Advertisement
ಕಾಂಗ್ರೆಸ್ ಸದಸ್ಯೆಯ ಕ್ರಮದಿಂದ ಬಹುಮತ ಪಡೆದ ಬಿಜೆಪಿಗೆ ಬೇಸರವಾಗಿರುವುದರ ಜೊತೆಗೆ ಕಾಂಗ್ರೆಸ್‌ನ ತಾಲೂಕು ಘಟಕ ಕೂಡ ಅಸಮಾಧಾನಗೊಂಡ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಈ ಕುರಿತು ಬೇಸರ ವ್ಯಕ್ತಪಡಿಸಿರುವ ಮಾಜಿ ಅಧ್ಯಕ್ಷೆ ಬಿಜೆಪಿಯ ಮಧುರಾ ಶಿವಾನಂದ, ನಗರಸಭೆಗೆ ಕಾಗದಪತ್ರ ಹಿಡಿದು ಬರುವ ಬಡ ಹಾಗೂ ತಳವರ್ಗದವರಿಗೂ ಕೆಲಸ ಮಾಡಿಸಿಕೊಡಲಾಗದ ಸ್ಥಿತಿಯಿದೆ. ಸದಸ್ಯರ ಮಾತಿಗೂ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ನ್ಯಾಯಾಲಯದ ತಡೆಯಾಜ್ಞೆಯಿಂದ ಬಡಜನರಿಗೆ ಮತ್ತೆ ತೊಂದರೆಯಾಗುತ್ತದೆ. ಲಲಿತಮ್ಮನವರಿಗೂ ಸ್ಪರ್ಧಿಸುವ ಅವಕಾಶವಿತ್ತು. ಉಳಿದ 14 ತಿಂಗಳು ಯಾರೇ ಅಧ್ಯಕ್ಷರಾದರೂ ಜನರ ಕೆಲಸಕ್ಕೆ ಅಡ್ಡಿಯಾಗುತ್ತಿರಲಿಲ್ಲ. ಜನಪ್ರತಿನಿಧಿಗಳ ಹಕ್ಕು ಕಿತ್ತುಕೊಳ್ಳುವ ಕೀಳು ಮನಸ್ಥಿತಿ ಇದರಲ್ಲಿದೆ ಎಂದಿದ್ದಾರೆ.
ನಗರಸಭೆ ಸದಸ್ಯ, ಕಾಂಗ್ರೆಸ್‌ನ ಸೈಯ್ಯದ್ ಜಾಕಿರ್ ಪ್ರತಿಕ್ರಿಯಿಸಿ, ಜನಪ್ರತಿನಿಧಿಗಳು ಅಧ್ಯಕ್ಷರಾದರೆ ನಗರದ ಅಭಿವೃದ್ಧಿ ಕಾರ್ಯ ಸುಸೂತ್ರವಾಗಿರುತ್ತದೆ. ಮುಂದಿನ 14 ತಿಂಗಳ ಅವಧಿಯಲ್ಲಾದರೂ ಜನರ ಕಷ್ಟಗಳಿಗೆ ಸ್ಪಂದಿಸಬಹುದು ಎಂದುಕೊಂಡಿದ್ದಕ್ಕೆ ಈಗ ತಂದಿರುವ ತಡೆಯಾಜ್ಞೆ ದೊಡ್ಡ ಹೊಡೆತ ನೀಡಿದೆ. ಯಾರೇ ಅಧ್ಯಕ್ಷರಾದರೂ ನಗರದ ಎಲ್ಲ ವಾರ್ಡಿನ ಕೆಲಸಕ್ಕೆ ತೊಂದರೆಯಾಗುತ್ತಿರಲಿಲ್ಲ ಎಂದು ಪ್ರತಿಪಾದಿಸುತ್ತಾರೆ.
ಕಳೆದ 15ತಿಂಗಳಿನಿಂದ ಜನಪ್ರತಿನಿಧಿಯಾಗಿದ್ದೂ ಚಿಕ್ಕಪುಟ್ಟ ವಿಚಾರಕ್ಕೂ ಅಧಿಕಾರಿಗಳೆದುರು ನಿಲ್ಲಬೇಕಾದ ಸ್ಥಿತಿಯಲ್ಲಿರುವ ಉಭಯ ಪಕ್ಷದ ಸದಸ್ಯರಿಗೆ ಇದು ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ.
ಮೀಸಲಾತಿ; ಗೊಂದಲಗಳ ಗೂಡುಸಾಗರ ನಗರಸಭೆಯ ಮೀಸಲಾತಿ ಕುರಿತಾಗಿ ವ್ಯಾಪಕ ಅಸಮಾಧಾನಗಳಿವೆ. ಕಳೆದ ಹದಿನೈದು ವರ್ಷದಿಂದ ಸಾಮಾನ್ಯ ಪುರುಷ ಹಾಗೂ ಬಿಸಿಎಂ ಎ ಪುರುಷ ಕೆಟಗೆರಿ ಇಲ್ಲಿಗೆ ಬಂದಿಲ್ಲ. ಬಿಸಿಎಂ ಬಿ ಪುರುಷ ಅಥವಾ ಮಹಿಳಾ ಕೆಟಗೆರಿ ಈವರೆಗೂ ಬಂದಿಲ್ಲ. ಶೇ. 50ರ ಮೀಸಲಾತಿ ಎಂದರೆ ಯಾವುದು ಎಂದು ಪ್ರಶ್ನಿಸುವಂತಾಗಿದೆ. ಮುಸ್ಲಿಮ್, ಕ್ರಿಶ್ಚಿಯನ್, ಲಿಂಗಾಯತ, ಒಕ್ಕಲಿಗ ಮೊದಲಾದ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಮೀಸಲಾತಿಯ ಅನ್ಯಾಯದ ಹೊರತಾಗಿ ಬಿಜೆಪಿಯೇ ಮತ್ತೊಮ್ಮೆ ಆಡಳಿತ ನಡೆಸಲಿ ಎಂದು ಹಲವು ಕಾಂಗ್ರೆಸ್ ಸದಸ್ಯರು ಬಯಸಿದ್ದರು. ಮೊದಲ ಅವಧಿಯಲ್ಲಿ ಬಿಜೆಪಿಯವರ ಕಳಪೆ ಅಧಿಕಾರದಿಂದ ಜನರೇ ಬೇಸತ್ತಿದ್ದಾರೆ. ಈಗ ಅವರಿಗೇ ಅಧಿಕಾರ ಕೊಟ್ಟು, ಅವರ ಜನವಿರೋಧಿ ನೀತಿಗಳನ್ನು ಎತ್ತಿತೋರಿಸೋಣ. 14 ತಿಂಗಳ ಬಳಿಕ ಬರುವ ಚುನಾವಣೆಯಲ್ಲೇ ಬಹುಮತದೊಂದಿಗೆ ಅಧಿಕಾರಕ್ಕೇರೋಣ ಎಂಬ ಆಶಯದಲ್ಲಿದ್ದ ಕಾಂಗ್ರೆಸ್ಸಿಗರಿಗೆ ಲಲಿತಮ್ಮ ನಡೆ ಮುಜುಗರ ತರಿಸಿದೆ. ಹೆಸರು ಹೇಳಲಿಚ್ಛಿಸದ ಸದಸ್ಯರು ಈ ಬಗ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.