ನವದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣದ ಬೆನ್ನಲ್ಲೇ ಇದೀಗ ಮಧ್ಯಪ್ರದೇಶದ ಭೋಜಶಾಲಾ ದೇಗುಲ- ಕಮಲ್ ಮೌಲಾ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಗೆ ನ್ಯಾಯಾಲಯ ಆದೇಶ ನೀಡಿದೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ ಸಂಕೀರ್ಣವನ್ನು ಹಿಂದೂಗಳು ದೇವಿ ಸರಸ್ವತಿಗೆ ಸಮರ್ಪಿತವಾದ ವಾಗೆªàವಿ ದೇಗುಲ ಎಂದು ವಾದಿಸಿದರೆ, ಇತ್ತ ಮುಸಲ್ಮಾನರು ಸಂಕೀರ್ಣವು ಕಮಲ್ ಮೌಲಾ ಮಸೀದಿ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಆದೇಶಿಸಬೇಕೆಂದು ಕೋರಿ ಹಿಂದೂ ಫ್ರಂಟ್ ಫಾರ್ ಜಸ್ಟೀಸ್ (ಎಚ್‌ಎಫ್ಜೆ) ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ನ್ಯಾಯಮೂರ್ತಿಗಳಾದ ಎಸ್.ಎ.ಧರ್ಮಾಧಿಕಾರಿ ಹಾಗೂ ನ್ಯಾ.ದೇವನಾರಾಯಣ ಮಿಶ್ರಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಅರ್ಜಿಯನ್ನು ಪುರಸ್ಕರಿಸಿದೆ. ಭೋಜಶಾಲೆ ಸಂಕೀರ್ಣದಲ್ಲಿ ಸಾಂವಿಧಾನಿಕ ಹಾಗೂ ಶಾಸನಬದ್ಧ ಬಾಧ್ಯತೆಗಳೊಂದಿಗೆ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ)ಗೆ ಆದೇಶಿಸಿ, ಈ ಸಂಬಂಧಿಸಿದಂತೆ ಕೆಲ ನಿರ್ದೇಶನಗಳನ್ನೂ ನೀಡಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಧಾರ್‌ನ ಸ್ಥಳೀಯ ಮುಸ್ಲಿಂ ಸಮುದಾಯದ ಮುಖ್ಯಸ್ಥ ವಾಖರ್ ಸಾದಿಕ್ ಹೇಳಿದ್ದಾರೆ.
ಭೋಜಶಾಲಾ ಸಂಕೀರ್ಣವು ಪುರಾತತ್ವ ಇಲಾಖೆಯ ಅಡಿಯಲ್ಲಿ ಇರುವುದರಿಂದ 2003ರ ಏಪ್ರಿಲ್ 7ರಂದೇ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳೊಟ್ಟಿಗೆ ಎಎಸ್‌ಐ ಒಪ್ಪಂದ ಮಾಡಿಕೊಂಡಿತ್ತು. ಆ ಪ್ರಕಾರ ಸಂಕೀರ್ಣದಲ್ಲಿ ಮಂಗಳವಾರ ಪೊಜೆ ಸಲ್ಲಿಸಲು ಹಿಂದೂಗಳಿಗೆ, ಶುಕ್ರವಾರ ಪೂಜೆ ಸಲ್ಲಿಸಲು ಮುಸಲ್ಮಾನರಿಗೆ ಅವಕಾಶ ನೀಡಲಾಗಿತ್ತು.
ಕೋರ್ಟ್ ಎಎಸ್‌ಐಗೆ ಹೇಳಿದ್ದೇನು?
ಎಎಸ್‌ಐನ ಐವರು ತಜ್ಞರ ತಂಡವಿರಲಿ
ಸಮೀಕ್ಷೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ
6 ವಾರದೊಳಗೆ ಸಮೀಕ್ಷೆಯ ವರದಿ ಸಲ್ಲಿಸಿ ಕಾರ್ಬನ್ ಡೇಟಿಂಗ್ ವಿಧಾನ ಬಳಸಿ