Advertisement
ಇನ್ನು, ಮುಂದೆ ಕೇರಳದಿಂದ ಕರ್ನಾಟಕಕ್ಕೆ ಬರುವವರು “ಕೊರೊನಾ ನೆಗೆಟಿವ್’ ವರದಿ ತರುವುದು ಕಡ್ಡಾಯ. ಇದಕ್ಕಾಗಿ ಫೆ. 22ರಿಂದ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಯಲಿದೆ. ಇದೇ ಕಾರಣಕ್ಕೆ ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ಇಲಾಖೆಯ 2 ತಂಡಗಳು ಕಾರ್ಯನಿರ್ವಹಿಸಲಿವೆ. ಕೇರಳ ಭಾಗದಿಂದ ಉದ್ಯೋಗಕ್ಕೆಂದು ದ.ಕ. ಜಿಲ್ಲೆಗೆ ದಿನನಿತ್ಯ ಬಂದು ಹೋಗುವವರು ಪ್ರತಿ 15 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಬೇಕು.
ಕೇರಳದಿಂದ ಬಸ್‌ಗಳ ಮೂಲಕ ಪ್ರಯಾಣಿಸುವವರು 72 ಗಂಟೆಗಳ ಒಳಗೆ ನಡೆಸಲಾದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವ ಬಗ್ಗೆ ಖಚಿತಗೊಳಿಸಿದ ಬಳಿಕವೇ ಬಸ್‌ಗಳಲ್ಲಿ ಪ್ರಯಾಣಿಸಲು ಅನುವು ಮಾಡಲು ಆಯಾ ಬಸ್‌ಗಳ ನಿರ್ವಾಹಕರು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳು ಈಗಾಗಲೇ ನಿರ್ದೇಶನ ನೀಡಿದ್ದಾರೆ.
Related Articles
ಕೆಲವು ಕಡೆಗಳಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿರುವ ಪರಿಣಾಮ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ಮಾಡಿಸುವ ಕಾರ್ಯ ಫೆ. 22ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ.
ಪ್ರಯಾಣಿಕರು ನೆಗೆಟಿವ್ ವರದಿಯನ್ನು ತಂದು ಬರಬೇಕು. ಜತೆಗೆ ಮಂಗಳೂರಿಗೆ ಬಂದ ಬಳಿಕ ಕೂಡ ಪರೀಕ್ಷೆ ನಡೆಸಬೇಕಿದೆ.
Advertisement
ಕೊರೊನಾ ಎಚ್ಚರಿಕೆ ಅಗತ್ಯದ.ಕ. ಜಿಲ್ಲೆಯಲ್ಲಿ ಕೊರೊನಾ ಸ್ವಲ್ಪಮಟ್ಟಿ ನಲ್ಲಿ ನಿಯಂತ್ರಣ ದಲ್ಲಿದೆ ಯಾದರೂ ಮೈಮರೆಯುವಂತಿಲ್ಲ. ಆದರೂ ನಗರದಲ್ಲಿ ಬಹುತೇಕ ಮಂದಿ ಮಾಸ್ಕ್ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ಬಹುತೇಕ ಬಸ್‌ಗಳಲ್ಲಿ, ಹೊಟೇಲ್, ಸಭೆ, ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಸಹಿತ ಕೊರೊನಾ ಮಾರ್ಗಸೂಚಿ ಸಮರ್ಪಕವಾಗಿ ಪಾಲನೆ ಯಾಗುತ್ತಿಲ್ಲ. ರಾಜ್ಯಕ್ಕೆ ಕೊರೊನಾ ಎರಡನೇ ಅಲೆಯ ಆತಂಕವಿದ್ದು, ಸ್ವಯಂ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.