ದೇಶದ ಪ್ರಮುಖ ದ್ವಿಚಕ್ರ ವಾಹನಕಂಪನಿ ಹೀರೋ ಮೋಟೋಕಾರ್ಪ್,2022ರಲ್ಲಿ ತನ್ನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ಮಾಡೆಲ್ ಅನ್ನು ಲಾಂಚ್ ಮಾಡಲಿದೆ
. ಜೈಪುರ ಮತ್ತು ಜರ್ಮನಿಯ ಸ್ಟೀಪನ್ಸ್‌ಕಿರ್ಚನ್‌ನಲ್ಲಿರುವ ಸಂಶೋಧನಾಕೇಂದ್ರಗಳಲ್ಲಿ ಈ ಬೈಕ್ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಅಷ್ಟೇ ಅಲ್ಲ, ತೈವಾನ್‌ನಕಂಪನಿಯೊಂದರ ಜತೆ ಹೀರೋ ಮೋಟೋ ಕಾರ್ಪ್ ಒಪ್ಪಂದ ಮಾಡಿಕೊಂಡಿದ್ದು, ಬ್ಯಾಟರಿ ಸ್ವೈಪ್‌ಗೂ ಅವಕಾಶ ಮಾಡಿಕೊಡಲಿದೆ.
ಅಂದ ಹಾಗೆ, ಈ ಮೋಟಾರ್ ಸೈಕಲ್ ಗೋಗೋರೋ ಎಂಬ ಬ್ರಾಂಡ್‌ನಡಿಯಲ್ಲಿ ಬರಲಿದೆ. ಮುಂದಿನ ಆರ್ಥಿಕವರ್ಷದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಹೀರೋಮೋಟೋಕಾರ್ಪ್‌ನ ಸಿಇಓ ನಿರಂಜನ್ ಗುಪ್ತಾ ತಿಳಿಸಿದ್ದಾರೆ.
ಹೊಸದಾಗಿ ಬರಲಿರುವ ಸ್ಕೂಟರ್‌ನ ವಿಶೇಷತೆಯೇ ಬ್ಯಾಟರಿ ಸ್ವ್ಯಾಪ್. ಇದುವರೆಗೆ ಬಂದಿರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಈ ಸೌಲಭ್ಯಗಳಿಲ್ಲ. ಇದೇ ಮೊದಲ ಬಾರಿಗೆ ಇಂಥ ಸೌಲಭ್ಯ ನೀಡಲುಕಂಪನಿ ಮುಂದಾಗಿದೆ. ಒಂದುವೇಳೆ ಈ ಸೌಲಭ್ಯ ಸಿಕ್ಕಿದರೆ, ಎಲೆಕ್ಟ್ರಿಕ್ ಇಂಡಸ್ಟ್ರಿಯಲ್ಲಿ ದೊಡ್ಡ ಬದಲಾವಣೆಯೇ ಆಗಲಿದೆ.
ಅಲ್ಲದೆ, ಈಗಕಾಡುತ್ತಿರುವ ಕೋವಿಡ್ ನಿಂದಾಗಿ ಅಷ್ಟೇನೂ ಸಮಸ್ಯೆಯಾಗಿಲ್ಲ. ಹೀಗಾಗಿ ಮುಂದಿನ ವರ್ಷವೇ ಗೋಗೋರೋ ಬೈಕ್ ಅನ್ನುಲಾಂಚ್ ಮಾಡಲಿದ್ದೇವೆ ಎಂದು ನಿರಂಜನ್ ಗುಪ್ತಾ ಹೇಳಿದ್ದಾರೆ.ವಿಶೇಷವೆಂದರೆ, ಈಗಾಗಲೇ ಹೀರೋ ಮೋಟೋಕಾರ್ಪ್, ಬೆಂಗಳೂರು ಮೂಲದ ಆಥೇರ್ ಎನರ್ಜಿಯಲ್ಲಿ ಹೂಡಿಕೆ ಮಾಡಿದ್ದು, ಇದು ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.