Advertisement
ನಗರದ ವ್ಯಾಪ್ತಿಯಲ್ಲಿ ರಸ್ತೆಗುಂಡಿ ಮುಚ್ಚಲು ಸರ್ಕಾರಹಾಗೂ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ರಿತುರಾಜ್ ಅವಸ್ಥಿನೇತೃತ್ವದ ವಿಭಾಗೀಯ ನ್ಯಾಯಪೀಠಪಾಲಿಕೆಯ ಕಾರ್ಯವೈಖರಿಗೆ ಕಟುಮಾತುಗಳಲ್ಲಿ ತರಾಟೆಗೆ ತೆಗೆದುಕೊಂಡಿತು.
Related Articles
Advertisement
ವಿಚಾರಣೆ ವೇಳೆಬಿಬಿಎಂಪಿ ಪರ ವಕೀಲರು ಹಾಜರಾಗಿ, ಬಿಬಿಎಂಪಿಮುಖ್ಯ ಆಯುಕ್ತರು ಪೈಥಾನ್ ಯಂತ್ರಕ್ಕೆ ಪ್ರತಿಗಂಟೆಗೆ ಎಷ್ಟು ಹಣ ಪಾವತಿಸಲಾಗುತ್ತದೆ ಎಂಬ ಬಗ್ಗೆ ವೈಯಕ್ತಿಕವಾಗಿ ಪರಿಶೀಲನೆ ನಡೆಸಿನಿರ್ಧರಿಸಲು ಉದ್ದೇಶಿಸಿದ್ದಾರೆ. ಅಲ್ಲದೆ, ಫೈಥಾನ್ ಯಂತ್ರಬಳಸಿ ಗುಂಡಿ ಮುಚ್ಚುವ ಕಾರ್ಯದ ಗುತ್ತಿಗೆ ಪಡೆದಿರುವ ಅಮೆರಿಕ್ ರೋಡ್ ಟೆಕ್ನಾಲಜೀಸ್ ಸಲ್ಯೂಷನ್ಸ್‌ಗೆ (ಎಆರ್‌ಟಿಸಿ) ಬಾಕಿ ಹಣ ಪಾವತಿಸುವುದಕ್ಕೂ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂಬ ಕೋರಿದರು. ಆ ಮನವಿ ಒಪ್ಪಿ ಜೂನ್ 6ಕ್ಕೆ ಅರ್ಜಿ ವಿಚಾರಣೆ ಮುಂದೂಡಿದನ್ಯಾಯಪೀಠ, ಅಂದು ವರದಿ ಸಲ್ಲಿಸಬೇಕು ಎಂದು ಪಾಲಿಕೆಯ ಮುಖ್ಯ ಆಯುಕ್ತರಿಗೆ ಸೂಚಿಸಿತು.
10,608 ಪೈಕಿ 4,524 ಗುಂಡಿ ಮಾತ್ರ ದುರಸ್ತಿ :
ಬೆಂಗಳೂರು: ನಗರದಲ್ಲಿನ 10,608 ಗುಂಡಿಗಳ ಪೈಕಿ ಈವರೆಗೆ ಕೇವಲ 4,524 ಗುಂಡಿಗಳನ್ನು ಮಾತ್ರ ಮುಚ್ಚಲಾಗಿದೆ. ಬಿಬಿಎಂಪಿ ಕಳೆದ 20 ದಿನಗಳಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದೆ. ಆದರೆ, ಫಿಕ್ಸ್ ಮೈಸ್ಟ್ರೀಟ್ ಆ್ಯಪ್ ಮೂಲಕ ಗುರುತಿಸಲಾದ ಗುಂಡಿಗಳಪೈಕಿ ಶೇ. 50ನ್ನು ಈವರೆಗೆ ಮುಚ್ಚಿಲ್ಲ. ಆ ಮೂಲಕಈ ಬಾರಿಯ ಮಳೆಗಾಲದಲ್ಲೂ ವಾಹನ ಸವಾರರು ರಸ್ತೆ ಗುಂಡಿಗಳಲ್ಲಿ ಮುಳುಗೇಳಬೇಕಾದ ಪರಿಸ್ಥಿತಿ ಎದುರಾಗಲಿದೆ.
ಮೇ 9ರಂದು ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಅಭಿವೃದ್ಧಿಪಡಿಸಿದ್ದ ಅಧಿಕಾರಿಗಳು ನಗರದೆಲ್ಲೆಡೆಸಮೀಕ್ಷೆ ನಡೆಸಿ ಮೇ 24ರ ವೇಳೆಗೆ 10,608 ರಸ್ತೆ ಗುಂಡಿಗಳು ಗುರುತಿಸಲಾಗಿತ್ತು. ಆ ಗುಂಡಿಗಳನ್ನೆಲ್ಲ ಮೇ ತಿಂಗಳಾಂತ್ಯದೊಳಗೆ ಮುಚ್ಚಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದರು. ಆದರೆ, ಅದಕ್ಕೆ ತಕ್ಕಂತೆ ಗುಂಡಿಗಳು ಈವರೆಗೆ ಮುಚ್ಚಿಲ್ಲ. ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ಗುರುತಿಸಲಾದ ರಸ್ತೆ ಗುಂಡಿಗಳನ್ನು ಮೊದಲ ಹಂತದಲ್ಲಿಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅದಕ್ಕೆಬೇಕಾಗುವ ವೆಟ್‌ಮಿಕ್ಸ್ ಮತ್ತು ಹಾಟ್‌ಮಿಕ್ಸ್ ಪ್ರಮಾಣವನ್ನು ವಲಯ ಮುಖ್ಯ ಎಂಜಿನಿಯರ್‌ಗೆ ಕಳುಹಿಸಬೇಕು. ವಲಯದ ಎಲ್ಲ ಭಾಗಗಳಿಂದ ಬರುವ ಮಾಹಿತಿ ಆಧರಿಸಿ ಅಗತ್ಯ ಸಾಮಗ್ರಿ ತರಿಸಿಕೊಂಡು ಗುಂಡಿ ಮುಚ್ಚಲಾಗುತ್ತಿದೆ.
ಅದರ ಜತೆಗೆ ಸಂಚಾರ ದಟ್ಟಣೆಯನ್ನು ನೋಡಿಕೊಂಡು ರಸ್ತೆ ಗುಂಡಿ ಮುಚ್ಚಬೇಕಿದೆ. ಈ ಎಲ್ಲದರಿಂದ ಗುಂಡಿಮುಚ್ಚುವ ಕಾರ್ಯ ವಿಳಂಬವಾಗುತ್ತಿದೆ. ಹೀಗಾಗಿಸದ್ಯ 4,524 ರಸ್ಯೆ ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ 6,084 ರಸ್ತೆ ಗುಂಡಿ ದುರಸ್ತಿಪಡಿಸಬೇಕಿದೆ.
ವಾರದಲ್ಲಿ ಪೂರ್ಣ: ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ ನೀಡಲಾಗಿದೆ. ಇನ್ನೊಂದುವಾರದಲ್ಲಿ ರಸ್ತೆ ಗುಂಡಿ ಮುಚ್ಚವ ಕಾರ್ಯಪೂರ್ಣಗೊಳಿಸಲಾಗುವುದು ಎಂದು ಪಾಲಿಕೆ ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ.