Advertisement

ಸ್ಮಾರ್ಟ್ ಫೋನ್ ಇದ್ದರಷ್ಟೇ ಸಾಲದು ; ಫೋನನ್ನು ಸ್ಮಾರ್ಟ್ ಆಗಿಸಿ!

10:17 AM Oct 30, 2019 | Mithun PG |

ಇದು ಸ್ಮಾರ್ಟ್ ಫೊನ್ ಯುಗ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಆದ ಸ್ಲಿಮ್ ಆಗಿರುವ ಮತ್ತು 3ಜಿ, 4ಜಿ ನೆಟ್ ವರ್ಕ್ ಸೌಲಭ್ಯವಿರುವ ಫೋನ್ ಗಳೇ ಇರುವುದು. ಆದರೆ ಕೆಲವರನ್ನು ಹೊರತುಪಡಿಸಿ ಬಹುತೇಕರ ಕೈಯಲ್ಲಿ ಈ ಸ್ಮಾರ್ಟ್ ಫೋನ್ ಗಳು ಸರಿಯಾಗಿ ಎಕ್ಸ್ ಪ್ಲಾಯಿಟ್ ಆಗ್ತಾ ಇಲ್ಲ ಅಂದ್ರೆ ನಿಮಗೆ ಆಶ್ಚರ್ಯವಾಗಬಹುದು ಅಲ್ವೇ?

Advertisement

ಮತ್ತಿನ್ನೇನು? ಸ್ಮಾರ್ಟ್ ಫೋನ್ ಗಳೆಂದರೆ ಬರೀ ಸೆಲ್ಫೀ ತೆಗೆಯಲು, ಗೇಮ್ ಗಳನ್ನು ಆಡಲು ಅಥವಾ ವಿಡಿಯೋ ಕಾಲ್ ಮಾಡಲು ಮಾತ್ರವೇ ಇರುವುದಲ್ಲ. ಬದಲಾಗಿ ಇದರಲ್ಲಿ ಇನ್ನೂ ಹೆಚ್ಚಿನ ಫೀಚರ್ ಗಳಿರುತ್ತವೆ. ಇವುಗಳನ್ನು ನೀವು ತಿಳಿದುಕೊಂಡು ಬಳಸಲು ಪ್ರಾರಂಭಿಸಿದರೆ ನಿಮ್ಮ ಡೈಲಿ ಟೈಂಟೇಬಲ್ ಅನ್ನು ಸುಲಭವಾಗಿ ನಿಭಾಯಿಸಬಹುದು ಮತ್ತು ಅಷ್ಟು ಬೆಲೆ ಕೊಟ್ಟು ನೀವು ಸ್ಮಾರ್ಟ್ ಫೋನ್ ಖರೀದಿಸಿದ್ದಕ್ಕೂ ಸಾರ್ಥಕವಾಗಬಹುದು.

ಫೋನ್ ಅತೀ ಬೇಗ ಚಾರ್ಜ್ ಮಾಡುವುದು ಹೇಗೆ ?
ಸ್ಮಾರ್ಟ್‌ಫೋನ್ ಬಳಕೆದಾರರ ದೊಡ್ಡ ಸಮಸ್ಯೆ ಎಂದರೇ ಬ್ಯಾಟರಿ ಬಾಳಿಕೆ ಹೆಚ್ಚು ಕಾಲ ಬರುತ್ತಿಲ್ಲ ಎನ್ನುವುದು. ಆದರೆ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದ್ದು, ಫೋನ್‌ಗೆ ವೇಗವಾಗಿ ಚಾರ್ಜ್ ಒದಗಿಸುತ್ತವೆ. ಫಾಸ್ಟ್ ಚಾರ್ಜರ್‌ ಆಯ್ಕೆ ಇಲ್ಲದಿದ್ದರೇ ಬಳಕೆದಾರರು ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಸ್ಮಾರ್ಟ್‌ಫೋನ್‌ ಅನ್ನು ಏರೋಪ್ಲೇನ್‌ ಮೋಡ್‌ಗೆ ಹಾಕುವುದು ಉತ್ತಮ. ಇದು ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್ ಆಗಲು ನೆರವಾಗುತ್ತದೆ.

ದಾಖಲೆಗಳಿಗೆ ಡಿಜಿಟಲ್‌ ಟಚ್‌:
ಇಂದು ಪ್ರತಿಯೊಂದು ಕೆಲಸ-ಕಾರ್ಯಗಳಿಗೂ ದಾಖಲೆಗಳು ಅವಶ್ಯ ಇರುವುದರಿಂದ ಮುಖ್ಯವಾಗಿ ಆಧಾರ್ ಕಾರ್ಡ್‌, ಪಾನ್‌ಕಾರ್ಡ್‌, ಮುಂತಾದ ದಾಖಲೆಗಳನ್ನು ಜೇಬಲ್ಲಿ ಇಟ್ಟುಕೊಂಡು ಓಡಾಡಬೇಕಾಗುತ್ತದೆ. ಕೆಲವೊಮ್ಮೆ ಅವುಗಳು ಕಳೆದು ಹೋಗುವ ಸಾಧ್ಯತೆಯಿರುವುದರಿಂದ ಅವುಗಳನ್ನು ಡಿಜಿಟಲ್ ಆಗಿ ಭದ್ರವಾಗಿಡಬಹುದು. ಅದಕ್ಕಾಗಿ ಹಲವು ಆ್ಯಪ್ ಗಳಿದ್ದು ಗೂಗಲ್‌ಡ್ರೈವ್, ಕ್ಯಾಮ್‌ಸ್ಕ್ಯಾನರ್‌, ಎವರ್‌ನೋಟ್‌ ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.

