ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟಿನ ಬೆಂಗಳೂರು ಪೀಠದಲ್ಲಿ ಬುಧವಾರದಿಂದ (ಜ.5)ರಿಂದ ಜ.14ರ ವರೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಕಲಾಪ ನಡೆಸಲಾಗುವುದು. ಈ ಕುರಿತಂತೆ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಹೈಕೋರ್ಟ್‌ಪೀಠ ಹಾಗೂ ಎಲ್ಲ ವಿಚಾರಣ ನ್ಯಾಯಾಲಯಗಳಿಗೂ ಪ್ರತ್ಯೇಕ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ಕೇವಲ ತುರ್ತು ಪ್ರಕರಣಗಳ ವಿಚಾರಣೆಗೆ ಆದ್ಯತೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದರೆ ಹೈಕೋರ್ಟಿನ ಧಾರವಾಡ, ಕಲಬುರಗಿ ಪೀಠಗಳಲ್ಲಿ ಎಂದಿನಂತೆ ಭೌತಿಕ ವಿಚಾರಣೆ ಜತೆಗೆ ಹೈಬ್ರಿಡ್ ಮಾದರಿಯಲ್ಲೇ ಕಲಾಪ ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ದೇಶದಲ್ಲಿ ಹೆಚ್ಚಲಿದೆ ಆನ್‌ಲೈನ್ ಖರೀದಿ : 2025ರ ವೇಳೆಗೆ ಶೇ.17ಕ್ಕೆ ಏರಿಕೆ ಸಾಧ್ಯತೆ
ಜ.14ರ ಬಳಿಕ ಪರಿಸ್ಥಿತಿಯನ್ನು ಗಮನಿಸಿ ಮಾರ್ಗಸೂಚಿ ಹಾಗೂ ಆದೇಶಗಳನ್ನು ಪರಿಷ್ಕರಿಸಲಾಗು ವುದು. ವೀಡಿಯೋ ಕಾನರೆನ್ಸ್‌ಗೆ ಅಗತ್ಯ ಲಿಂಕ್‌ಗಳನ್ನು ಒದಗಿಸಲಾಗುವುದು. ಕೋರ್ಟಿಗೆ ಆಗಮಿಸುವ ಸಿಬಂದಿ ಹಾಗೂ ಪೊಲೀಸರು ಮಾಸ್ಕ್ ಧರಿಸುವುದು ಸಹಿತ ಎಲ್ಲ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
aಹೈಕೋರ್ಟ್‌ಗೆ ಬರುವ ಪ್ರತಿಯೊಬ್ಬರನ್ನೂ ಥರ್ಮಲ್ ಸ್ಕ್ಯಾನ್‌ಗೆ ಒಳಪಡಿಸಲಾಗುವುದು. ವಕೀಲರು ಹೆಚ್ಚಾಗಿ ವಿಸಿ ವಿಧಾನ ಬಳಕೆ ಮಾಡಬೇಕು, ಕೇಸುಗಳ ಫೈಲಿಂಗ್ ಅನ್ನು ಇ-ಫೈಲಿಂಗ್ ನಲ್ಲೇ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.