Advertisement
ಕಡಿಮೆ ತೂಕದ ಮತ್ತು ಹೆಚ್ಚು ವೇಗದ ಬೈಕ್ ಎನ್ನುವ ಕೀರ್ತಿ ಪಡೆದಿರುವ ಎಕ್ಸ್‌ಟ್ರೀಂ 160ಆರ್ ಬೈಕ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ಮ್ಯಾಟ್ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ. ಬೈಕ್ ನಲ್ಲಿ ಹೊಸದಾಗಿ ಯುಎಸ್‌ಬಿ ಚಾರ್ಜರ್ ಅಳವಡಿಸಲಾಗಿದ್ದು, ಎಲ್ ಸಿಡಿ ಡಿಸ್ ಪ್ಲೇ ನಲ್ಲಿ 5 ಬ್ರೈಟ್ ನೆಸ್ ಆಯ್ಕೆಯನ್ನೂ ನೀಡಲಾಗಿದೆ. ಈ ಬೈಕಿನ ಬೆಲೆ 1.16 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ದೇಶೀಯವಾಗಿ ನಿರ್ಮಿ ಸಲಾಗುತ್ತಿರುವ ಯುದ್ಧ ವಿಮಾನ ವಾಹಕ ನೌಕೆಗಾಗಿ (ಐಎಸಿ) ಖರ್ಚಾಗುತ್ತಿ ರುವ ಹಣ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಮ್‌ಬೀರ್ ಸಿಂಗ್ ತಿಳಿಸಿದ್ದಾರೆ. “ಐಎಸಿ ವಿಕ್ರಾಂತ್ ಎಂಬ ನೌಕೆಯನ್ನು ಶೇ. 76ರಷ್ಟು ದೇಶೀಯವಾಗಿಯೇ ನಿರ್ಮಿಸಲಾಗಿದೆ. ಆದರೆ, ಇದರ ನಿರ್ಮಾಣ ದುಬಾರಿ ಯಾಗಿದ್ದು, ಇದರ ನಿರ್ಮಾಣ ಅಗತ್ಯವಿತ್ತೇ’ ಎಂಬ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಮ್ ಬೀರ್ ಸಿಂಗ್ ಈ ಪ್ರತಿಕ್ರಿಯೆ ನೀಡಿದ್ದಾರೆ.