Advertisement
ನಗರದ ಜಿಲ್ಲಾ ಪಂಚಾಯತ್‌ನಲ್ಲಿ ಮೊದಲ ಬಾರಿಗೆ ಇತ್ತೀ ಚೆಗೆ ಮೀನಾಕ್ಷಿ ಶಾಂತಿಗೋಡು ಅವರ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ನಡೆದಿದ್ದು, ಅನೇಕ ವಿಚಾರಗಳ ಬಗೆಗೆ ಚರ್ಚೆ ನಡೆಸಲಾಗಿತ್ತು.
ಜಿಲ್ಲಾ ಪಂಚಾಯತ್ ಸಿಇಒ ಡಾ| ಎಂ. ಆರ್. ರವಿ ಮಾತನಾಡಿ, ಸದಸ್ಯರಿಗೆ ಯೋಜನೆಯನ್ನು ಅವಲೋಕಿಸುವ ಅಧಿಕಾರವಿದೆ. ಯೋಜನೆಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲು ಅಧಿಕಾರವಿದೆಯಾದರೂ, ಕ್ರಿಯಾ ಯೋಜನೆಯಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿಸಿದರು. 2017ರ ಜನವರಿ 13ರಂದು ರಾಜ್ಯ ಸರಕಾರವು ರಾಜ್ಯ ಪತ್ರದಲ್ಲಿ ಸಮಿತಿ ರಚನೆಗೆ ಪ್ರಕಟನೆ ನೀಡಿತ್ತು. ಇದಾದ ಮೂರು ತಿಂಗಳಿನಲ್ಲಿ ಸಮಿತಿ ರಚನೆ ಮಾಡಬೇಕಿತ್ತು. ಅನಂತರ ಸಭೆಯನ್ನು ಏರ್ಪಡಿಸಬೇಕಿತ್ತು. ಸಮಗ್ರ ಮಾಹಿತಿ ಕ್ರೋಡೀಕರಣದ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಯಿತು. ಆದರೂ ಉಳಿದ ಜಿಲ್ಲೆಗೆ ಹೋಲಿಸಿದರೆ ನಮ್ಮಲ್ಲಿ ಮೊದಲ ಬಾರಿಗೆ ಮೊದಲ ಸಭೆ ನಡೆದಿದೆ ಎಂದರು.
Related Articles
Advertisement
ಗೊಂದಲಇದೇ ಮೊದಲ ಬಾರಿ ನಿಗದಿ ಗೊಂಡಿರುವ ಸಭೆಯು ಗೊಂದಲದ ಗೂಡಾಗಿತ್ತು. ಸಭೆಯಲ್ಲಿ ಕಾರ್ಯ ಸೂಚಿಗಳು ಅನೇಕ ಸದಸ್ಯರಿಗೆ ತಲುಪದ ಕಾರಣ ಸ್ವಲ್ಪ ಹೊತ್ತು ಗೊಂದಲ ಮೂಡಿತ್ತು. ಸಭೆಯಲ್ಲಿ ಅಧಿಕಾರದ ವ್ಯಾಪ್ತಿ ಸಹಿತ ಅನೇಕ ವಿಚಾರಗಳ ಬಗ್ಗೆ ಪ್ರಶ್ನೆಗಳು ಕೇಳಿ ಬಂದವು. ಸಭೆಯಲ್ಲಿ ಜಿ. ಪಂ, ತಾ.ಪಂ, ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು, ಜಿ.ಪಂ. ಹಾಗೂ ತಾ.ಪಂ. ನಿಂದ ಆಯ್ಕೆಯಾದ ಸದಸ್ಯರು, ಪಾಲಿಕೆ, ಪುರಸಭೆ, ನಗರಸಭೆ ಮತ್ತು ಪ.ಪಂ.ಗಳಿಂದ ಆಯ್ಕೆಯಾದ ಸದಸ್ಯರು ಭಾಗವಹಿಸಿದ್ದರು.