Advertisement

ಹೈಕೋರ್ಟ್‌ ಜಡ್ಜ್ಗಳ ನೇಮಕ

06:00 AM Nov 02, 2018 | Team Udayavani |

ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಐವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸೇವಾ ಹಿರಿತನದ ಮೇಲೆ ಅಶೋಕ್‌ ಜಿ. ನಿಜಗಣ್ಣನವರ್‌, ಹೆತ್ತೂರು ಪುಟ್ಟಸ್ವಾಮಿಗೌಡ ಸಂದೇಶ್‌, ಕೃಷ್ಣನ್‌ ನಟರಾಜನ್‌, ಪ್ರಹ್ಲಾದ್‌ರಾವ್‌ ಗೋವಿಂದರಾವ್‌ ಮುತಾಲಿಕ್‌ ಪಾಟೀಲ್‌, ಅಪ್ಪಾಸಾಹೇಬ್‌ ಶಾಂತಪ್ಪ ಬೆಳ್ಳುಂಕೆ  ನೇಮಕಗೊಂಡಿದ್ದಾರೆ.

Advertisement

ಅಶೋಕ್‌ ನಿಜಗಣ್ಣನವರ್‌, ಹೆತ್ತೂರು ಪುಟ್ಟಸ್ವಾಮಿಗೌಡ ಸಂದೇಶ್‌ ಮತ್ತು ಕೃಷ್ಣನ್‌ ನಟರಾಜನ್‌ 2 ವರ್ಷದ ಅವಧಿಗೆ ಹೆಚ್ಚುವರಿ
ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿದ್ದಾರೆ. ಸೇವಾ ನಿವೃತ್ತಿ ಅವಧಿ ಕಡಿಮೆ ಇರುವುದರಿಂದ ಪ್ರಲ್ಹಾದ್‌ ರಾವ್‌ ಗೋವಿಂದರಾವ್‌ ಮುತಾಲಿಕ್‌ ಪಾಟೀಲ್‌ 2020ರ ಫೆ.19 ಹಾಗೂ ಅಪ್ಪಾಸಾಹೇಬ್‌ ಶಾಂತಪ್ಪ ಬೆಳ್ಳುಂಕೆ 2019ರ ಆ.2ರವರೆಗೆ ಮಾತ್ರ ಸೇವೆ
ಸಲ್ಲಿಸಲಿದ್ದಾರೆ. ಹಾಗಾಗಿ ಈ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳಾಗಿಯೇ ಸೇವಾ ನಿವೃತ್ತಿ ಹೊಂದಲಿದ್ದಾರೆ.

ಹೆಚ್ಚುವರಿ ನ್ಯಾಯಮೂರ್ತಿಗಳು ಕಾಯಂ: ಕರ್ನಾಟಕ ಹೈಕೋರ್ಟ್‌ನ ಏಳು ಮಂದಿ ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆಯನ್ನು 
ಕಾಯಂಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೆಚ್ಚುವರಿ ನ್ಯಾಯಮೂರ್ತಿಗಳಾದ ಕೆಂಪಯ್ಯ ಸೋಮಶೇಖರ್‌, ಕೆ.ಎಸ್‌.ಮುದಗಲ್‌, ಶ್ರೀನಿವಾಸ್‌ ಹರೀಶ್‌ ಕುಮಾರ್‌, ಜಾನ್‌ ಮೈಕೆಲ್‌ ಕುನ್ಹಾ, ಬಿ.ಎ.ಪಾಟೀಲ್‌, ಎನ್‌.ಕೆ.ಸುಧೀಂದ್ರ ರಾವ್‌
ಮತ್ತು ಎಚ್‌.ಬಿ.ಪ್ರಭಾಕರ ಶಾಸ್ತ್ರಿ ಸೇವೆಯನ್ನು ಕಾಯಂಗೊಳಿಸಿ ಕೇಂದ್ರ ಕಾನೂನು ಸಚಿವಾಲಯ ಆದೇಶ ಹೊರಡಿಸಿದೆ.

ಅಧೀನ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಈ ಏಳು ಮಂದಿ 2016 ಮತ್ತು 2017ರಲ್ಲಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲಾಗಿತ್ತು. ಈ ಮಧ್ಯೆ ಈ ಏಳು ಮಂದಿ ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆ
ಕಾಯಂಗೊಳಿಸಲು ಕರ್ನಾಟಕ ಹೈಕೋರ್ಟ್‌ನ ಕೊಲಿಜಿಯಂ 2018ರ ಜೂ.27ರಂದು ಸರ್ವಾನುಮತದ ಶಿಫಾರಸು ಮಾಡಿತ್ತು. ಇದನ್ನು ಅಂಗೀಕರಿಸಿದ್ದ ಸುಪ್ರೀಂಕೋರ್ಟ್‌ ಕೊಲಿಜಿಯಂ ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆ ಕಾಯಂಗೊಳಿಸುವಂತೆ ಇದೇ ಅ.11ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next