Advertisement

ಮೊಬೈಲ್‌ನಲ್ಲಿದೆ ಹೈ ಕ್ಲಾರಿಟಿ ಕೆಮರಾ

12:40 PM Nov 30, 2018 | Team Udayavani |

‘ಮೊಬೈಲ್‌ ಇದ್ದರೆ ಕೆಮರಾ ಉಂಟಾ’ ಅನ್ನುವ ಕಾಲ ಹೋಯ್ತು. ಈಗ ಏನಿದ್ದರೂ ‘ರೆಸಲ್ಯೂಷನ್‌ ಎಷ್ಟು; ಪೋಟೋ ಕ್ಲಾರಿಟಿ ಚೆನ್ನಾಗಿ ಬರುತ್ತಾ’ಎಂದು ಕೇಳುವವರೇ ಹೆಚ್ಚು! ಇದಕ್ಕೆಂದೆ ವಿವಿಧ ಮೊಬೈಲ್‌ ಕಂಪೆನಿಗಳು ಕೆಮರಾಗಳ ಮೇಲೆ ಫೋಕಸ್‌ ಮಾಡಿ ಜನರನ್ನು ಸೆಳೆಯುವ ಕೆಲಸ ಮಾಡುತ್ತಿವೆ. 

Advertisement

ಇಂದಿನ ಕಾಲದಲ್ಲಿ ಮೊಬೈಲ್‌ ಉಪಯೋಗಿಸದವರನ್ನು ಹುಡುಕುವುದೇ ಕಷ್ಟ. ಏಕೆಂದರೆ ಮೊಬೈಲ್‌ ಫೋನ್‌ ಅಷ್ಟರಮಟ್ಟಿಗೆ ಜನಪ್ರಿಯತೆ ಪಡೆದಿದೆ. ಹಿಂದೆಲ್ಲ ಕೇವಲ ಮಾತನಾಡಲು ಮೊಬೈಲ್‌ ಉಪಯೋಗಿಸುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದ್ದು, ಕೆಮರಾಗೋಸ್ಕರವೇ ಮೊಬೈಲ್‌ ಉಪಯೋಗ ಮಾಡುವ ಮಂದಿಯೂ ಇದ್ದಾರೆ. ಏಕೆಂದರೆ, ಇತ್ತೀಚೆಗೆ ಬರುವ ಕೆಲವೊಂದು ಸ್ಮಾರ್ಟ್‌ಫೋನ್‌ಗಳು ಡಿಎಸ್‌ಎಲ್‌ಆರ್‌ ಕೆಮರಾದಲ್ಲಿ ತೆಗೆದಷ್ಟು ಕ್ಲಾರಿಟಿಯಲ್ಲಿ ಮೊಬೈಲ್‌ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಲು ಸಾಧ್ಯವಾಗುತ್ತಿದೆ. ಇದೇ ಕಾರಣಕ್ಕೆ ಇಂದು ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮೆಗಾ ಪಿಕ್ಸೆಲ್‌ ಕೆಮರಾ ಹೊಂದಿದ ಸ್ಮಾರ್ಟ್‌ ಫೋನ್‌ ಗಳಿಗೆ ಭಾರೀ ಬೇಡಿಕೆ ಇದೆ.

