Advertisement

High Court: ಬಿನೇಶ್‌ ಕೊಡಿಯೇರಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

11:09 PM Aug 11, 2023 | Team Udayavani |

ಬೆಂಗಳೂರು: ಮಾದಕ ವಸ್ತುಗಳು ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ, ಕೇರಳದ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ ಬಿನೇಶ್‌ ಕೊಡಿಯೇರಿ ವಿರುದ್ಧದ ಜಾರಿ ನಿರ್ದೇಶನಾಲಯದ ಪ್ರಕ್ರಿಯೆಗೆ ಹೈಕೋರ್ಟ್‌ ಮಧ್ಯಾಂತರ ತಡೆಯಾಜ್ಞೆ ನೀಡಿದೆ.

Advertisement

ಬಿನೇಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ| ಹೇಮಂತ್‌ ಚಂದನ್‌ಗೌಡರ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಕೆ. ಸುಮನ್‌ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕಾಗ್ನಿಜನ್ಸ್‌ ತೆಗೆದುಕೊಳ್ಳಲಾಗಿದೆ. ಅರ್ಜಿದಾರರ ಅನುಪಸ್ಥಿತಿಯಲ್ಲಿ ಊಹಿಸಿಕೊಂಡ ಅಪರಾಧಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ಎನ್‌ಡಿಪಿಎಸ್‌ ಕಾಯ್ದೆಯಡಿ ಇದಕ್ಕೆ ಅನುಮತಿಯಿಲ್ಲ ಎಂದು ವಾದಿಸಿದರು.
ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕ ಪಿ. ಪ್ರಸನ್ನಕುಮಾರ್‌, ಊಹಿತ ಆರೋಪಿಗಳಿಗಷ್ಟೇ ಅಲ್ಲ. ಅಕ್ರಮ ಹಣ ಸಂಪಾದಿಸಲು, ಸಂಗ್ರಹಿಸಲು ಸಹಾಯ ಮಾಡಿದವರಿಗೂ ಪಿಎಂಎಲ್‌ಎ ಕಾಯ್ದೆ ಅನ್ವಯವಾಗುತ್ತದೆ ಎಂದು ಪ್ರತಿಪಾದಿಸಿದರು ಆರೋಪ ನಿಗದಿ ಪ್ರಕ್ರಿಯೆ ವಿಚಾರಣಾ ಧೀನ ನ್ಯಾಯಾಲಯದಲ್ಲಿ ಆ. 18ರಂದು ನಿಗದಿಯಾಗಿತ್ತು. ಮುಂದಿನ ವಿಚಾರಣೆ ವರೆಗೆ ತಡೆ ಸಿಕ್ಕಂತಾಗಿದೆ.

ಪ್ರಕರಣದ ಹಿನ್ನೆಲೆ
ಅಕ್ರಮ ಹಣ ವರ್ಗಾವಣೆ ಮತ್ತು ಮಾದಕ ಪದಾರ್ಥ ಪ್ರಕರಣದಲ್ಲಿ 2020ರ ಅ. 29ರಂದು ಬಿನೇಶ್‌ ಬಂಧನವಾಗಿತ್ತು.2021ರ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ ಜಾಮೀನು ನೀಡಿತ್ತು. ಈ ಮಧ್ಯೆ ಇ.ಡಿ. ತನಿಖೆ ರದ್ದು ಕೋರಿ ಬಿನೇಶ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next