ಬೆಂಗಳೂರು: ಚಾಮರಾಜನಗರ ಕೋವಿಡ್ ಆಸ್ಪತ್ರಯಲ್ಲಿ ಆಮ್ಲಜನಕ ಕೊರತೆ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರ ಸಾವು ಪ್ರಕರಣದಲ್ಲಿ ಆಕ್ಸಿಜನ್ ಪೂರೈಕೆಗೆ ಸಂಬಂಧಿಸಿದ ಚಾಮರಾಜನಗರ ಜಿಲ್ಲಾಸ್ಪತ್ರೆಯ, ಚಾಮರಾಜನಗರ ಜಿಲ್ಲಾಧಿಕಾರಿ, ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿನ ಎಲ್ಲಾ ದಾಖಲೆಗಳನ್ನು ತಕ್ಷಣ ಸೀಜ್ ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ಆದೇಶಿಸಿದೆ.
ಈ ಬಗ್ಗೆ ಆದೇಶ ನೀಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಸೀಜ್ ಮಾಡಿದ ದಾಖಲೆಗಳನ್ನು ಸರ್ಕಾರ ನೇಮಿಸಿದ ತನಿಖಾಧಿಕಾರಿ ಪರಿಶೀಲಿಸಬಹುದು ಎಂದು ಹೇಳಿದ್ದಾರೆ.
ಆಕ್ಸಿಜನ್ ಕೊರತೆಯಿಂದ 24 ಕೋವಿಡ್ ಸೋಂಕಿತರು ಸಾವಿಗೀಡಾದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರ ಸಿದ್ಧವಿದೆ. ನಿವೃತ್ತ ನ್ಯಾಯಮೂರ್ತಿಯೊಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಅವರು ಹೈಕೋರ್ಟ್‌ಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ಬೆಡ್ ಬ್ಲಾಕಿಂಗ್ ದಂಧೆ ಹಿಂದೆ ಮುಸ್ಲಿಂ ಸಂಘಟನೆಯಿದೆ ಎಂಬ ಅನುಮಾನವಿದೆ: ಈಶ್ವರಪ್ಪ
ಇದಕ್ಕೆ ಪ್ರತಿಕ್ರಿಯಿಸಿದ ಎಂದ ಮುಖ್ಯ ನ್ಯಾಯಮೂರ್ತಿಯವರು, ನ್ಯಾಯಾಂಗ ತನಿಖೆ ಕುರಿತು ನಿಲುವು ತಿಳಿಸಲಷ್ಟೇ ನಾವು ಹೇಳಿದ್ದೆವು. ನಿವೃತ್ತ ನ್ಯಾಯ ಮೂರ್ತಿಗಳನ್ನು ಸರ್ಕಾರ ನೇಮಕ ಮಾಡುವುದಲ್ಲ. ಆ ನಿರ್ಧಾರವನ್ನು ಹೈಕೋರ್ಟ್‌ಗೆ ಬಿಡಿ ಎಂದರು. ಇದಕ್ಕೆ ಮುಂದಿನ ತೀರ್ಮಾನ ಹೈಕೋರ್ಟ್ ಗೆ ಬಿಟ್ಟಿದ್ದು ಎಂದು ಅಡ್ವೋಕೇಟ್ ಜನರಲ್ ಹೇಳಿದರು.