20 ಮೆಗಾ ಪಿಕ್ಸೆಲ್‌ ಕೆಮರಾ
ಭಾರತೀಯ ಮಾರುಕಟ್ಟೆಯಲ್ಲಿ ಈ ಹಿಂದೆ ಬಿಡುಗಡೆಗೊಂಡಿದ್ದ ವನ್‌ ಪ್ಲಸ್‌ ಕಂಪೆನಿಯ ಮೊಬೈಲ್‌ ಸಂಚಲನ ಸೃಷ್ಟಿಸಿತ್ತು. ಏಕೆಂದರೆ ಈ ಮೊಬೈಲ್‌ 20 ಮೆಗಾ ಪಿಕ್ಸೆಲ್‌ ಹಿಂಬದಿ ಕೆಮರಾ ಮತ್ತು 16 ಮೆಗಾ ಪಿಕ್ಸೆಲ್‌ ಸೆಲ್ಫಿ ಕೆಮರಾವನ್ನು ಹೊಂದಿದೆ. 5.5 ಇಂಚ್‌ ಫೋನ್‌ ಇದಾಗಿದ್ದು, 6 ಮತ್ತು 8 ಜಿಬಿ ರ್ಯಾಮ್‌, 64 ಮೊಬೈಲ್‌ನಲ್ಲಿದೆ ಹೈ ಕ್ಲಾರಿಟಿ ಕೆಮರಾ ಮತ್ತು 128 ಜಿಬಿ ಮೆಮೊರಿ ಸಾಮರ್ಥ್ಯವನ್ನು ಇದು ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನ
ಅದೇ ರೀತಿ ಸೋನಿ ಎಕ್ಸ್‌ಪೀರಿಯಾ ಎಕ್ಸ್‌ ಝಡ್‌ ಪ್ರೀಮಿಯಂ ಮೊಬೈಲ್‌ ಕೆಮರಾ ಗುಣಮಟ್ಟ ಉತ್ತಮವಾಗಿದ್ದು 4ಕೆ ರೆಸಲ್ಯೂಶನ್‌ ಡಿಸ್ಪ್ಲೇ ಹೊಂದಿದೆ. ಈ ಮೊಬೈಲ್‌ನಲ್ಲಿ 19 ಮೆಗಾ ಪಿಕ್ಸೆಲ್‌ ಹಿಂಬದಿ ಕೆಮರಾ ಹೊಂದಿದ್ದು, ವೀಡಿಯೋವನ್ನು 4ಕೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸೆರೆಹಿಡಿಯಬಹುದು. ಅದೇ ರೀತಿ 13 ಮೆಗಾ ಪಿಕ್ಸೆಲ್‌ ಮುಂಬದಿ ಕೆಮರಾವನ್ನು ಇದು ಹೊಂದಿದ್ದು, ಸೆಲ್ಫಿ ಪ್ರಿಯರನ್ನು ಆಕರ್ಷಿಸುತ್ತಿದೆ. ಇವಿಷ್ಟೇ ಅಲ್ಲದೆ, 4 ಜಿಬಿ ರ್ಯಾಮ್‌, 64 ಜಿಬಿ ಮೆಮೋರಿ ಸಾಮರ್ಥ್ಯವನ್ನೂ ಇದು ಹೊಂದಿದೆ.

ಮುಂಬದಿ ಕೆಮರಾವೂ ಸಾಲಿಡ್‌
ಮಾರುಕಟ್ಟೆಗೆ 2017ರಲ್ಲಿ ಕಾಲಿಟ್ಟ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ7 ಸ್ಮಾರ್ಟ್‌ ಫೋನ್‌ ಅನೇಕರ ಮನ ಗೆದ್ದಿತ್ತು. ಈ ಮೊಬೈಲ್‌ನಲ್ಲಿ 16 ಮೆಗಾಪಿಕ್ಸೆಲ್‌ ಹಿಂಬದಿ ಕೆಮರಾ ಜತೆ 16 ಮೆಗಾ ಪಿಕ್ಸೆಲ್‌ ಮುಂಬದಿ ಕೆಮರಾವನ್ನು ಹೊಂದಿದೆ. ಇದೇ ಕಾರಣಕ್ಕೆ ಈ ಮೊಬೈಲ್‌ ಗ್ರಾಹಕರ ಅಚ್ಚುಮೆಚ್ಚು ಎಂದೆನಿಸಿಕೊಂಡಿದೆ. 5.7 ಇಂಚು ಮೊಬೈಲ್‌, 3 ಜಿಬಿ ರ್ಯಾಮ್‌, ಆ್ಯಂಡ್ರಾಯ್ಡ 6.0.1 ವೈಶಿಷ್ಟ್ಯತೆಯನ್ನು ಇದು ಹೊಂದಿದೆ.

