ಬೆಂಗಳೂರು: ಐಡಿಬಿಐ ಬ್ಯಾಂಕ್‌ನಿಂದ ಪಡೆದಿದ್ದ 625 ಕೋಟಿ ರೂ. ಸಾಲವನ್ನು ಬಡ್ಡಿಸಹಿತ ಮರುಪಾವತಿ ಮಾಡಿರುವ ಹಿನ್ನೆಲೆಯಲ್ಲಿ ತಮಗೆ ‘ಋಣಭಾರಮುಕ್ತ ಪತ್ರ’ ನೀಡುವಂತೆ ಕೋರಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಹೈಕೋರ್ಟ್ ನಿರಾಕರಿಸಿದೆ.
ಈ ಕುರಿತಂತೆ ಯುಎಸ್‌ಎಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾ. ಆಲೋಕ್ ಆರಾಧೆ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.
ಅರ್ಜಿದಾರರ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ. ಈ ಕುರಿತು ಸಿವಿಲ್ ಕೋರ್ಟ್ ಅಥವಾ ಇತರೆ ನ್ಯಾಯಾಲಯದಲ್ಲಿ ಪರಿ ಹಾರ ಕಂಡುಕೊಳ್ಳಲು ಯುಎಸ್‌ಎಲ್ ಕಂಪೆನಿ ಸ್ವತಂತ್ರವಿದೆ ಎಂದು ಅಭಿಪ್ರಾಯ ಪಟ್ಟು ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿತು.
ಉದ್ಯಮಿ ವಿಜಯ್ ಮಲ್ಯ ಯುಎಸ್‌ಎಲ್ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತಮ್ಮ ಒಡೆತನದ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಐಡಿಬಿಐ ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ. ಆದರೆ, ಅವರ ಸಾಲಕ್ಕೂ ಯುಎಸ್‌ಎಲ್ಗೂ ಯಾವುದೇ ಸಂಬಂಧವಿಲ್ಲ. ಐಡಿಬಿಐ ಬ್ಯಾಂಕ್‌ನಿಂದ ಪಡೆದಿದ್ದ 650 ಕೋಟಿ ರೂ. ಸಾಲವನ್ನು ಯುಎಸ್‌ಎಲ್ 2013ರಲ್ಲೇ ಬಡ್ಡಿ ಸಹಿತ ಹಿಂದಿರುಗಿಸಿದೆ. ಆದರೂ ಕಿಂಗ್‌ಫಿಷರ್ ಸಂಸ್ಥೆ ಪಡೆದಿರುವ ಸಾಲ ಮರುಪಾವ ತಿಸಿದರೆ ಮಾತ್ರ ಯುಎಸ್‌ಎಲ್ ಒದಗಿಸಿದ್ದ ಭದ್ರತಾ ಖಾತ್ರಿ ಹಿಂದಿರುಗಿಸಲಾಗುವುದು ಎಂದು ಐಡಿಬಿಐ ಹೇಳುತ್ತಿದೆ. ಈ ಕ್ರಮ ಸರಿಯಾಗಿಲ್ಲ. ಆದ್ದರಿಂದ ಕೂಡಲೇ ಯುಎಸ್‌ಎಲ್ಗೆ ಋಣಮುಕ್ತ ಪತ್ರ ನೀಡುವಂತೆ ಐಡಿಬಿಐಗೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದರು.
ಆದರೆ, ಯುಎಸ್‌ಎಲ್ ಕಂಪೆನಿಯ ಈ ವಾದವನ್ನು ಆಕ್ಷೇಪಿಸಿದ್ದ ಐಡಿಬಿಐ, ಸಾಲ ನೀಡಿದ ಸಂದರ್ಭದಲ್ಲಿ ವಿಜಯ್ ಮಲ್ಯ ಯುಎಸ್‌ಎಲ್ ಅಧ್ಯಕ್ಷರಾಗಿದ್ದರು. ಹೀಗಾ ಗಿಯೇ ಕಿಂಗ್‌ಫಿಶರ್ ಸಂಸ್ಥೆಗೆ ಸಾಲ ನೀಡಲಾ ಗಿದೆ. ಆ ಸಾಲಕ್ಕೆ ಯುಬಿಎಚ್ಎಲ್ ಕಾರ್ಪೊ ರೇಟ್ ಗ್ಯಾರಂಟಿ ನೀಡಿದೆ. ಅದಕ್ಕೆ ಯುಎಸ್‌ಎಲ್ ಸಹ ಬಾಧ್ಯಸ್ಥ ಸಂಸ್ಥೆಯಾಗಿದೆ. ಇದೀಗ ಯುಎಸ್‌ಎಲ್ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊ ಳ್ಳಲು ಸಾಧ್ಯವಿಲ್ಲ ಎಂದು ವಾದಿಸಿತ್ತು ವಾದ- ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣ ಗೊಳಿಸಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿ ಸಿತ್ತು. ಯುಎಸ್‌ಎಲ್ ಪರ ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ವಕೀಲ ಪಿ. ಚಿದಂಬರಂ ವಾದ ಮಂಡಿಸಿದ್ದರು.