Advertisement

ಡಿನೋಟಿಫಿಕೇಷನ್ ಪ್ರಕರಣ: ಎಸಿಬಿಗೆ ಹೈಕೋರ್ಟ್‌ ನೋಟಿಸ್‌

08:35 AM Aug 23, 2017 | Harsha Rao |

ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣ ಕುರಿತಂತೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ವಿರುದಟಛಿ ಎರಡು ಪ್ರತ್ಯೇಕ ಎಫ್ಐಆರ್‌ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಎಸಿಬಿಯ ಎಫ್ಐಆರ್‌ ಪ್ರಶ್ನಿಸಿ ಯಡಿಯೂರಪ್ಪ ಸಲ್ಲಿಸಿದ್ದ ರಿಟ್‌ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ನಡೆಸಿದ
ನ್ಯಾಯಮೂರ್ತಿ ಅರವಿಂದಕುಮಾರ್‌ ಬುಧವಾರಕ್ಕೆ (ಆ.23) ಮುಂದೂಡಿದರು.

ಸಜ್ಜಾಗಿ ಬಂದಿದ್ದ ವಕೀಲರು: ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿರುವ ಡಿ ನೋಟಿ μಕೇಶನ್‌ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಪರವಾಗಿ ವಾದಿಸಲು ಹಿರಿಯ ವಕೀಲ ಸಿ.ವಿ.ನಾಗೇಶ್‌ ಹಾಗೂ ಎಸಿಬಿ ಪರ ಪ್ರತಿವಾದ ಮಂಡಿಸಲು ವಿಶೇಷ ಅಭಿಯೋಜಕರಾಗಿರುವ ಮಾಜಿ ಅಡ್ವೊಕೇಟ್‌ ಜನರಲ್‌ ಪ್ರೊ.
ರವಿವರ್ಮ ಕುಮಾರ್‌ ಸಜ್ಜಾಗಿ ಬಂದಿದ್ದರು.

ಆದರೆ, ನ್ಯಾಯಾಲಯ, ಹೆಚ್ಚಿನ ವಾದ- ಪ್ರತಿವಾದಕ್ಕೆ ಅವಕಾಶ ನೀಡದೇ ಬುಧವಾರಕ್ಕೆ ವಿಚಾರಣೆ ಮುಂದೂಡಿತು.
ಆರಂಭದಲ್ಲಿ ಸಿ.ವಿ.ನಾಗೇಶ್‌ ವಾದ ಮಂಡಿಸಲು ಪ್ರಾರಂಭಿಸಿ, ಯಡಿಯೂರಪ್ಪ ವಿರುದಟಛಿ ಎಸಿಬಿ ದಾಖಲಿಸಿರುವ ಎಫ್ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು. ಈ ಬಗ್ಗೆ ನ್ಯಾಯಾಲಯ ಪ್ರತಿಕ್ರಿಯಿಸಿ ಬುಧವಾರ ಮಧ್ಯಂತರ ಮನವಿ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿ, ಪ್ರತಿವಾದಿಯಾದ ಎಸಿಬಿಗೆ ನೋಟಿಸ್‌
ಜಾರಿಗೊಳಿಸಿತು.

“ಸಿಎಂ ಸೇಡಿನ ರಾಜಕಾರಣ’
ಲಿಂಗಸುಗೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಎಸಿಬಿ ದುರ್ಬಳಕೆ ಮಾಡಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರದ ಹಿಂದೆ ದಾಖಲಾದ ದೂರಿನನ್ವಯ ಯಡಿಯೂರಪ್ಪನವರ ಮೇಲೆ ಎಸಿಬಿ ಅ ಧಿಕಾರಿಗಳು ಎಫ್‌ಐಆರ್‌ ದಾಖಲಿಸಿ ವಿಚಾರಣೆಗೆ ಆಗಮಿಸುವಂತೆ ಸಮನ್ಸ್‌ ನೀಡಿದ್ದಾರೆ. ಆದರೆ ನಾಲ್ಕು ವರ್ಷಗಳಲ್ಲಿ ಸಿದ್ದರಾಮಯ್ಯ ಮತ್ತು ಅವರ
ಮಗ ಯತೀಂದ್ರ ವಿರುದಟಛಿ 25 ದೂರುಗಳು ದಾಖಲಾಗಿದ್ದರೂ ಇನ್ನೂ ಯಾವುದೇ ಎಫ್‌ಐಆರ್‌ ದಾಖಲಿಸಿಲ್ಲ. ಇದಲ್ಲದೇ ಸಚಿವರು ಹಾಗೂ ಐಎಎಸ್‌ ಅ ಧಿಕಾರಿಗಳ ವಿರುದಟಛಿ ದೂರು ದಾಖಲಾಗಿದ್ದರೂ ಇಲ್ಲಿವರೆಗೂ ಎಫ್‌ಐಆರ್‌ ದಾಖಲಿಸಿಲ್ಲ ಎಂದು ದೂರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next