Advertisement
ಹೀಗೆಂದು ಹಿಜಾಬ್ ಸಂಘರ್ಷದ ಹಿಂದೆ ಕೆಲ ಇಸ್ಲಾಮಿ ಸಂಘಟನೆಗಳ ಕೈವಾಡವಿದ್ದು, ಅವುಗಳಿಗೆ ಸೌದಿ ಅರೇಬಿಯಾದಿಂದ ಆರ್ಥಿಕ ನೆರವು ಸಿಗುತ್ತಿದೆ. ಇದರ ಬಗ್ಗೆ ಸಿಬಿಐ ಅಥವಾ ಎನ್‌ಐಎ ತನಿಖೆ ನಡೆಸಬೇಕು ಎಂದು ಕೋರಿ ಮುಂಬಯಿ ಮೂಲದ ವಕೀಲ ಘನಶ್ಯಾಮ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಯಲ್ಲಿ ವಾದ ಮಂಡಿಸಿದ ವಕೀಲ ಸುಭಾಷ್ ಝಾ ನ್ಯಾಯಾಲಯದ ಮುಂದೆ ಪ್ರಶ್ನೆ ಇಟ್ಟರು.
ಸಮವಸ್ತ್ರದ ಮಹತ್ವ ಏನೆಂದು ಅಲಹಾಬಾದ್ ಹೈಕೋರ್ಟ್ 1973 ರಲ್ಲೇ ನಿರ್ಣಯಿಸಿದೆ. ವಕೀಲರಿಗೆ ನಿಗದಿ ಮಾಡಿರುವ ಸಮವಸ್ತ್ರ ಪ್ರಶ್ನಿಸಿ ಹಾಗೂ ಭಾರತೀಯ ಸಂಸ್ಕೃತಿಯಂತೆ ಧೋತಿ-ಕುರ್ತಾ ಬಳಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು. ವಕೀಲರು, ನ್ಯಾಯಮೂರ್ತಿಗಳು ಕೂಡ ಸಮವಸ್ತ್ರ ಧರಿಸುತ್ತಾರೆ. ವಕೀಲರ ಸಮವಸ್ತ್ರ ದ ಬಗ್ಗೆ ಕೇರಳ ಹೈಕೋರ್ಟ್ ತೀರ್ಮಾನ ನೀಡಿದೆ. ವಿದ್ಯಾರ್ಥಿಗಳಿಗೇಕೆ ಸಮ ವಸ್ತ್ರ ಇರಬಾರದು ಎಂದರು. ಅದಕ್ಕೆ ನ್ಯಾ| ದೀಕ್ಷಿತ್ ಪ್ರತಿಕ್ತಿಯಿಸಿ ನೀವು ಹೇಳುತ್ತಿರುವುದು ಕೋರ್ಟ್ ಸಮವಸ್ತ್ರದ ವಿಚಾರ. ಆದರೆ, ನಮ್ಮ ಮುಂದೆ ಇರುವುದು ಶಾಲಾ ಸಮವಸ್ತ್ರದ ವಿಚಾರ ಎಂದರು. ನಾನು ಸಮವಸ್ತ್ರದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದೇನೆ ಎಂದು ಝಾ ಉತ್ತರಿಸಿದರು.
Related Articles
ಇಸ್ಲಾಮಿನಲ್ಲಿ 1,400 ವರ್ಷಗಳ ಹಿಂದೆ ಇದ್ದದ್ದು, ಈಗ 2022ರಲ್ಲೂ ನಡೆಯಬೇಕು, ಭವಿಷ್ಯದಲ್ಲೂ ಅನ್ವಯವಾಗಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ. ಸಿದ್ಧಾಂತ ಗಳನ್ನು ಅಕ್ಷರಶಃ ಪಾಲಿಸಲು ಸಾಧ್ಯ ವಿಲ್ಲ. ಇಸ್ಲಾಮ್ ಹುಟ್ಟಿದ ಸೌದಿ ಅರೇ ಬಿಯಾದಲ್ಲೇ ಇಂದು ಮಹಿಳಾ ಸಬಲೀ ಕರಣಕ್ಕೆ ಒತ್ತು ಕೊಡಲಾಗುತ್ತಿದೆ. ಅಲ್ಲಿನ ಮಹಿಳೆಯರಿಗೆ ವಾಹನ ಚಲಾಯಿಸಲು ಅನುಮತಿ ಇರ ಲಿಲ್ಲ. ಎರಡು ವರ್ಷಗಳ ಹಿಂದೆ ಅನುಮತಿ ನೀಡಲಾಗಿದ್ದು, 1.97 ಲಕ್ಷ ಮಹಿಳೆಯರು ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಭಾರತದಲ್ಲಿ ಇನ್ನೂ ಮಹಿಳೆಯರು ಮುಖ ಮುಚ್ಚಿಕೊಂಡು ಒಡಾಡಬೇಕು ಎಂದು ಹೇಳಲಾಗುತ್ತಿದೆ ಎಂದರು.
