ಚಿಕ್ಕಬಳ್ಳಾಪುರ: ಮೀಸಲಾತಿ ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಮೇ 29 ರಂದು ನಡೆಯ ಬೇಕಿದ್ದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಮುಂದೂಡಿರುವುದು ಗೊತ್ತಿರುವ ವಿಚಾರ.
ಚಿಕ್ಕಬಳ್ಳಾಪುರ ನಗರಸಭೆಯ 31 ವಾರ್ಡ್‌ಗಳಿಗೆ ರಾಜ್ಯ ನಗರಾಭಿವೃದ್ಧಿ ಇಲಾಖೆ ಕರಡು ಮೀಸಲಾತಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಪ್ರಕಟಿಸಿ ಅಂತಿಮ ಮೀಸಲಾತಿ ಪ್ರಕಟಿಸಲಾಗಿತ್ತು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸ್ಪರ್ಧಿ ಆಕಾಂಕ್ಷಿಗಳು ಸರ್ಕಾರ ನಿಗದಿಪಡಿಸಿದ್ದ ಮೀಸಲಾತಿ ಯನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿವಾದ ಚರ್ಚೆಗೆ ಗ್ರಾಸವಾಗಿತ್ತು. ಹೈಕೋಟ್‌ನಲ್ಲಿ ಆರೇಳು ತಿಂಗಳಿಂದ ವಾದ, ವಿವಾದ ನಡೆದಿತ್ತು.
ಮೀಸಲಾತಿ ಬದಲಾವಣೆಗೆ ನಕಾರ: ಶುಕ್ರವಾರ ಚಿಕ್ಕಬಳ್ಳಾಪುರ ನಗರಸಭೆಗೆ ರಾಜ್ಯ ನಗರಾಭಿವೃದ್ಧಿ ನಿರ್ದೇಶನಾಲಯ ನಿಗದಿಪಡಿಸಿದ್ದ ಮೀಸಲಾತಿ ಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಆದೇಶ ನೀಡಿದ್ದು, ಮೀಸಲಾತಿ ಬದಲಾಗುತ್ತದೆ ಯೆಂಬ ನಿರೀಕ್ಷೆಯಲ್ಲಿದ್ದ ಕೆಲ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.
ಯಾರು ಕೋರ್ಟ್ ಮೊರೆ ಹೋಗಿದ್ದರು?: ನಗರದ 27ನೇ ವಾರ್ಡ್‌ನ ಶಾಹೀನಾ ಹಿಂ. ವರ್ಗ (ಎ) ಮಹಿಳೆಗೆ ಮೀಸಲು ನಿಗದಿಪಡಿಸಿ ಈ ಹಿಂದೆ ಅಂದರೆ 2018 ಜುಲೈ 30 ರಂದು ನಗರಾಭಿವೃದ್ಧಿ ನಿರ್ದೇಶನಾಲಯದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದರು. ಈ ಬಗ್ಗೆ ನಗರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳಿಗೆ ಅವೈಜ್ಞಾನಿಕವಾಗಿ ಮೀಸಲಾತಿ ನಿಗದಿಗೊಳಿಸಲಾಗಿದೆ.
Advertisement
ಆದರೆ, ಸರ್ಕಾರ ನಿಗದಿಪಡಿಸಿದ್ದ ಮೀಸಲಾತಿ ಪ್ರಶ್ನಿಸಿದ್ದ ಹೈಕೋರ್ಟ್ ಮೆಟ್ಟಿಲೇರಿದ್ದವರಿಗೆ ತೀವ್ರ ಹಿನ್ನಡೆಯಾಗಿದ್ದು, ಸರ್ಕಾರ ನಿಗದಿಪಡಿಸಿದ್ದ ಮೀಸಲಾತಿ ಬದಲಾವಣೆಗೆ ಹೈಕೋರ್ಟ್ ನಿರಾ ಕರಿಸಿ ಸರ್ಕಾರದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಲಾಗಿದೆ.
