Advertisement

ಕೇಂದ್ರದ ಆದೇಶದ ವಿರುದ್ಧದ ಟ್ವಿಟರ್ ಮನವಿ ತಿರಸ್ಕರಿಸಿದ ಹೈಕೋರ್ಟ್; 50 ಲಕ್ಷ ರೂ ದಂಡ

12:20 PM Jun 30, 2023 | Team Udayavani |

ಬೆಂಗಳೂರು: ನಿರ್ದಿಷ್ಟ ಸಾಮಾಜಿಕ ಜಾಲತಾಣ ಖಾತೆಗಳನ್ನು ರದ್ದು ಮಾಡುವ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಟ್ವಿಟ್ಟರ್ ಗೆ ಹಿನ್ನಡೆಯಾಗಿದೆ. ಕರ್ನಾಟಕ ಹೈಕೋರ್ಟ್ ಇಂದು ಟ್ವಿಟ್ಟರ್ ಅರ್ಜಿಯನ್ನು ವಜಾ ಮಾಡಿದೆ. ಅಲ್ಲದೆ ಟ್ವಿಟ್ಟರ್ ಗೆ 50 ಲಕ್ಷ ರೂ ದಂಡ ವಿಧಿಸಲಾಗಿದೆ.

Advertisement

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeiTY) ತನಗೆ ಹೊರಡಿಸಿದ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಂಸ್ಥೆಯು ಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾ.ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಶುಕ್ರವಾರ ಬೆಳಗ್ಗೆ ಪ್ರಕಟಿಸಿತು. ಟ್ವೀಟ್ ಗಳನ್ನು ಮತ್ತು ಟ್ವಿಟ್ಟರ್ ಖಾತೆಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ಸರ್ಕಾರದ ಪರ ವಕೀಲರ ವಾದದಿಂದ ಪೀಠಕ್ಕೆ ಮನವರಿಕೆಯಾಗಿದೆ ಎಂದು ಹೇಳಿದೆ.

ಫೆಬ್ರವರಿ 2021 ಮತ್ತು ಫೆಬ್ರವರಿ 2022 ರ ನಡುವೆ 39 ಯುನಿಫಾರ್ಮ್ ರಿಸೋರ್ಸ್ ಲೊಕೇಟರ್‌ ಗಳನ್ನು (URL) ನಿರ್ಬಂಧಿಸಲು ಕೇಂದ್ರವು ಟ್ಟಿಟ್ಟರ್ ಗೆ ತಿಳಿಸಿತ್ತು.

ಇದನ್ನೂ ಓದಿ:Stock: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸಾರ್ವಕಾಲಿಕ ಗರಿಷ್ಠ: ಇವು…ಲಾಭಗಳಿಸಿದ ಷೇರುಗಳು

Advertisement

ಕಳೆದ ವರ್ಷ, ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳ ಅಡಿಯಲ್ಲಿ ತನ್ನ ಪ್ಲಾಟ್‌ ಫಾರ್ಮ್‌ ನಿಂದ ವಿಷಯವನ್ನು ತೆಗೆದುಹಾಕುವ ಕೇಂದ್ರದ ಆದೇಶವನ್ನು ಪ್ರಶ್ನಿಸಿ ಟ್ವಿಟರ್ ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿತ್ತು.

2022 ರಲ್ಲಿ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ, ಖಾತೆಯನ್ನು ನಿರ್ಬಂಧಿಸಲು ಕೇಂದ್ರವು ಹೊರಡಿಸಿದ ಆದೇಶಕ್ಕೆ ಕಾರಣಗಳನ್ನು ಪಟ್ಟಿ ಮಾಡಬೇಕು ಎಂದು ಟ್ವಿಟರ್ ಹೈಕೋರ್ಟ್‌ ಗೆ ತಿಳಿಸಿದೆ. ಅಗತ್ಯವಿದ್ದಲ್ಲಿ, ಆದೇಶವನ್ನು (ಐಟಿ ಕಾಯಿದೆ, 2000 ರ ಸೆಕ್ಷನ್ 69 ಎ ಅಡಿಯಲ್ಲಿ ಹೊರಡಿಸಲಾಗಿದೆ) ಪ್ರಶ್ನಿಸಲು ಒಂದು ಮಾನದಂಡವನ್ನು ಜಾರಿಗೆ ತರಬೇಕು ಎಂದು ಅದು ಒತ್ತಾಯಿಸಿತು.

Advertisement

Udayavani is now on Telegram. Click here to join our channel and stay updated with the latest news.

Next