Advertisement
ಊಹಿಸಲು ಸಾಧ್ಯವಿಲ್ಲ: ಸಿಜೆಹಿಜಾಬ್ಗ ಸಂಬಂಧಿಸಿದ ಹೋರಾಟಗಳನ್ನು ಗಮನಿಸಿದರೆ ಅವು ರಾತೋರಾತ್ರಿ ಹುಟ್ಟಿಕೊಂಡಿದ್ದು ಎನಿ ಸುವುದಿಲ್ಲ. ವಿದ್ಯಾರ್ಥಿನಿಯರು ಹಿಜಾಬ್ ಹಾಕುತ್ತಿರಲಿಲ್ಲ ಎನ್ನುವುದಕ್ಕೆ ಫೋಟೋ ಸಾಕ್ಷಿಗಳಿವೆ, ಹಾಗಿದ್ದರೂ ಪ್ರತಿಭಟನೆಗಳು ಆರಂಭವಾದವು. ಸರಣಿ ಅರ್ಜಿಗಳು ಕೋರ್ಟ್ ಮುಂದೆ ಬಂದವು. ವಾದಿಸಲು ದೇಶದ ಹಿರಿಯ ವಕೀಲರನ್ನು ನೇಮಿಸಲಾಗಿದೆ. ಇದೆಲ್ಲವೂ ತನ್ನಷ್ಟಕ್ಕೇ ನಡೆಯುತ್ತಿರುವುದಲ್ಲ ಎಂದು ಝಾ ಹೇಳಿದರು. ಅದಕ್ಕೆ, ನಾವು ಊಹೆಗಳನ್ನು ನಂಬುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಹಿಜಾಬ್ ಸಂಘರ್ಷದ ಪರಿಣಾಮ ವಾಗಿ ಹರ್ಷ ಎಂಬ ಯುವಕನ ಹತ್ಯೆ ನಡೆದಿದೆ. ಅದರ ಹಿಂದೆ ಸಿಎಫ್ಐ ಇದೆ ಎಂಬ ಮಾಹಿತಿ ಇದೆ ಎಂದು ಝಾ ಹೇಳಿದರು. ಆ ಘಟನೆ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ನಾವು ಯಾವೂದನ್ನೂ ಊಹಿಸುವುದಿಲ್ಲ. ಸಂಘಟನೆ ಬಗ್ಗೆ ವರದಿ ನೀಡುವಂತೆ ಸರಕಾರಕ್ಕೆ ಹೇಳಿದ್ದೇವೆ. ನಿಮ್ಮ ವಾದ ನ್ಯಾಯಾಲಯ ಕೇಳಿದೆ ಎಂದು ಮುಖ್ಯ ನ್ಯಾ| ಹೇಳಿದರು. ಇಸ್ಲಾಮಿ ಸಂಘಟನೆಗಳ ಪಾತ್ರ: ಝಾ
ಹಿಜಾಬ್ ವಿವಾದ ಉಲ್ಬಣಗೊಳ್ಳಲು ಕೆಲ ಇಸ್ಲಾಮಿ ಸಂಘಟನೆಗಳ ಪಾತ್ರವಿದೆ. ಸಿಎಫ್ಐ, ಪಿಎಫ್ಐ, ಎಸ್‌ಐಒ, ಜಮಾತೆ ಇಸ್ಲಾಮಿ ಸಂಘಟನೆಗಳು ಭಾಗಿಯಾಗಿವೆ. ಅವುಗಳಿಗೆ ಸೌದಿಯಿಂದ ಆರ್ಥಿಕ ನೆರವು ಸಿಗುತ್ತಿದೆ ಎನ್ನುವ ಬಗ್ಗೆ ಮಾಧ್ಯಮಗಳ ವರದಿಯಿದೆ. ಭಾರತವನ್ನು ಇಸ್ಲಾಮೀಕರಣ ಮಾಡುವುದು ಆ ಸಂಘಟನೆಗಳ ಉದ್ದೇಶ. ಸಿಬಿಐ ಅಥವಾ ಎನ್‌ಐಎ ತನಿಖೆಗೊಳಪಡಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ವಕೀಲ ಝಾ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ಹೋರಾಟದ ಹಿಂದೆ ಕೆಲ ಸಂಘಟನೆಗಳ ಪಾತ್ರವಿದೆ. ಅದನ್ನು ಸಿಬಿಐ ಅಥವಾ ಎನ್‌ಐ ತನಿಖೆಗೆ ವಹಿಸಬೇಕು ಎಂದು ನೀವು ಅರ್ಜಿ ಸಲ್ಲಿಸಿದ್ದೀರಿ. ಆದರೆ, ಅದನ್ನು ಋಜುವಾತುಪಡಿಸಲು ನಿಮ್ಮ ಬಳಿ ದಾಖಲೆಗಳು ಇದ್ದಾವೆಯೇ? ಇದ್ದರೆ, ನಾವು ಪರಿಗಣಿಸಬಹುದು ಎಂದರು.