Advertisement

ಸಮಗ್ರ ಕೃಷಿ ಪದ್ಧತಿಯಿಂದ ಅಧಿಕ ಆದಾಯ

05:24 PM Jul 20, 2019 | Team Udayavani |

ಮಾಗಡಿ: ರೈತರು ಸಮಗ್ರ ಕೃಷಿ ಪದ್ಧತಿಯಿಂದ ಅಧಿಕ ಆದಾಯ ಗಳಿಸಬಹುದು ಎಂದು ನೇತೇನಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯ ಗಂಗಾಧರ್‌ ತಿಳಿಸಿದರು.

Advertisement

ತಾಲೂಕಿನ ನೇತೇನಹಳ್ಳಿ ಗ್ರಾಪಂ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ರೈತರು ಸರ್ಕಾರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನರೇಗಾ ಯೋಜನೆ ರೈತರಿಗೆ ವರದಾನ: ತಾಪಂ ಸದಸ್ಯ ವೆಂಕಟೇಶ್‌ ಮಾತನಾಡಿ, ನರೇಗಾ ಯೋಜನೆ ರೈತರಿಗೆ ವರದಾನವಾಗಿದೆ. ಆದರೆ, ಹೆಚ್ಚು ಮಂದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನರೇಗಾ ಯೋಜನೆ ಹಳ್ಳ ಹಿಡಿಯುವ ಹಂತಕ್ಕೆ ತಲುಪಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ನರೇಗಾ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.

ಇದೇ ವೇಳೆ ವಿವಿಧೆಡೆ ಕಾಮಗಾರಿಗಳ ವಿವರಗಳನ್ನು ಪಿಡಿಒ ಎಸ್‌.ವಿ. ಶಿವಕುಮಾರ್‌ ಅವರಿಂದ ಪಡೆದುಕೊಂಡರು.

ರೇಷ್ಮೆಯಿಂದ ರೈತರ ಬದುಕು ಹಸನು: ರೇಷ್ಮೆ ಸಹಾಯಕ ನಿರ್ದೇಶಕ ಕೃಷ್ಣಬಾಬು ಮಾತನಾಡಿ, ರೇಷ್ಮೆ ಬೆಳೆಯಿಂದ ರೈತರ ಬದುಕು ಹಸನಾಗುತ್ತದೆ. ರೇಷ್ಮೆ ಬೆಳೆ ಬೇಸಾಯ ಮತ್ತು ರೇಷ್ಮೆ ಹುಳು ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ ಸಿಗಲಿದೆ. ಇದರಲ್ಲೂ ಹನಿ ನೀರಾವರಿ ಯೋಜನೆ ಅಳವಡಿಸಿಕೊಂಡರೆ ಶೇ.90ರಷ್ಟು ಸಹಾಯ ಧನ ಸಿಗಲಿದೆ ಎಂದು ತಿಳಿಸಿದರು.

Advertisement

ಎಲ್ಲಾ ಉತ್ಪನ್ನಕ್ಕೂ ಅವಕಾಶ: ತೋಟಗಾರಿಕೆ ಇಲಾಖೆಯ ಚಂದ್ರಿಕಾ ಮಾತನಾಡಿ, ಹೂ, ಸೊಪ್ಪು, ತಕರಾರಿ, ಮಾವು, ತೆಂಗು, ಸಪೋಟ, ಬಾಳೆ, ಸೀಬೆ, ನುಗ್ಗೆ, ಕರಿಬೇವು ಜೊತೆಗೆ ಹೈನುಗಾರಿಕೆ, ರೇಷ್ಮೆ, ಮೀನುಗಾರಿಕೆ ಎಲ್ಲವನ್ನು ರೈತರು ಉತ್ಪನ್ನ ಮಾಡುವ ಅವಕಾಶಗಳಿವೆ. ಅಲ್ಲದೆ, ನರೇಗಾ ಸಹ ನಮ್ಮ ಬೆಳೆಗಳಿಗೆ ಕೂಲಿಯನ್ನು ಪಡೆಯುವ ಅವಕಾಶಗಳು ಹೆಚ್ಚಿವೆ. ಸದ್ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆದು, ಹೆಚ್ಚು ಆದಾಯ ಗಳಿಸಬೇಕು ಎಂದರು.

ಹನಿ ನೀರಾವರಿ ಯೋಜನೆ ಪರಿಣಾಮಕಾರಿ: ಗ್ರಾಮ ಪಂಚಾಯ್ತಿ ಪಿಡಿಒ ಎಸ್‌.ವಿ.ಶಿವಕುಮಾರ್‌ ಮಾತನಾಡಿ, ಶೇ.90ರ ಸಹಾಯಧನದಲ್ಲಿ ಹನಿನೀರಾವರಿ ಯೋಜನೆ ನಿಜಕ್ಕೂ ಕೃಷಿ, ತೋಟಗಾ ರಿಕೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊ ಳ್ಳುವುದು ಪ್ರತಿಯೊಬ್ಬ ರೈತರ ಕರ್ತವ್ಯವಾಗಬೇಕು. ಎಲ್ಲದಕ್ಕೂ ಉದ್ಯೋಗ ಚೀಟಿ ಕಡ್ಡಾಯವಾಗಿರಬೇಕು ಎಂದು ವಿವಿಧ ಇಲಾಖೆಗಳ ಯೋಜನೆಗಳ ಪಟ್ಟಿಯನ್ನು ತಿಳಿಸಿದರು. ಸಾಮಾಜಿಕ ಲೆಕ್ಕ ಪರಿಶೋಧಕ ನಾಗರಾಜು, ನೇತೇನಹಳ್ಳಿ ಗ್ರಾಪಂ ಸದಸ್ಯರಾದ ಪ್ರಕಾಶ್‌, ಪಿ.ವಿ.ಶಾಂತರಾಜು, ಶಾಂತಮ್ಮ, ಬಸವರಾಜು, ನಾಗರಾಜು, ಲಕ್ಷ್ಮಮ್ಮ, ಸುಧಾ, ಸರಸ್ವತಿ, ಗಂಗಾಧರಯ್ಯ, ಮಂಜುನಾಥ್‌, ಕಾರ್ಯದರ್ಶಿ ಕೆ.ಹನುಮಂತಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next