ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಸ್ಥಳೀಯರಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಗಳು ವಾಸಿಸುವ ಪ್ರದೇಶಗಳನ್ನು ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದ್ದು, ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಹೇರೂರು ನಿಷೇಧಿತ ವಲಯ
ಜಿಲ್ಲೆಯ ಸಶಸ್ತ್ರ ಮೀಸಲು ಪಡೆಯ 57 ವರ್ಷ ಪ್ರಾಯದ ಹೆಡ್ ಕಾನ್‌ಸ್ಟೆಬಲ್‌ಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ನಿವಾಸ ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದ ಮಾರಿಕಟ್ಟೆ, ಎನ್‌ಎಚ್ 66, ಬಂಡಸಾಲೆ ಬೆಟ್ಟನ್ನು ನಿಷೇಧಿತ ವಲಯವಾಗಿ ಘೋಷಿಸಲಾಗಿದೆ.
ಇಲ್ಲಿ ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಅಗತ್ಯವಿರುವ ವಸ್ತುಗಳನ್ನು ಸರಕಾರಿ ಅಧಿಕಾರಿಗಳು ತಲುಪಿಸಲಿದ್ದಾರೆ. ಈ ಪ್ರದೇಶದ ಸುತ್ತಮುತ್ತಲಿನ 7 ಕಿ.ಮೀ. ಪ್ರದೇಶವನ್ನು ಬಫರ್ ಝೋನ್ ಆಗಿ ಘೋಷಿಸಲಾಗಿದೆ. ಈ ಭಾಗದ ಆರೂರು, ಬೈಕಾಡಿ, ಚಾಂತಾರು, ಉಪ್ಪೂರು ಪ್ರದೇಶವನ್ನು ಬಫರ್ ಝೋನ್ ಆಗಿ ಗುರುತಿಸಲಾಗಿದೆ.
ಮೂಡುಬೆಟ್ಟು ನಿಷೇದಿತ ವಲಯ
ಜಿಲ್ಲಾ ಪಂ.ನ ಸ್ವತ್ಛ ಭಾರತ್ ಯೋಜನೆಯ ಓರ್ವ ಸಿಬಂದಿಗೆ ಕೋವಿಡ್ ಸೋಂಕು ತಗಲಿದ್ದ ಹಿನ್ನೆಲೆಯಲ್ಲಿ ಕಾಪು ತಾಲೂಕಿನ ಕಟಪಾಡಿ ಮೂಡುಬೆಟ್ಟು ಪ್ರದೇಶ ಎರಡನೇ ರಸ್ತೆ ಹಾಗೂ ಪಿಎಚ್‌ಸಿ ಆವರಣ, 4ನೇ ಕ್ರಾಸ್ ರೋಡ್, ಜೆಪಿ ರೋಡ್, ಕಣಯ್ಯ ಲೆಔಟ್ ಪ್ರದೇಶವನ್ನು ನಿಷೇಧಿತ ವಲಯವಾಗಿ ಘೋಷಿಸಲಾಗಿದೆ.
ಇಲ್ಲಿ ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಅಗತ್ಯವಿರುವ ವಸ್ತುಗಳನ್ನು ಸರಕಾರಿ ಅಧಿಕಾರಿಗಳು ತಲುಪಿಸಲಿದ್ದಾರೆ. ಈ ಪ್ರದೇಶದ ಸುತ್ತಮುತ್ತಲಿನ 7 ಕಿ.ಮೀ. ಪ್ರದೇಶವನ್ನು ಬಫರ್ ಝೋನ್ ಆಗಿ ಘೋಷಿಸಲಾಗಿದೆ. ಈ ಭಾಗದ ಕುರ್ಕಾಲು, ಮಟ್ಟು, ಏಣಗುಡ್ಡೆ, ಪಾಂಗಾಳ ಪ್ರದೇಶವನ್ನು ಬಫರ್ ಝೋನ್ ಆಗಿ ಗುರುತಿಸಲಾಗಿದೆ. ಇಲ್ಲಿ ಸುಮಾರು 2,151 ಮನೆಗಳಲ್ಲಿ 4,743 ಜನರು ಇದ್ದಾರೆ. ಸುಮಾರು 76 ಅಂಗಡಿ ಹಾಗೂ 4 ಕಚೇರಿಗಳಿವೆ.