Advertisement

ಆಡಳಿತಾಧಿಕಾರಿಗೆ ಸಾಲ ವಸೂಲಾತಿ ಅಧಿಕಾರ: ಹೈಕೋರ್ಟ್‌ ಆದೇಶ

04:45 PM Jul 24, 2021 | Team Udayavani |

ಬೆಂಗಳೂರು: ಶ್ರೀ ಗುರು ಸಾರ್ವಭೌಮ ಕ್ರೆಡಿಟ್‌ಕೋ-ಅಪರೇಟಿವ್‌ ಲಿಮಿಟೆಡ್‌ನ‌ ಅವಧಿ ಮುಗಿದ ಠೇವಣಿಗಳನವೀಕರಣ, ಸಾಲ ವಸೂಲಾತಿ ಪ್ರಕ್ರಿಯೆ ಆರಂಭಿಸುವುದು ಸೇರಿದಂತೆ ಕೆಲವು ಅಧಿಕಾರಗಳನ್ನು ಆಡಳಿತಾಧಿಕಾರಿ ಕೆ.ಎಸ್‌.ಶ್ಯಾಮ್‌ಪ್ರಸಾದ್‌ ಅವರಿಗೆನೀಡಿ ಹೈಕೋರ್ಟ್‌ಆದೇಶಿಸಿದೆ.

Advertisement

ಈ ಸಂಬಂಧಸಲ್ಲಿಸಲಾಗಿರುವ ವಿವಿಧಸಾರ್ವಜನಿಕ ಹಿತಾಸಕ್ತಿಅರ್ಜಿಗಳ ವಿಚಾರಣೆನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಹಾಗೂನ್ಯಾ. ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ನ್ಯಾಯಪೀಠಶುಕ್ರವಾರ ಈ ಮಧ್ಯಂತರ ಆದೇಶ ಹೊರಡಿಸಿತು.ಆಡಳಿತಾಧಿಕಾರಿ ಕಾನೂನು ಪ್ರಕಾರ ಸಹಕಾರಿ ಸಂಸೆ §ಯಿಂದ ಸಾಲಪಡೆದವರಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿ ಸಾಲ ವಸೂಲಾತಿಪ್ರಕ್ರಿಯೆಯನ್ನು ಆರಂಭಿಸ ಬಹುದು.

ಒಂದು ವೇಳೆ ಯಾರಾದರೂ ಸಾಲಗಾರರು ಸಾಲ ಮರುಪಾವತಿಗೆ ಮುಂದೆ ಬಂದರೆ ಅಂತಹಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಹಣವನ್ನುಸ್ವೀಕರಿಸಬೇಕು, ಅಗತ್ಯ ದಾಖಲೆಗಳಲ್ಲಿ ಸೃಷ್ಟಿಸಬೇಕು ಮತ್ತು ತಾತ್ಕಾಲಿಕತೀರುವಳಿ ಪ್ರಮಾಣ ಪತ್ರಗಳನ್ನು ವಿತರಿಸಬೇಕು. ಸಾಲಗಾರರಿಂದ ಸ್ವೀಕರಿಸಲಾದ ಹಣವನ್ನು ಸಕ್ಷಮ ಪ್ರಾಧಿಕಾರದ ಮೂಲಕ ಸಹಕಾರಿಬ್ಯಾಂಕ್‌ ನ ಖಾತೆಗೆ ಜಮೆ ಮಾಡಬೇಕು ಎಂದು ನ್ಯಾಯಾಲಯಮಧ್ಯಂತರ ಆದೇಶದಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next