Advertisement

ಕೆಮರಾಕ್ಕೆ ಪೈಪೋಟಿ
ಒಂದು ಕಾಲದಲ್ಲಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಆಸೂಸ್‌ ಝೆನ್‌ ಫೋನ್‌ ಎಆರ್‌ ತನ್ನ ವೈಶಿಷ್ಟ್ಯಗಳಿಂದ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದಿದೆ. ಈ ಮೊಬೈಲ್‌ನಲ್ಲಿ 23 ಮೆಗಾ ಫಿಕ್ಸೆಲ್‌ ಹಿಂಬದಿ ಕೆಮರಾ, 8 ಮೆಗಾ ಪಿಕ್ಸೆಲ್‌ ಮುಂಬದಿ ಕೆಮರಾ ಹೊಂದಿದೆ. ಎಚ್‌.ಡಿ. ಡಿಸ್ಪ್ಲೇ  ಇದೆ. ವಿವೋ ವಿ9 ಯೂತ್‌ ಮೊಬೈಲ್‌ ಫೋನ್‌ ಕೂಡ 16 ಮೆಗಾ ಫಿಕ್ಸೆಲ್‌ ಹಿಂಬದಿ ಕೆಮರಾ, 4 ಜಿಬಿ ರ್ಯಾಮ್‌, 32 ಜಿಬಿ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಒಪ್ಪೋ ಫೈಂಡ್‌ ಎಕ್ಸ್‌ ಮೊಬೈಲ್‌ಗೆ ಬರೋಬ್ಬರಿ 60,000 ರೂ. ಇದ್ದು, 20 ಮೆಗಾ ಫಿಕ್ಸೆಲ್‌ ಹಿಂಬದಿ ಕೆಮರಾ ಮತ್ತು 25 ಮೆಗಾ ಪಿಕ್ಸೆಲ್‌ ಮುಂಬದಿ  ಕೆಮರಾ ಹೊಂದಿದೆ.

ಮಾತನಾಡಲು ಬೇರೆ ಮೊಬೈಲ್‌..!
ಇತ್ತೀಚೆಗೆ ಕೆಲವು ಮಂದಿ ಕೇವಲ ಫೋಟೊ ಕ್ಲಿಕ್ಕಿಸಲೆಂದೇ ಸ್ಮಾರ್ಟ್‌ ಫೋನ್‌ ಖರೀದಿ ಮಾಡುತ್ತಿದ್ದಾರೆ. ಈ ಮೊಬೈಲ್‌ನಲ್ಲಿ ಸಿಮ್‌ ಕಾರ್ಡ್‌ ಹಾಕುವುದಿಲ್ಲ. ಕೇವಲ ಮೊಮೋರಿ ಕಾರ್ಡ್‌ ಅಳವಡಿಸುತ್ತಾರೆ. ಮಾತನಾಡಲೆಂದೇ ಕಡಿಮೆ ಬೆಲೆಯ ಮಾಮೂಲಿ ಮೊಬೈಲ್‌ ಬಳಕೆ ಮಾಡುವವರು ಅಧಿಕ ಸಂಖ್ಯೆಯಲ್ಲಿದ್ದಾರೆ. 

ಕ್ಲಾರಿಟಿ ಕೆಮರಾ
ಹಿಂದೆಲ್ಲಾ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕಾದರೆ ಸಾವಿರಾರು ರೂ.ವಿನಿಯೋಗಿಸಬೇಕಿತ್ತು. ಆದರೆ, ಇತ್ತೀಚೆಗೆ ತಂತ್ರಜ್ಞಾನ ಕ್ಷೇತ್ರ ಮುಂದುವರಿದಿದ್ದು, ದೂರ ಸಂಪರ್ಕ ವ್ಯವಸ್ಥೆಯಲ್ಲಿಯೂ ಕ್ರಾಂತಿಯಾಗಿದೆ. ಮೊಬೈಲ್‌ ಕಂಪೆನಿಗಳವರು ಕೆಮರಾ ಕ್ಲಾರಿಟಿಯಲ್ಲಿಯೂ ಪೈಪೋಟಿ ನೀಡಲು ಪ್ರಾರಂಭಿಸಿದ್ದಾರೆ.  

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next