Advertisement

Supreme court; ಸ್ತ್ರೀಗೆ ಹತೋಟಿ ಇರಬೇಕೆಂಬ ಹೈಕೋರ್ಟ್ ಆದೇಶಕ್ಕೆ ತಡೆ

11:12 PM Aug 20, 2024 | Team Udayavani |

ಹೊಸದಿಲ್ಲಿ: 2 ನಿಮಿಷದ ಸುಖಕ್ಕಾಗಿ ಮಹಿಳೆಯರು ಜೀವನವನ್ನು ಹಾಳು ಮಾಡಿಕೊಳ್ಳಬಾರದು, ಲೈಂಗಿಕ ಬಯಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳ­ಬೇಕು ಎಂದು ಸಲಹೆ ನೀಡಿದ್ದ ಕಲ್ಕತ್ತಾ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

Advertisement

ಕಲ್ಕತ್ತಾ ಹೈಕೋರ್ಟ್‌ ಆದೇಶ ಆಕ್ಷೇ ಪಾರ್ಹವಾಗಿದೆ ಎಂದು ಪಶ್ಚಿಮ ಬಂಗಾಳ ಸರಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಓಕಾ ಮತ್ತು ನ್ಯಾ.ಭುಯಾನ್‌ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಅಲ್ಲದೇ ಇದೇ ವೇಳೆ ತೀರ್ಪುಗಳನ್ನು ಹೇಗೆ ಬರೆಯಬೇಕು ಎಂಬುದರ ಬಗ್ಗೆಯೂ ಕೋರ್ಟ್‌ಗಳಿಗೆ ನಿರ್ದೇಶನಗಳನ್ನು ನೀಡಿದೆ. ತೀರ್ಪು ಪ್ರಕಟಿಸುವಾಗ ನ್ಯಾಯಮೂರ್ತಿಗಳು ಪ್ರವಚನ ನೀಡಬಾರದು ಎಂದಿದೆ.

ಏನಿದು ಪ್ರಕರಣ?: ಕಳೆದ ವರ್ಷ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ವೇಳೆ ಕಲ್ಕತ್ತಾ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ತೀರ್ಪು ಪ್ರಕಟಿ ಸುವ ಸಮಯದಲ್ಲಿ ಮಹಿಳೆಯರು ತಮ್ಮ ಲೈಂಗಿಕ ಬಯಕೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. 2 ನಿಮಿಷದ ಸುಖಕ್ಕಾಗಿ ಸಮಾಜದಲ್ಲಿ ಕೆಟ್ಟವರು ಎಂಬ ಪಟ್ಟ ಕಟ್ಟಿಕೊಳ್ಳಲು ಹೋಗ ಬಾರದು ಎಂದು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next