Advertisement

ಗಡಿಯಲ್ಲಿ ಹೈ ಅಲರ್ಟ್; ನೆಗೆಟಿವ್ ವರದಿ ಇಲ್ಲದ್ದಕ್ಕೆ ಪುಣೆಗೆ ಬಸ್ ವಾಪಸ್

01:44 PM Jul 14, 2021 | Team Udayavani |

ಬೆಳಗಾವಿ: ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ–ಮಹಾರಾಷ್ಟ್ರ ಗಡಿಯಲ್ಲಿ ಖಡಕ್ ನಿರ್ಬಂಧ ಹೇರಲಾಗಿದ್ದು, ಪುಣೆಯಿಂದ ಹುಬ್ಬಳ್ಳಿ ಕಡೆಗೆ ಸಾರಿಗೆ ಬಸ್‌ನಲ್ಲಿ ಬರುತ್ತಿದ್ದ ಪ್ರಯಾಣಿಕರ ಕೊರೊನಾ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹಾಗೂ ಲಸಿಕಾ ಪ್ರಮಾಣ ಪತ್ರ ಇಲ್ಲದ್ದಕ್ಕೆ ಬಸ್ ಅನ್ನು ಕೊಗೊಳ್ಳಿ ಚೆಕ್ ಪೋಸ್ಟ್ ದಿಂದ ಪುಣೆಗೆ ವಾಪಸ್ ಕಳುಹಿಸಲಾಗಿದೆ.

Advertisement

ಡೆಲ್ಟಾ ವೈರಸ್ ಹಾಗೂ ಮೂರನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮಂಗಳವಾರ ರಾತ್ರಿಯಿಂದ ಕೊಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಖಡಕ್ ತಪಾಸಣೆ ಮುಂದುವರಿಸಿರುವ ಪೊಲೀಸರು ಗಡಿ ದಾಟಿ ಕನಾಟಕಕ್ಕೆ ಬರುತ್ತಿರುವ ಪ್ರತಿಯೊಬ್ಬರ ವರದಿಯನ್ನು ತಪಾಸಣೆ ನಡೆಸಿದ್ದಾರೆ.

ಇದನ್ನೂ ಓದಿ: ಮೂರನೇ ಅಲೆಗೆ ಸರಕಾರದಿಂದ ಸರ್ವಸಿದ್ಧತೆ ಎಂದ ಡಾ.ಸಿ.ಎನ್.‌ಅಶ್ವತ್ಥನಾರಾಯಣ

ಪುಣೆಯಿಂದ ಬರುತ್ತಿದ್ದ ಬಸ್‌ನಲ್ಲಿ ಸುಮಾರು 14-15 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು. ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿದಾಗ ಯಾವೊಬ್ಬ ಪ್ರಯಾಣಿಕರ ಬಳಿಯೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇರಲಿಲ್ಲ. ಜತೆಗೆ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರವೂ ಇರಲಿಲ್ಲ. ಹೀಗಾಗಿ ಪೊಲೀಸರು ಬಸ್ ವಾಪಸ್ ಕಳುಹಿಸಿದ್ದಾರೆ. ಜತೆಗೆ ಕೆಲವು ಖಾಸಗಿ ಬಸ್‌ಗಳನ್ನೂ ವಾಪಸ್ ಕಳುಹಿಸಲಾಗಿದೆ.

Advertisement

ಡಿವೈಎಸ್‌ಪಿ ಮನೋಜಕುಮಾರ ನಾಯಿಕ, ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ, ಪಿಎಸ್‌ಐ ಅನಿಲ್ ಕುಂಬಾರ ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಚೆಕ್ ಪೋಸ್ಟ್ ನಲ್ಲಿ ಕಂದಾಯ, ಆರೋಗ್ಯ ಹಾಗೂ  ಇಲಾಖೆ ಸಿಬ್ಬಂದಿ ವಾಹನಗಳ ತಪಾಸಣೆ ನಡೆಸಿ, ಪ್ರಯಾಣಿಕರ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಪರಿಶೀಲಿಸಿ ಕರ್ನಾಟಕದ ಒಳಗೆ ಬಿಡುತ್ತಿದ್ದಾರೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ, ಕಡ್ಡಾಯವಾಗಿ ಪ್ರಯಾಣಿಕರನ್ನು ತಪಾಸಣೆ ನಡೆಸಿಯೇ ಒಳಗೆ ಬೀಡಬೇಕು ಎಂದು ಸೂಚನೆ ನೀಡಿದರು.

ಡೆಲ್ಟಾ ವೈರಸ್ ಹಾಗೂ ಮೂರನೇ ಅಲೆ ಆತಂಕದ ಹಿನ್ನೆಲೆಯಲ್ಲಿ ವಾಹನಗಳನ್ನು ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಮಹಾರಾಷ್ಟçದಿಂದ ಕರ್ನಾಟಕಕ್ಕೆ ಬರುವ ಎಲ್ಲ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ಆರ್‌ಟಿಪಿಸಿಆರ್ ರಿಪೋರ್ಟ್ ಹೊಂದುವುದು ಕಡ್ಡಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next