Related Articles
Advertisement
ಮೀಸಲಾತಿ ಪಡೆದವರಿಗೆ ಮತ್ತೆ ಮೀಸಲಾತಿ ಕಲ್ಪಿಸಲಾಗಿದೆ ಎಂದು ಆರೋಪಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ರವರು ವಾದ ಮಂಡಿಸಿ ಸರ್ಕಾರ ನಿಗದಿಪಡಿಸಿರುವ ಮೀಸಲಾಗಿ ಕ್ರಮ ಬದ್ಧವಾಗಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟ ನಂತರ ಹೈಕೋರ್ಟ್ ಸರ್ಕಾರದ ವಿರುದ್ಧ ಮೀಸಲಾತಿ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತೆರವುಗೊಳಿಸಿದರು.
ನಗರಸಭೆಗೆ ನಿಗದಿಯಾಗಿರುವ ಮೀಸಲಾತಿ ವಿವರ:
ಚಿಕ್ಕಬಳ್ಳಾಪುರ ನಗರಸಭೆ 1 ವಾರ್ಡ್‌ಗೆ (ಹಿಂ.ವರ್ಗ ಎ( ಮಹಿಳೆ), 2ನೇ ವಾರ್ಡ್‌ಗೆ (ಸಾಮಾನ್ಯ ಮಹಿಳೆ), 3ನೇ ವಾರ್ಡ್ (ಸಾಮಾನ್ಯ ಮಹಿಳೆ), 4ನೇ ವಾರ್ಡ್‌ಗೆ (ಹಿಂ.ವರ್ಗ (ಬಿ), 5ನೇ ವಾರ್ಡ್ (ಪ.ಜಾತಿ). 6ನೇ ವಾರ್ಡ್(ಪ.ಜಾತಿ ಮಹಿಳೆ,) 7 ನೇ ವಾರ್ಡ್(ಪ.ಜಾತಿ). 8ನೇ ವಾರ್ಡ್ (ಪ.ಜಾತಿ ಮಹಿಳೆ), 9 ನೇ ವಾರ್ಡ್ (ಪ. ಪಗಂಡ), 10ನೇ ವಾರ್ಡ್ (ಸಾಮಾನ್ಯ), 11ನೇ ವಾರ್ಡ್ (ಪ. ಪಂಗಡ ಮಹಿಳೆ), 12ನೇ ವಾರ್ಡ್ (ಬಿಸಿಎಂ (ಎ), 13ನೇ ವಾರ್ಡ್‌ಗೆ (ಸಾಮಾನ್ಯ ಮಹಿಳೆ), 14ನೇ ವಾರ್ಡ್‌ಗೆ (ಸಾಮಾನ್ಯ), 15 ನೇವಾರ್ಡ್ (ಸಾಮಾನ್ಯ). 16ನೇ ವಾರ್ಡ್ (ಬಿಸಿಎಂ (ಎ), 17ನೇ ವಾರ್ಡ್‌ಗೆ (ಸಾಮಾನ್ಯ) 18ನೇ ವಾರ್ಡ್ (ಬಿಸಿಎಂ (ಎ), 19ನೇ ವಾರ್ಡ್ (ಸಾಮಾನ್ಯ), 20ನೇ ವಾರ್ಡ್( ಸಾಮಾನ್ಯ), 21ನೇ ವಾರ್ಡ್ ( ಸಾಮಾನ್ಯ), 22 ನೇ ವಾರ್ಡ್( ಸಾಮಾನ್ಯ ಮಹಿಳೆ), 23ನೇ ವಾರ್ಡ್ (ಸಾಮಾನ್ಯ), 24ನೇ ವಾರ್ಡ್ (ಬಿಸಿಎಂ (ಬಿ) ಮಹಿಳೆ), 25ನೇ ವಾರ್ಡ್ (ಬಿಸಿಎಂ(ಬಿ) ಮಹಿಳೆ), 26ನೇ ವಾರ್ಡ್ (ಸಾಮಾನ್ಯ ಮಹಿಳೆ), 27ನೇ ವಾರ್ಡ್‌ಗೆ (ಬಿಸಿಎಂ(ಎ) ಮಹಿಳೆ, 28ನೇ ವಾರ್ಡ್ (ಸಾಮಾನ್ಯ) 29 ನೇ ವಾರ್ಡ್‌ಗೆ (ಪ. ಜಾತಿ), 30ನೇ ವಾರ್ಡ್ (ಸಾಮಾನ್ಯ ಮಹಿಳೆ) , 31ನೇ ವಾರ್ಡ್‌ಗೆ (ಸಾಮಾನ್ಯ ಮಹಿಳೆ)ಗೆ ಮೀಸಲಾಗಿದೆ.