Advertisement
ಇದನ್ನೂ ಓದಿ:
- ಬಾರ್ಲಿ: ಅಪಾರ ಪ್ರಮಾಣದಲ್ಲಿ ಬೀಟಾ-ಗ್ಲುಕೋನ್ ಹೊಂದಿರುವ ಬಾರ್ಲಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಅದೇ ರೀತಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಉತ್ತಮ ಆಹಾರವಾಗಿದೆ.
- ಓಟ್ಸ್ ಬ್ರಾನ್: ಓಟ್ಸ್ ಫೈಬರ್ ಬೀಟಾ ಗ್ಲುಕನ್ಸ್ ಅನ್ನು ಹೊಂದಿದ್ದು, ಇದು ಇನ್ಸುಲಿನ್ ಪರಿಣಾಮಗಳನ್ನು ಸಕ್ರಿಯಗೊಳಿಸಲು ಕಾರ್ಯನಿರ್ವಹಿಸುತ್ತದೆ. ಪ್ರೊಟೀನ್ ಅಂಶ ಹೆಚ್ಚಾಗಿರುವುದರಿಂದ ರಕ್ತದಲ್ಲಿರುವ ಗ್ಲುಕೋಸ್ ಪ್ರಮಾಣವನ್ನು ಸಮತೋಲನದಲ್ಲಿ ಇರಿಸಲು ಪ್ರಮುಖ ಪಾತ್ರ ವಹಿಸುತ್ತದೆ.
- ಕೆಂಪು ಹರಿವೆ ಸೊಪ್ಪಿನ ಬೀಜ: ಕೆಂಪು ಹರಿವೆ ಸೊಪ್ಪು ಮತ್ತು ಬೀಜದಲ್ಲಿ ಇತರ ಎಲ್ಲಾ ಧಾನ್ಯಗಳಿಗಿಂತ ಹೆಚ್ಚಿನ ಪ್ರೊಟೀನ್ ಅಂಶ ಅಂಶವನ್ನೊಳಗೊಂಡಿದೆ. ಮಧುಮೇಹಿಗಳಿಗೆ ಇದು ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ ಎಂಬುದು ಬಾತ್ರಾ ನುಡಿಯಾಗಿದೆ.
- ರಾಗಿ: ಸಾಸಿವೆಯನ್ನು ಹೋಲುವ ರಾಗಿ ಅತ್ಯಂತ ಪೌಷ್ಠಿಂಕಾಂಶ ಹೊಂದಿದ್ದು, ಇದು ಕೇವಲ ರಕ್ತದಲ್ಲಿ ಅಧಿಕ ಸಕ್ಕರೆ ಅಂಶ ಹೊಂದಿರವವರಿಗೆ ಮಾತ್ರವಲ್ಲ, ಹೆಚ್ಚಿನ ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೆರವಾಗುತ್ತದೆ.
- ಬಾಜ್ರಾ(ನವಣೆ): ಇದು ಅತ್ಯಧಿಕ ಫೈಬರ್ ಅಂಶಗಳನ್ನೊಂಡಿರುವ ಧಾನ್ಯವಾಗಿದ್ದು, ಇದು ಮಧುಮೇಹ ಇರುವವರಿಗೆ ಉಪಯುಕ್ತವಾಗಿದೆ. ಇದು ಮಲಬದ್ಧತೆ ನಿವಾರಣೆಗೂ ಸಹಾಯಕವಾಗುತ್ತದೆ. ತೂಕ ನಷ್ಟಕ್ಕೆ ನೆರವಾಗಲಿದೆ ಎಂದು ಬಾತ್ರಾ ಮಾಹಿತಿ ನೀಡಿದ್ದಾರೆ.
- ಜೋಳ: ಜೋಳದಲ್ಲಿ ವಿಟಮಿನ್ ಕೆ1 ಸಮೃದ್ಧವಾಗಿದ್ದು, ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೂಳೆ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಬಾತ್ರಾ ವಿವರಿಸಿದ್ದಾರೆ.
Related Articles
Advertisement