Advertisement
ಅದೊಂದು ದಿನ ಅವಳ ಬರ್ತಡೇ ಅದೇ ನಾನು ಅವಳ ಜೊತೆ ಮಾತನಾಡಿದ ಕೊನೆಯ ದಿನ, ನನ್ನಿಂದ ದೂರ ಆದ ದಿನ. ನನ್ನ ಪ್ರೀತಿ ನನ್ನಿಂದ ಅಗಲಿದ ದಿನ, ನನ್ನ ಜೀವನದ ಒಂದು ಕರಾಳ ದಿನ ಅಂತ ಹೇಳಿದರು ತಪ್ಪಾಗಲಾರದು. ವಿಶಾಲ ಪ್ರಪಂಚದಲ್ಲಿ ಹಾಯಾಗಿದ್ದೆ ನಾನು ಅವಳು ನಂಗೆ ಸಿಗುವ ಮೊದಲು, ಪ್ರಪಂಚದ ಖುಷಿಯೆಲ್ಲಾ ನನ್ನದೇ ಎಂದು ಬೀಗುತ್ತಿದ್ದೆ. ಯಾವ ಹುಡುಗಿಯನ್ನೂ ಕಣ್ಣೆತ್ತಿ ನೋಡದ, ಹತ್ತಿರ ಹೋಗಿ ಮಾತನಾಡಿಸದ, ಪ್ರೀತಿ ಎನ್ನುವ ಪದವನ್ನು ದ್ವೇಷಿಸುತ್ತ ಬೆಳೆದವನು ನಾನು. ಆದರೆ ಆಕೆ ಸಿಕ್ಕ ಮೇಲೆ ನನ್ನಲ್ಲಿ ಪ್ರೀತಿ ಎಂಬ ಅಲೆ ಬಂದು ನಾನು ಆಕೆಯ ಸೌಂದರ್ಯಕ್ಕೆ ಮರುಳಾದೆ. ಅಂದಿನಿಂದ ನಮ್ಮಿಬ್ಬರ ಒಪ್ಪಿಗೆಯಿಂದ ಪ್ರೀತಿ ಎಂಬ ಗಾನಕ್ಕೆ ನಾನು ಸಿಕ್ಕಿಕೊಂಡೆ. ನಂತರ ಅವಳಿಂದ ಪ್ರೀತಿಯ ಅರ್ಥ ತಿಳಿದುಕೊಂಡೆ. ಆದರೆ ಇಂದು ಅವಳು ನನ್ನೊಂದಿಗಿಲ್ಲ, ನನ್ನನ್ನು ಅಗಲಿ ಅವಳ ನೆನಪಲ್ಲೆ ಇರುವಂತೆ ಒಂಟಿಯಾಗಿ ಮಾಡಿ ಬಿಟ್ಟು ಹೋದಳು.
ನೆನಪೊಂದೇ ನನ್ನಲ್ಲಿ ಶಾಶ್ವತವಾಗಿ ಅವಳು ನೀಡಿದ ಕಾಣಿಕೆಯಂತೆ ಇದೆ. ರಾತ್ರಿಯೆಲ್ಲಾ ನಿದ್ದೆ ಬಾರದೇ, ಬೇರೆ ಯಾವ ಹುಡುಗಿಯರನ್ನು ನೋಡಿದರೂ ಅವಳನ್ನೆ ನೋಡಿದಂತೆ, ಅವಳೇ ಎದುರಿಗೆ ಬಂದಂತೆ ಭಾಸವಾಗುತ್ತದೆ. ಆಗ ತಕ್ಷಣ ಮೊಗದಲ್ಲಿ ಮಂದಹಾಸ ಮೂಡಿ, ಅವಳಲ್ಲ ಎಂದು ತಿಳಿದ ತಕ್ಷಣ ಕಣ್ಣು ತುಂಬಿಕೊಂಡಂತಹ ಸಂದರ್ಭಗಳು ನೆನಪಿದೆ. ಒಂದು ಕ್ಷಣ ನಾನೇಕೆ ಹೀಗಾದೆ ಎನ್ನುವಷ್ಟರಲ್ಲಿ ಕಣ್ಣಲ್ಲಿ ನೀರು ತುಂಬಿಕೊಂಡಿತು. ಒಂದು ದಿನ ನಾನೇ ಅವಳನ್ನು ಕೇಳಿದಾಗ ಅವಳು ಹೀಗೆಂದಳು: “ನೀನು ನಂಗೆ ಇಷ್ಟ ಇಲ್ಲ ಕಣೋ, ನೀನು ನನ್ನ ಮರೆತು ಬಿಡು, ಇನ್ಮುಂದೆ ಮಸೇಜ್, ಪೋನ್ ಮಾಡ್ಬೇಡ, ನನ್ ಕಣ್ಣಿಗೂ ಕಾಣಿಸ್ಕೋಳ್ ಬೇಡ, ನಾನ್ ನೋಡಿದ್ರೂ ನಿನ್ನ ಮಾತಾಡಿಸಲ್ಲ, ನಿನ್ ಪಾಲಿಗೆ ನಾನು ಸತ್ತೋದೆ’ ಎಂದು ಹೇಳಿ ಗುಡ್ ಬೈ ಹೇಳಿದಳು. ಇಷ್ಟೆಲ್ಲಾ ಆದ್ರೂ ಕಾಯ್ತ ಇದೀನಿ ಮುಂದೊಂದು ದಿನ ನನ್ನ ಪ್ರೀತಿನಾ ಒಪ್ಕೊಂಡು ಬರ್ತಾಳೆ ಎನ್ನುವ ನಂಬಿಕೆಯಲ್ಲಿ…
Related Articles
ಕೃಷ್ಣಮೂರ್ತಿ ಎಂ.
Advertisement