ಬೆಂಗಳೂರು: ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಮೊಹಮದ್ ನಲಪಾಡ್ ಹ್ಯಾರಿಸ್‌ಗೆ ಬುಧವಾರ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ನ್ಯಾಯಮೂರ್ತಿ ಎಸ್.ಹರೀಶ್ ಕುಮಾರ್ ಅವರಿದ್ದ ಏಕಸದಸ್ಯಪೀಠ ‘ಜಾಮೀನು ಅರ್ಜಿ ವಜಾ’ ಎಂದು ಮೂರೇ ಮೂರು ಶಬ್ಧಗಳಲ್ಲಿ ತೀರ್ಪು ನೀಡಿರುವುದಾಗಿ ವರದಿಯಾಗಿದೆ.
ಪರಪ್ಪನ ಅಗ್ರಹಾರ ಜೈಲಿನ ಟಿವಿ ಹಾಲ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ವಿಚಾರ ತಿಳಿದು ನಲಪಾಡ್ ಕುಸಿದು ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.
ಸುಪ್ರೀಂ ಕೋರ್ಟೇ ಗತಿ
ನಲಪಾಡ್ ಹ್ಯಾರಿಸ್‌ಗೆ ಸುಪ್ರೀಂ ಕೋರ್ಟ್ ಹೊರತು ಪಡಿಸಿ ಬೇರೆ ಹಾದಿ ಇಲ್ಲ. ಮುಂದಿನ ವಾರದಲ್ಲಿ ಸುಪ್ರೀಂಗೆ ಶಾಸಕ ಎನ್.ಎ.ಹ್ಯಾರಿಸ್ ಪರ ವಕೀಲರು ಜಾಮೀನು ಕೋಜಿ ಅರ್ಜಿ ಸಲ್ಲಿಸುವ ಎಲ್ಲಾ ಸಾಧ್ಯತೆಗಳಿದ್ದು , ವಾರದಲ್ಲಿ ಅರ್ಜಿ ವಿಚಾರಣೆ ನಡೆದು ಜಾಮೀನು ಸಿಕ್ಕಲ್ಲಿ ಮಾತ್ರ ಜೈಲು ಮುಕ್ತವಾಗಬಹುದು. ಇಲ್ಲವಾದಲ್ಲಿ ಚಾರ್ಜ್ ಶೀಟ್ ದಾಖಲಾಗುವವರೆಗೆ 90 ದಿನಗಳ ಕಾಲ ಜೈಲಿನಲ್ಲೇ ಕಳೆಯಬೇಕಾಗುತ್ತದೆ.