Advertisement

Yakshagana ಕಟೀಲು ಯಕ್ಷಗಾನ ಬೆಳಗ್ಗೆವರೆಗೆ ನಡೆಸಲು ಅನುಮತಿ

06:50 PM Dec 11, 2023 | Team Udayavani |

ಕಟೀಲು: ಕಟೀಲು ದುರ್ಗಾಪರಮೇಶ್ವರೀ ದೇಗುಲದಿಂದ ನಡೆಸಲ್ಪಡುವ ಯಕ್ಷಗಾನವನ್ನು ಬೆಳಗ್ಗೆ ವರೆಗೆ ನಡೆಸಲು ಹೈಕೋರ್ಟು ಅನು ಮತಿ ನೀಡಿದೆ. ಆದರೆ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸ ಬೇಕು ಎಂದು ಸೂಚಿಸಿದೆ.

Advertisement

ಯಕ್ಷಗಾನ ನಡೆಸಲು ರಾತ್ರಿ 10ರ ವರೆಗೆ ಅನು ಮತಿಯಿದ್ದರೂ ಕಟೀಲು ಮೇಳ ವಿಶೇಷ ಪ್ರಕರಣವೆಂದು ಭಾವಿಸಿ ರಾತ್ರಿ 12.30ರ ವರೆಗೆ ಮಾತ್ರ ನಡೆಸಬೇಕು ಎಂದು ದ.ಕ. ಜಿಲ್ಲಾಧಿಕಾರಿ 2022ರ ನ.15ರಂದು ಎಂದು ಆದೇಶ ಹೊರಡಿಸಿದ್ದರು.

ಇದನ್ನು ಪ್ರಶ್ನಿಸಿ ದೇಗುಲದ ಭಕ್ತ ಕೃಷ್ಣಕುಮಾರ್‌ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆದು ಕೋವಿಡ್‌ 19ರ ಪೂರ್ವದಲ್ಲಿ ಚಾಲ್ತಿಯಲ್ಲಿ ಇದ್ದಂತೆ ಯಕ್ಷಗಾನ ಪ್ರದರ್ಶನ ನೀಡಲು ಜಿಲ್ಲಾಧಿಕಾರಿ ಅಥವಾ ಸಮಕ್ಷ ಪ್ರಾಧಿಕಾರವು ಅನುಮತಿ ನೀಡಬೇಕು.

ಅರ್ಜಿದಾರರು ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮುಕ್ತವಾಗಿರುತ್ತಾರೆ ಎಂದು ಅದೇಶದಲ್ಲಿ ನ್ಯಾಯಮೂರ್ತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next