Advertisement

ಮರೆಯಾದ ಬೀಜ ಸಂಸ್ಕರಣಾ ಪದ್ಧತಿ

11:26 AM Sep 12, 2017 | Team Udayavani |

ಬೀದರ: ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣದ ಪ್ರತಿ ಫಲವೇ ನಿರ್ಬೀಜೀಕರಣ ಎಂದು ಸುರೇಶ ಗೌಡ ಪಾಟೀಲ ಹುಲಕೋಟಿ ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ರಾಜ್ಯ ಮಟ್ಟದ ಕೃಷಿ ಮತ್ತು ಸಹಕಾರ
ಸಾಹಿತ್ಯ ಸಮಾವೇಶದಲ್ಲಿ “ಕೃಷಿ ಸಾಹಿತ್ಯ’ದ ಮೊದಲ ಗೊಷ್ಠಿಯಲ್ಲಿ “ಸಾವಯವ ಹಾಗೂ ನೈಸರ್ಗಿಕ ಕೃಷಿ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಪಾರಂಪರಿಕ ಬೀಜ ಸಂಸ್ಕರಣಾ ಪದ್ಧತಿ ಮರೆಯಾಗಿ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದಿತ ಬೀಜ ರಹಿತ
ಬೀಜದಿಂದ ದೇಶದ ಜನತೆಯ ಆರ್ಥಿಕ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಪುರುಷರಲ್ಲಿ ನಪುಂಸಕತ್ವ, ಮಹಿಳೆಯರಲ್ಲಿ ಬಂಜೆತನ ಪ್ರಮಾಣ ಹೆಚ್ಚಾಗಿ ಶಕ್ತಿಹೀನವಾದ ನಿರ್ಬೀಜ ಸಮಾಜ ರೂಪುಗೊಳ್ಳುತ್ತಿರುವುದು ಬಹು ದೊಡ್ಡ ದುರಂತ. ಇದೆಲ್ಲದಕ್ಕೂ ಸಹಜ ಹಾಗೂ ಸಾವಯವ ಕೃಷಿಯಲ್ಲಿ ಪರಿಹಾರವಿದೆ ಎಂದು ಅನೇಕ ವಾಸ್ತವಿಕ ದೃಷ್ಟಾಂತ, ಪ್ರಯೋಗಶೀಲ ಉದಾಹರಣೆಗಳ ಮೂಲಕ ವಿವರಿಸಿದರು.

ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಆಶಯ ಭಾಷಣ ಮಾಡಿದರು. ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ, ವೀರಭೂಷಣ ಮೊದಲಾದವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ವಸಂತ ಹುಣಸನಾಳೆ ಸ್ವಾಗತಿಸಿದರು.  ರಾಜಕುಮಾರ ಹೆಬ್ಟಾಳೆ ನಿರೂಪಿಸಿದರು.  “ಸಹಕಾರ ಸಾಹಿತ್ಯ’ ಎಂಬ ಎರಡನೇ ಗೋಷ್ಠಿಯಲ್ಲಿ ಶಾಸನ ತಜ್ಞರಾದ ಹನುಮಾಕ್ಷಿ ಗೋಗಿ ಸಹಕಾರಿ ಕಾನೂನುಗಳು ಹಾಗೂ ಸಾಹಿತ್ಯ ವಿಷಯ ಕುರಿತು ಪ್ರಬಂಧ ಮಂಡಿಸಿದರು.

ಸಹಾರ್ದ ತರಬೇತಿ ಸಂಸ್ಥೆಯ ಸುಬ್ರಹ್ಮಣ್ಯ ಪ್ರಭು ಅವರು “ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರ ತತ್ವದ ಪಾತ್ರ’ ಕುರಿತು ಮಾತನಾಡಿದರು. ಸಹಕಾರ ಸಂಘಗಳ ಉಪ ನಿಬಂಧಕರಾದ ವಿಶ್ವನಾಥ ಎಂ. ಮಾಲನೊಡ ಅಧ್ಯಕ್ಷತೆ ವಹಿಸಿದ್ದರು. ಸಂಜೀವಕುಮಾರ ಮಾಲಿಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ನಾಗಭೂಷಣ ಕಮಠಾಣಾ ಮೊದಲಾದವರು ಉಪಸ್ಥಿತರಿದ್ದರು. ಹುಮನಾಬಾದ ಕಸಾಪ ಅಧ್ಯಕ್ಷ ಸಚಿನ ಮಠಪತಿ ಸ್ವಾಗತಿಸಿದರು. ಡಾ|ಮಲ್ಲಿಕಾರ್ಜುನ ನಿಂಗದಳ್ಳಿ ನಿರೂಪಿಸಿದರು. ವೀರಶೆಟ್ಟಿ ಚನಶೆಟ್ಟಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next