Advertisement

ಜ್ಞಾನವಾಪಿಯಲ್ಲಿ ಪೂಜೆಗೆ ಮಧ್ಯಾಂತರ ತಡೆ ನೀಡಲು ಹೈಕೋರ್ಟ್‌ ನಿರಾಕರಣೆ

12:43 AM Feb 03, 2024 | Team Udayavani |

ಅಲಹಾಬಾದ್‌: ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಹಿಂದೂಗಳು ಪೂಜೆ ಮಾಡಬಹುದು ಎಂದು ವಾರಾಣಸಿ ಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದ ಮಸೀದಿ ಸಮಿತಿಗೆ ಹಿನ್ನಡೆಯಾಗಿದೆ. ಪೂಜೆಗೆ ಮಧ್ಯಾಂತರ ತಡೆ ನೀಡಲು ಸಾಧ್ಯವಿಲ್ಲ. ನಿಮ್ಮ ಮನವಿಯನ್ನು ತಿದ್ದುಪಡಿ ಮಾಡಿಕೊಳ್ಳಿ ಎಂದು ಹೈಕೋರ್ಟ್‌ ಶುಕ್ರವಾರ ಮುಸ್ಲಿಂ ಅರ್ಜಿದಾರರಿಗೆ ಸೂಚಿಸಿದೆ.

Advertisement

ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಬಹುದು ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯ ಜ.31ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅಂಜುಮಾನ್‌ ಇಂತೆಜಾಮಿಯಾ ಮಸ್ಜಿದ್‌ ಕಮಿಟಿ (ಎಐಎಂಸಿ) ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ಪೂಜೆಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್‌, ಅರ್ಜಿ ತಿದ್ದುಪಡಿ ಮಾಡಿಕೊಳ್ಳಲು ಸಮಿತಿಗೆ ಫೆ.6ರ ವರೆಗೆ ಕಾಲಾವಕಾಶ ನೀಡಿದೆ.

ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಬಹುದು ಎಂದು ವಾರಾಣಸಿ ಕೋರ್ಟ್‌ ತೀರ್ಪು ನೀಡಿದ ಮರುದಿನವೇ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಚಕರು ಮಸೀದಿಯ ನೆಲಮಾಳಿಗೆಯಲ್ಲಿ ಲಕ್ಷ್ಮಿ, ಗಣೇಶ ವಿಗ್ರಹಗಳಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದ್ದರು.

ಬಂದ್‌ ನಡುವೆ ನಡೆದ ನಮಾಜ್‌

ಮಸೀದಿ ಆವರಣದಲ್ಲಿ ಬಂದ್‌, ಬಿಗುವಿನ ವಾತಾವರಣದ ನಡುವೆ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರು ಶುಕ್ರವಾರದ ನಮಾಜ್‌ ನೆರವೇರಿ ಸಿದ್ದಾರೆ. ನೆಲಮಹಡಿಯಲ್ಲಿ ಹಿಂದೂಗಳು ಪ್ರಾರ್ಥನೆ, ನೆರವೇ ರಿಸಬಹುದು ಎಂದು ವಾರಾಣಸಿ ಜಿಲ್ಲಾ ಕೋರ್ಟ್‌ ತೀರ್ಪು ನೀಡಿದ ಬಳಿಕ ಅದನ್ನು ಖಂಡಿಸಿ ನಗರದಲ್ಲಿ ಬಂದ್‌ಗೆ ಮುಸ್ಲಿಂ ಬಣ ಕರೆ ನೀಡಿತ್ತು.

Advertisement

ಹಿಂದೂಗಳಿಗೆ ಪೂಜೆಗೆ ಅವಕಾಶ ಕೊಡುವ ಮೂಲಕ ವಾರಾಣಸಿ ಜಿಲ್ಲಾ ಕೋರ್ಟ್‌ ತರಾತುರಿಯಲ್ಲಿ ತೀರ್ಪು ನೀಡಿದೆ ಎಂದು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ. ತಮ್ಮ ಕಳವಳವನ್ನು ರಾಷ್ಟ್ರಪತಿ ಮುರ್ಮು ಅವರಿಗೆ ತಿಳಿಸಲು ಮತ್ತು ಸಿಜೆಐಗೆ ಪತ್ರ ಬರೆಯಲು ಮುಂದಾಗಿರುವುದಾಗಿಯೂ ಮಂಡಳಿ ತಿಳಿಸಿವೆ.

ಹಿಂದೂಗಳಿಗೆ ಪೂಜೆಗೆ ಅವಕಾಶ ಕೊಡುವ ಮೂಲಕ ವಾರಾಣಸಿ ಜಿಲ್ಲಾ ಕೋರ್ಟ್‌ ತರಾತುರಿಯಲ್ಲಿ ತೀರ್ಪು ನೀಡಿದೆ ಎಂದು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ. ತಮ್ಮ ಕಳವಳವನ್ನು ರಾಷ್ಟ್ರಪತಿ ಮುರ್ಮು ಅವರಿಗೆ ತಿಳಿಸಲು ಮತ್ತು ಸಿಜೆಐಗೆ ಪತ್ರ ಬರೆಯಲು ಮುಂದಾಗಿರುವುದಾಗಿಯೂ ಮಂಡಳಿ ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next