Advertisement

ದಾಸ್ತಾನು ಅವಕಾಶ ಕೋರಿ ಹೈ ಮೊರೆ

01:00 PM Oct 25, 2017 | Team Udayavani |

ಬೆಂಗಳೂರು: ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ 500 ಕ್ವಿಂಟಾಲ್‌ ಕೃಷಿ ಉತ್ಪನ್ನಗಳನ್ನು ಶೇಖರಸಿ ಇಟ್ಟುಕೊಳ್ಳಲು ಅವಕಾಶ ನೀಡುವಂತೆ ರಾಜ್ಯಸರ್ಕಾರಕ್ಕೆ  ನಿರ್ದೇಶಿಸುವಂತೆ ಕೋರಿ ನಾಲ್ವರು ವ್ಯಾಪಾರಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಈ ಕುರಿತು ಬೆಂಗಳೂರಿನ ವ್ಯಾಪಾರಿಗಳಾದ ಎಚ್‌.ಕೆ ರಂಗನಾಥ್‌, ಫಾರೂಕ್‌ ಇಬ್ರಾಹಿಂ ಸೇರಿದಂತೆ ನಾಲ್ವರು ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್‌ ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯ ಪೀಠ, ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಾದ ರಾಜ್ಯಸಹಕಾರ ಇಲಾಖೆ,ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಎಪಿಎಂಸಿ  ನಿರ್ದೇಶಕರಿಗೆ ನೋಟಿಸ್‌ ಜಾರಿಗೊಳಿಸಿ ನವೆಂಬರ್‌ 21ಕ್ಕೆ ವಿಚಾರಣೆ ಮುಂದೂಡಿದೆ.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯಿದೆ ಅನ್ವಯ 2014ರಲ್ಲಿ ರಾಜ್ಯಸರ್ಕಾರ ಚಿಲ್ಲರೆ ವ್ಯಾಪಾರಿಗಳಿಗೆ ಕೇವಲ 100 ಕ್ವಿಂಟಾಲ್‌ ಕೃಷಿ ಉತ್ಪನ್ನಗಳನ್ನು ( ಅಕ್ಕಿ,ಗೋದಿ ಇನ್ನಿತರೆ) ಮಾರಾಟ ಮಾಡುವಂತೆ ಆದೇಶಿಸಿ ಅಧಿಸೂಚನೆ ಹೊರಡಿಸಿದೆ. ಆದರೆ, ಹೋಲ್‌ಸೇಲ್‌ ಹಾಗೂ ಸೂಪರ್‌ ಮಾರ್ಕೆಟ್‌ಗಳ ವ್ಯಾಪಾರಿಗಳಿಗೆ ಈ ನಿರ್ಬಂಧವಿಲ್ಲ.

ಹೀಗಾಗಿ ಆರ್ಥಿಕವಾಗಿ ಅಷ್ಟೇನು ಸಬಲರಾಗಿರದ ಸಣ್ಣವ್ಯಾಪಾರಿಗಳಿಗೆ ಇದರಿಂದ ತೊಂದರೆಯುಂಟಾಗಲಿದೆ. ಹೀಗಾಗಿ ಸರ್ಕಾರದ ಅಧಿಸೂಚನೆ ರದ್ದುಪಡಿಸಿ ಚಿಲ್ಲರೆ ಮಾರಾಟಗಾರರಿಗೂ 500 ಕ್ವಿಂಟಾಲ್‌ ಶೇಖರಣೆ ಮಾಡಿಕೊಂಡು ಮಾರಾಟ ಮಾಡಲು ಅವಕಾಶ ಕಲ್ಪಿಸುವಂತೆ ನಿರ್ದೇಶನ  ನೀಡುವಂತೆ ಅರ್ಜಿದಾರರು ಕೋರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next