ವಾಯ್ಸ್ ಮೂಲಕ ವೈಫೈ ಆಫ್‌ ಮಾಡಿ:
ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಅಸಿಸ್ಟಂಟ್‌, ಆ್ಯಪಲ್‌- ಐಫೋನ್‌ಗಳಲ್ಲಿ ಸಿರಿ ವಾಯ್ಸ್ ಅಸಿಸ್ಟಂಟ್‌ ಹೆಚ್ಚಿನ ಅನುಕೂಲ ಮಾಡಿಕೊಟ್ಟಿವೆ. ಬಹುತೇಕ ಆಪರೇಟಿಂಗ್ ಕೆಲಸಗಳನ್ನು ಬಳಕೆದಾರರು ವಾಯ್ಸ್  ಕಮಾಂಡ್‌ ಮೂಲಕವೇ ನಿಯಂತ್ರಿಸಬಹುದು. ಹಾಗೇ ವಾಯ್ಸ್ ಅಸಿಸ್ಟಂಟ್‌ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿನ ವೈಫೈ ಅನ್ನು ಸಹ ಟರ್ನ್‌ ಆಫ್‌ ಮಾಡಬಹುದಾಗಿವೆ. ಇದು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಸ್ಮಾರ್ಟ್‌ ಟಚ್‌ ಅನಿಸಲಿದೆ

Advertisement

ಜಿಫ್ ಫೈಲ್‌ ಬಳಸಿ:
ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿ ಅನೇಕ ಕೆಲಸಗಳಿಗಾಗಿ ಆ್ಯಪ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾರೆ. ಆದರ ಪ್ರಮುಖ ಆ್ಯಪ್ಸ್‌ಗಳನ್ನು ಬಳಸುವುದೇ ಇಲ್ಲ. ಬಳಕೆಯಲ್ಲಿರದ ಆಪ್ಸ್‌ಗಳು ಕೂಡ ಫೋನಿನ ಸ್ಥಳ ಕಬಳಿಸುತ್ತವೆ. ಹೀಗಾಗಿ ಹೆಚ್ಚಾಗಿ ಬಳಸದ ಆಪ್ಸ್‌ಗಳನ್ನು ಬಳಕೆದಾರರು ಜಿಫ್ ಫೈಲ್‌ನಲ್ಲಿ ಮೂವ್‌ ಮಾಡುವುದು ಉತ್ತಮ. ಇದರಿಂದ ಫೋನ್‌ ಸ್ಥಳಾವಕಾಶ ಉಳಿಯುತ್ತದೆ ಜೊತೆಗೆ ಆ್ಯಪ್ಸ್‌ಗಳು ಸಹ ಜಿಫ್ ಫೈಲ್‌ ನಲ್ಲಿಇರುತ್ತವೆ.

ಹಾಡುಗಳನ್ನುಸಂಪೂರ್ಣ ಮಾಹಿತಿ ಬೇಕಿದ್ದರೇ ಈ ಅ್ಯಪ್ ಬಳಸಿ:
ನಮಗೆ ಯಾವುದೇ ಮಾಹಿತಿ ಬೇಕಿದ್ದರೂ ಗೂಗಲ್‌ ಸರ್ಚ್ ಮಾಡುತ್ತೇವೆ.  ಅದೇ ರೀತಿ ಹಾಡುಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೇ ಹುಡುಕುವುದು ಸಹ ಸುಲಭ. ಅದಕ್ಕಾಗಿ ಶಾಜಮ್ ಮತ್ತು ಸೌಂಡ್‌ಹೌಂಡ್‌ (Shazam or Sound Hound) ಎಂಬ ಆ್ಯಪ್ಸ್‌ಗಳು ಬಹಳ ನೆರವಾಗಲಿವೆ. ಈ ಆಪ್ಸ್‌ಗಳನ್ನು ಬಳಸಿಕೊಂಡು ಸರಳವಾಗಿ ಹಾಡುಗಳ ಸಂಪೂರ್ಣ ಮಾಹಿತಿ ತಿಳಿಯಬಹುದು. ಇದರಲ್ಲಿ ಯಾವ ಚಿತ್ರ, ಯಾರು ಮ್ಯೂಸಿಕ್ ಡೈರೆಕ್ಟರ್ , ಮುಂತಾದ ಹಲವು ಮಾಹಿತಿಗಳು ಸಿಗುತ್ತದೆ.

