ಬೆಂಗಳೂರು: ಉನ್ನತ ಹುದ್ದೆಗಳನ್ನು ಕೊಡಿಸುವುದಾಗಿ ಗಣ್ಯ ವ್ಯಕ್ತಿಗಳನ್ನು ನಂಬಿಸಿ ವಂಚಿಸಿದ್ದ ಆರೋಪದಲ್ಲಿ ಬಂಧಿತನಾಗಿರುವ ಯುವರಾಜ್ ಸ್ವಾಮಿಯ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ, ಜಾಮೀನು ನೀಡಲು ನಿರಾಕರಿಸಿದೆ.
ಇದನ್ನೂ ಓದಿ:ಕೋವಿಡ್ ನಿಂದ ಪದ್ಮವಿಭೂಷಣ ಪ್ರಶಸ್ತಿ ವಿಜೇತ, ಮಾಜಿ ಅಟಾರ್ನಿ ಜನರಲ್ ಸೊರಾಬ್ಜಿ ನಿಧನ
ಅಲ್ಲದೆ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರೇ ರಾಜ್ಯಪಾಲರ ಹುದ್ದೆಗಾಗಿ ಅರ್ಜಿದಾರನಿಗೆ ಲಂಚ ನೀಡಿರುವುದು ದುರದೃಷ್ಟಕರ, ಇದರಿಂದ ನ್ಯಾಯಮೂರ್ತಿಯ ಹುದ್ದೆಯ ಘನತೆ ಕುಗ್ಗಿರುವುದಲ್ಲದೆ, ರಾಜ್ಯಪಾಲರ ಹುದ್ದೆಯ ಘನತೆಗೂ ಕುಂದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪೊಲೀಸರು ಇನ್ನೂ ಆತನ ಅಪರಾಧದ ಬಗ್ಗೆ ಸಾಕ್ಷಿ ಸಂಗ್ರಹಿಸುತ್ತಿದ್ದಾರೆ. ಅರ್ಜಿದಾರರನ್ನು ಜಾಮೀನಿನ ಮೇಲೆ ಹೊರಗೆ ಬಿಟ್ಟರೆ ಆತ ಸಾಕ್ಷಿ ನಾಶ ಮಾಡಬಹುದು ಮತ್ತು ನಾಪತ್ತೆಯಾಗಬಹುದು ಎಂದು ನ್ಯಾಯಾಲಯ ಹೇಳಿದೆ