Advertisement

ರೈತರೊಬ್ಬರಿಗೆ “ಕಿಡ್ನಿ ಕಸಿ’ಗೆ ಅವಕಾಶವಿತ್ತ ಹೈಕೋರ್ಟ್‌

11:58 AM Apr 18, 2018 | Team Udayavani |

ಬೆಂಗಳೂರು: ಸಂಬಂಧಿಕ ಮಹಿಳೆಯೊಬ್ಬರಿಂದ ಕಿಡ್ನಿ ಕಸಿಗೆ ಮದ್ದೂರು ತಾಲೂಕಿನ ರೈತ ಡಿ.ಕೆ ರವಿಕುಮಾರ್‌ಗೆ ರಾಜ್ಯ ಆರೋಗ್ಯ ಇಲಾಖೆ ಅನುಮತಿ ನೀಡಿದೆ. ಸಂಬಂಧಿ ಮಹಿಳೆ ಕಿಡ್ನಿ ದಾನ ಮಾಡಲು ಒಪ್ಪಿದ್ದರೂ ಕಿಡ್ನಿ ಕಸಿಗೆ ಅವಕಾಶ ನಿರಾಕರಿಸಿದ್ದ ಇಲಾಖೆಯ ಕ್ರಮ ಪ್ರಶ್ನಿಸಿ ರೈತ ರವಿಕುಮಾರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಆರೋಗ್ಯ ಇಲಾಖೆ ಕಿಡ್ನಿ ಕಸಿಗೆ ಅನುಮತಿ ನೀಡಿತು.

Advertisement

ರವಿಕುಮಾರ್‌ ಸಲ್ಲಿಸಿದ್ದ ಅರ್ಜಿ ಮಂಗಳವಾರ ನ್ಯಾ. ರಾಘವೇಂದ್ರ ಎಸ್‌.ಚೌಹಾಣ್‌ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಾಗ, ರಾಜ್ಯಸರ್ಕಾರದ ಪರ ವಕೀಲರು ಹೇಳಿಕೆ ನೀಡಿ, ಅರ್ಜಿದಾರರಿಗೆ ಅವರ ಸಂಬಂಧಿ ಮಹಿಳೆಯಿಂದ ಕಿಡ್ನಿ ಕಸಿ ಮಾಡಿಸಿಕೊಳ್ಳಲು  ಏ.16ರಂದು ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿ ಇತ್ಯರ್ಥಪಡಿಸಿತು.

ಕಳೆದ ಐದು ವರ್ಷಗಳ ಹಿಂದೆ ಡೆಂ  ಜ್ವರದಿಂದ ಕಿಡ್ನಿ ಕಳೆದುಕೊಂಡಿದ್ದ ರವಿಕುಮಾರ್‌ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದಾಗಿ ಅವರಿಗೆ ಕಿಡ್ನಿ ದಾನ ಮಾಡಲು ಅವರ ಸಂಬಂಧಿ ಮಹಿಳೆಯೊಬ್ಬರು ಸ್ವಇಚ್ಛೆಯಿಂದ ಮುಂದೆ ಬಂದಿದ್ದರು. ಅದರಂತೆ ಕಿಡ್ನಿ ಕಸಿಗೆ ಅನುಮತಿ ಕೋರಿ ನೀಡುವಂತೆ ರವಿಕುಮಾರ್‌ ಕರ್ನಾಟಕ ಅಂಗಾಂಗ ಕಸಿ ಪ್ರಾದೇಶಿಕ  ಸಮನ್ವಯ ಸಮಿತಿಯ ಹಾಗೂ ರಾಜ್ಯ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆದಾಖಲೆಗಳು ಸಮರ್ಪಕವಾಗಿಲ್ಲ ಎಂಬ ಕಾರಣ ನೀಡಿ ಅನುಮತಿ ನಿರಾಕರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next