Advertisement

ಹಿರಿಯಡಕ: ಭೂಸುಧಾರಣೆ ಕಾಯಿದೆ ಸುವರ್ಣ ಮಹೋತ್ಸವ : ಇಂದು ಉಳ್ಳವನೇ ಭೂಮಿಯ ಒಡೆಯ

12:29 AM Mar 20, 2022 | Team Udayavani |

ಹೆಬ್ರಿ: ಭೂಸುಧಾರಣೆ ಕಾಯಿದೆಯಿಂದ ಸುಮಾರು 6 ಲಕ್ಷ ಕುಟುಂಬಗಳು ಭೂಮಿ ಪಡೆದಿವೆ. ಕಾಂಗ್ರೆಸ್‌ ಸರಕಾರವಿದ್ದಾಗ  ಯಾವುದೇ ವ್ಯಕ್ತಿಗೆ ಜಾಗವನ್ನು ಹೊಂದಲು ಮಿತಿಗಳಿದ್ದವು. ಬಿಜೆಪಿ ಸರಕಾರ ಇವೆಲ್ಲವನ್ನು ರದ್ದುಗೊಳಿಸಿ ಉಳ್ಳವನೇ ಭೂಮಿಯ ಒಡೆಯ ಎನ್ನುತ್ತಿದೆ. ಇದು ಉಳ್ಳವರ ಪರ ಸರಕಾರ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

Advertisement

ಅವರು ಶನಿವಾರ ಹಿರಿಯಡ್ಕ ಬ್ಲಾಕ್‌ ಕಾಂಗ್ರೆಸ್‌ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ನಡೆದ ಭೂ ಸುಧಾರಣೆ ಕಾಯಿದೆಯ ಸುವರ್ಣ ಮಹೋತ್ಸವ ವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಬಿಜೆಪಿಯಿಂದ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ. ಕರಾವಳಿಗರು ಇನ್ನಾ ದರೂ ಯೋಚಿಸಬೇಕಿದೆ ಎಂದರು.

ಶೇ. 40 ಕಮಿಷನ್‌ ಸರಕಾರ :

ಬಿಜೆಪಿ ಸರಕಾರಕ್ಕೆ ಪ್ರತೀ ಕಾಮ ಗಾರಿಗೆ ಶೇ. 40 ಕಮಿಷನ್‌ ನೀಡುವ ವಿರುದ್ಧ ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರವನ್ನೂ ಬರೆದಿದ್ದರು. ಇದಕ್ಕೇಕೆ ಪ್ರಧಾನಿ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ ಅವರು, ಭ್ರಷ್ಟಾಚಾರದ ಬಗ್ಗೆ ಒಂದೇ ವೇದಿಕೆಯಲ್ಲಿ ಬಿಜೆಪಿಗರೊಂದಿಗೆ ಚರ್ಚಿಸಲು ಸಿದ್ಧ ಎಂದರು.

Advertisement

ವಿಧಾನಪರಿಷತ್‌ ಸದಸ್ಯ ಮಂಜು ನಾಥ ಭಂಡಾರಿ, ಮಾಜಿ ಸಂಸದ ಧ್ರುವನಾರಾಯಣ್‌, ಮಾಜಿ ಸಚಿವ ರಮಾನಾಥ ರೈ, ಅಭಯಚಂದ್ರ ಜೈನ್‌, ಮಾಜಿ ಶಾಶಕ ಗೋಪಾಲ ಪೂಜಾರಿ, ಐವನ್‌ ಡಿ’ಸೋಜಾ, ಮೊದಿನ್‌ ಬಾವಾ, ಜಿಲ್ಲಾ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಗಫ‌ೂರ್‌, ದೇವಿಪ್ರಸಾದ್‌ ಶೆಟ್ಟಿ, ದಿಲೀಪ್‌ ಹೆಗ್ಡೆ, ನರಸಿಂಹ ಮೂರ್ತಿ, ದಿನೇಶ್‌ ಪುತ್ರನ್‌, ಹರೀಶ್‌ ಕಿಣಿ ಅಲೆವೂರು ಉಪಸ್ಥಿತರಿದ್ದರು.

ಮಾಜಿ ಸಚಿವ‌ ವಿನಯಕುಮಾರ್‌ ಸೊರಕೆ ಪ್ರಸ್ತಾವನೆಗೈದರು. ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಸ್ವಾಗತಿಸಿ, ಕಾಪು ಉತ್ತರ ವಲಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ ಕುಲಾಲ್‌ ಪಕ್ಕಾಲು ವಂದಿಸಿದರು. ಡಾ| ಸುನಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕುತೂಹಲ ಮೂಡಿಸಿದ ವೀರಪ್ಪ ಮೊಲಿ ನಡೆ :

ಸಮಯಕ್ಕೆ ಸರಿಯಾಗಿ ಕಾರ್ಯ ಕ್ರಮಕ್ಕೆ ಆಗಮಿಸಿದ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಲಿ ಅವರು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next