Advertisement
ವಿಚಾರಣೆ ವೇಳೆ, ಪ್ರಕರಣದಲ್ಲಿ ಬಿಬಿಎಂಪಿಯ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡ ಪೀಠ, ಮುಂದಿನ ವಿಚಾರಣೆ ವೇಳೆ ಆಯುಕ್ತರ ವಿರುದ್ಧ “ಆರೋಪ ನಿಗದಿಪಡಿಸಲಾಗುವುದು’ ( ಫ್ರೇಮಿಂಗ್ ಆಫ್ ಚಾರ್ಜ್) ಎಂದು ಹೇಳಿದರು. ಆಗ, ಬಿಬಿಎಂಪಿ ಪರ ವಕೀಲ ಕೆ.ಎನ್. ಪುಟ್ಟೇಗೌಡ, ಆಯುಕ್ತರು 2021ರ ಏ.1ರಂದು ಅಧಿಕಾರವಹಿಸಿ ಕೊಂಡಿದ್ದಾರೆ. ಮಳಿಗೆಗಳ ಹಂಚಿಕೆಗೂ ಅವರಿಗೂ ಸಂಬಂಧವಿಲ್ಲ.
Related Articles
Advertisement
ಜಯನಗರ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಹಂಚಿಕೆಗೆ ಸಂಬಂಧಿಸಿದಂತೆ 2017ರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯಲ್ಲಿ ಬಿಬಿಎಂಪಿಯ ಅಂದಿನ ಜಂಟಿ ಆಯುಕ್ತ ಟಿ.ಎಚ್. ವಿಶ್ವನಾಥ್ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು.ಸಂಕೀರ್ಣದಲ್ಲಿರುವ 40, 41, 49, 50, 60ರಿಂದ 66 ಸಂಖ್ಯೆ ಮಳಿಗೆಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕವೇ ಹಂಚಿಕೆ ಮಾಡಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ಭರವಸೆ ನೀಡಲಾಗಿತ್ತು.
ಅದನ್ನು ದಾಖಲಿಸಿಕೊಂಡು ಅರ್ಜಿಯನ್ನು ನ್ಯಾಯಾಲಯವು 2017ರ ಡಿ.6ರಂದು ಅರ್ಜಿ ಇತ್ಯರ್ಥಪಡಿಸಿತ್ತು. ನಂತರಟೆಂಡರ್ ಪ್ರಕ್ರಿಯೆ ನಡೆಸದೇ ಮಳಿಗೆಗಳನ್ನು ಹಂಚಿಕೆ ಮಾಡಲಾಗಿತ್ತು. 2017ರಲ್ಲಿ ಅರ್ಜಿ ಇತ್ಯರ್ಥವಾಗುವಮೊದಲೇ 2017ರ ಅ.16ರಂದು ಟೆಂಡರ್ ನಡೆಸದೆ ಮಳಿಗೆಗಳನ್ನು ಹಂಚಿಕೆ ಮಾಡಲು ಪಾಲಿಕೆ ನಿರ್ಣಯ ಕೈಗೊಂಡಿತ್ತು.
ಈ ವಿಚಾರ ಗಮನಿಸದೆ ಜಂಟಿ ಆಯುಕ್ತರು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಬಿಬಿಎಂಪಿ ಸಮಜಾಯಿಸಿ ನೀಡಿತ್ತು. ಕೋರ್ಟ್ ಮುಂದೆ ಪ್ರಮಾಣ ಪತ್ರ ಸಲ್ಲಿಸಿದ ನಂತರವೂ ಟೆಂಡರ್ ಕರೆಯದೆ ಮಳಿಗೆಗಳನ್ನು ಹಂಚಿಕೆ ಮಾಡಿರುವುದು ಸರಿಯಲ್ಲ. ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಲು ಇದೊಂದು ಅರ್ಹ ಪ್ರಕರಣ ಎಂದು ಹೇಳಿದ್ದ ನ್ಯಾಯಪೀಠ, ಬಿಬಿಎಂಪಿ ಆಯುಕ್ತರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.