ಟೈಮ್ ಲಾಕ್ :
ಸ್ಕ್ರೀನ್ನಲ್ಲಿ ಕಾಣುವ ಟೈಮ್ ಅನ್ನೇ ಸ್ಕ್ರೀನ್ ಲಾಕ್ ಆಗಿ ಪರಿವರ್ತಿಸಬಹುದು. ಇದು ಪ್ರತಿ ಸೆಕೆಂಡಿಗೂ ಬದಲಾವಣೆಯಾಗುತ್ತದೆ. ಅದರಲ್ಲಿರುವ ಹಿಡನ್ ಅಯ್ಕೆಯಿಂದ ಮಾತ್ರ ಅನ್ ಲಾಕ್ ಮಾಡಬಹುದು. ಅದರ ಜೊತೆಗೆ ನಿಮ್ಮ ಮೊಬೈಲ್ ಗೆ  ಕಂಪ್ಯೂಟರ್ ಕೀಬೋರ್ಡ್ ಮತ್ತು ಮೌಸ್ ಅನ್ನು ಕೂಡ ಅಳವಡಿಸಬಹುದು. ಸೆಟ್ಟಿಂಗ್ಸ್ ನಲ್ಲಿ ಈ ಆಯ್ಕೆಗಳಿವೆ.

ಮೊಬೈಲ್ ನಲ್ಲಿ ವಿಡಿಯೋ ಕವರೇಜ್ ಮಾಡುತ್ತಿರುವಾಗಲೇ ಫೋಟೋವನ್ನು ಕೂಡ ಕ್ಲಿಕ್ಕಿಸಬಹುದು. ಶಟರ್ ಬಟನ್ ಒತ್ತಿದರೆ ವಿಡಿಯೋ ಚಾಲೂ ಇರುವಾಗಲೆ ಪೋಟೋ ತೆಗೆಯಬಹುದು.

ಗೆಸ್ಟ್ ಮೋಡ್:
ನಿಮ್ಮ ಫೋನ್ ಅನ್ನು ಇತರರು ಕೂಡ ಬಳಸುತ್ತಿದ್ದರೆ, ಪ್ರತಿಯೊಂದು ಮಾಹಿತಿಗಳು ಅವರಿಗೆ ತಿಳಿಯುತ್ತದೆ. ಆದರೇ ಸೆಟ್ಟಿಂಗ್ ನಲ್ಲಿ ಗೆಸ್ಟ್ ಮೋಡ್ ಆಯ್ಕೆ ಮಾಡಿದರೇ ಪೋನ್ ನಲ್ಲಿ ಇರುವ  ಯಾವುದೇ ಮಾಹಿತಿಗಳು ಇತರರಿಗೆ  ಗೋಚರಿಸುವುದಿಲ್ಲ.

ಇತ್ತೀಚಿಗೆ ಮೂರು ಸೆನ್ಸಾರ್ ಗಳಿರುವ ಕ್ಯಾಮೆರಾ, ವಾಟರ್ ಪ್ರೂಫ್ ಫೋನ್ ಗಳು, ಅತೀ ವೇಗವಾಗಿ ಇಂಟರ್ ನೆಟ್ ದೊರಕುವಂತೆ ಮಾಡುವ ಫೋನ್ ಗಳು, ಫ್ರೈವಸಿ ಆಯ್ಕೆ ಸ್ಮಾರ್ಟ್ ಫೋನ್ ಗಳು ನೀಡುತ್ತಿವೆ, ಇವೆಲ್ಲವೂ ಕೂಡ ಸ್ಮಾರ್ಟ್ ಫೋನ್ ಅನ್ನು ಹೆಚ್ಚು ಕ್ರಿಯಾಶೀಲವಾಗಿಸುತ್ತದೆ.

ಹೀಗೆ ನಿಮ್ಮ ಸ್ಮಾರ್ಟ್ ಫೋನಿನನಲ್ಲಿರುವ ಹೊಚ್ಚ ಹೊಸ ಆಯ್ಕೆಗಳನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೆಟ್ ಮಾಡಿಕೊಂಡು ಇರಿಸಿಕೊಳ್ಳುವುದರಿಂದ ಮಾಹಿತಿ ಜಗತ್ತನ್ನೇ ನಿಮ್ಮ ಬಳಿಯಲ್ಲಿರಿಸಿಕೊಂಡವರಂತೆ ನೀವು ಸ್ಮಾರ್ಟ್ ಆಗಿ ಇತರರ ಮುಂದೆ ಬೀಗಬಹುದು. ಮತ್ತಿನ್ಯಾಕೆ ತಡ ಇಂದೇ ನಿಮ್ಮ ಸ್ಮಾರ್ಟ್ ಫೋನನ್ನು ನಿಜವಾಗಿಯೂ ಸ್ಮಾರ್ಟ್ ಆಗಿಸಿ ನೀವೂ ಸ್ಮಾರ್ಟ್ ಆಗಿ!

Advertisement

Udayavani is now on Telegram. Click here to join our channel and stay updated with the latest news.

Next