ ಅಧಿಕ ಬಡ್ಡಿ ಹಣ ನೀಡುವಂತೆ ಒತ್ತಾಯಿಸಿ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದರಿಂದ ನನ್ನ ಪತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕಂಕನಾಡಿ ಗರೋಡಿ ಬಳಿಯ ಸುಜಾತಾ ಅವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತಿ ತಾರಾನಾಥ 2016ರ ಆಗಸ್ಟ್‌ನಲ್ಲಿ ಹಣದ ಅಡಚಣೆಗಾಗಿ ಪಂಪ್‌ವೆಲ…ನಲ್ಲಿರುವ ಬಜರಂಗದಳ ಸಂಘಟನೆಯ ಪ್ರಮೋದ್ ಪಂಪ್‌ವೆಲ್ ಬಳಿ ತನ್ನ ಕಾರನ್ನು ಅಡವು ಇರಿಸಿ 2.50 ಲಕ್ಷ ರೂ. ಸಾಲ ಪಡೆದಿದ್ದರು. ಇದಕ್ಕೆ ತಿಂಗಳಿಗೆ 25,000 ರೂ. ಬಡ್ಡಿಯನ್ನು ನೀಡುತ್ತಾ 12 ತಿಂಗಳ ತನಕ 3 ಲಕ್ಷ ರೂ. ವರೆಗೆ ಬಡ್ಡಿ ರೂಪದಲ್ಲಿ ಸಂದಾಯ ಮಾಡಿದ್ದಾರೆ.
ಅನಂತರದ ದಿನಗಳಲ್ಲಿ ಪತಿಯ ಅನುಮತಿ ಇಲ್ಲದೆ ಕಾರನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಆ ಬಳಿಕ ಕೂಡಾ ಅಧಿಕ ಬಡ್ಡಿ ನೀಡುವಂತೆ ರೌಡಿಗಳನ್ನು ಮನೆಗೆ ಕಳುಹಿಸಿ ಬೆದರಿಕೆ ಹಾಕಿರುವುದಲ್ಲದೇ ಈ ಬಗ್ಗೆ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾನೆ. ಅನಂತರ ನನ್ನ ಪುತ್ರಿಗೂ ತೊಂದರೆ ಕೊಡುತ್ತಿದ್ದನು.
ಮೊಬೈಲ… ಮೂಲಕವೂ ಸಂದೇಶಗಳನ್ನು ಕಳುಹಿಸಿ ಬಡ್ಡಿ ಹಣ ನೀಡುವಂತೆ ಪೀಡಿಸುತ್ತಿದ್ದನು. ಇದರಿಂದ ಪತಿ ತಾರಾನಾಥ ಅವರು ಮನನೊಂದು ನ. 25ರಂದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಎಂದು ಸುಜಾತಾ ದೂರಿನಲ್ಲಿ ಆರೋಪಿಸಿದ್ದಾರೆ. ನನ್ನ ಗಂಡನ ಆತ್ಮಹತ್ಯೆಗೆ ಪ್ರಮೋದ್ ಪಂಪ್‌ವೆಲ… ಮತ್ತು ಆತನ ಸಹಚರರೇ ಕಾರಣ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