Advertisement

ನಾಳೆ ಕುಂದಾಪುರ-ಮಣಿಪಾಲ್‍ಗೆ ‘ಹೀರೋ’ ಚಿತ್ರತಂಡ

06:55 PM Mar 14, 2021 | Team Udayavani |

ಬೆಂಗಳೂರು: ನಟ ರಿಷಬ್ ಶೆಟ್ಟಿ ನಟಿಸಿರುವ ‘ಹೀರೋ’ ಚಿತ್ರತಂಡ ಸೋಮವಾರ (ಮಾ. 15) ಕುಂದಾಪುರ ಹಾಗೂ ಮಣಿಪಾಲ್‍ನಲ್ಲಿರುವ ಚಿತ್ರಮಂದಿರಗಳಿಗೆ ಭೇಟಿ ನೀಡಲಿದೆ.

Advertisement

ನಾಳೆ ಮಧ್ಯಾಹ್ನ1 ಗಂಟೆಗೆ ಮಣಿಪಾಲ್‍ ನ ಐನಾಕ್ಸ್ ಮಲ್ಟಿಪ್ಲೆಕ್ಸ್ , ಸಂಜೆ 4 ಗಂಟೆಗೆ ಉಡುಪಿಯ ಅಲಂಕಾರ್ ಚಿತ್ರಮಂದಿರ, ಸಂಜೆ 5 ಗಂಟೆಗೆ ಮಣಿಪಾಲ್‍ನ ಭಾರತ್ ಸಿನಿಮಾಸ್ ಹಾಗೂ ಸಂಜೆ 7.30 ಕ್ಕೆ ಕುಂದಾಪುರದ ಭಾರತ್ ಸಿನಿಮಾಸ್‍ಗಳಿಗೆ ‘ಹೀರೋ’ ಚಿತ್ರತಂಡ ಭೇಟಿ ನೀಡಲಿದೆ ಎಂದು ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪೈರಸಿ ಕಾಟದ ನಡುವೆಯೂ ಚಿತ್ರಮಂದಿರಗಳಲ್ಲಿ ಹೀರೋ ಅಮೋಘ ಪ್ರದರ್ಶನ ಕಾಣುತ್ತಿದೆ. ಚಿತ್ರ ವಿಮರ್ಶಕರಿಂದ, ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. ಲಾಕ್‍ ಡೌನ್ ವೇಳೆ ಚಿತ್ರತಂಡದ ಶ್ರಮದ ಫಲವಾಗಿ ಹೀರೋ ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರಕತೆ, ಸ್ಕ್ರೀನ್‍ಪ್ಲೇ, ಹಾಡುಗಳು ಸಿನಿಮಾ ರಸಿಕರನ್ನು ಚಿತ್ರಮಂದಿರಗಳತ್ತ ಬರಸೆಳೆಯುತ್ತಿದೆ.

ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಹೀರೋ’ 25ನೇ ದಿನದತ್ತ ದಾಪುಗಾಲಿಡುತ್ತಿದೆ. ಈ ಸಂತಸದ ಕ್ಷಣಗಳನ್ನು ಅಭಿಮಾನಿಗಳ ಜತೆ ಸಂಭ್ರಮಿಸುವ ನಿಟ್ಟಿನಲ್ಲಿ ಹೀರೋ ಚಿತ್ರತಂಡ ನಾಳೆ ಮಣಿಪಾಲ್ ಹಾಗೂ ಉಡುಪಿಗೆ ವಿಜಯಯಾತ್ರೆ ಹಮ್ಮಿಕೊಂಡಿದೆ.

ಇನ್ನು ಹೀರೋ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಇವರಿಗೆ ನಾಯಕಿಯಾಗಿ ಗಾನವಿ ಲಕ್ಷ್ಮಣ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಎಂ.ಭರತ್ ರಾಜ್ ನಿರ್ದೇಶನದ ಹೀರೋ ಚಿತ್ರವನ್ನು ರಿಷಬ್ ಶೆಟ್ಟಿ ಫಿಲಂಸ್ ನಿರ್ಮಾಣ ಮಾಡಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next