Advertisement
ಹಲ್ಲುಜ್ಜುವ ಬಿದಿರಿನ ಬ್ರಶ್‌ಗಳ ಅತ್ಯಂತ ಪ್ರಮುಖವಾದ ಒಂದು ಉಪಯೋಗ ಎಂದರೆ ಅವು ಪ್ಲಾಸ್ಟಿಕ್‌ನ ಬ್ರಶ್‌ಗಳಷ್ಟೇ ಮಟ್ಟದಲ್ಲಿ ಹಲ್ಲುಗಳನ್ನು ಶುಚಿಗೊಳಿಸುತ್ತವೆ; ಆದರೆ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುವುದನ್ನು ಕಡಿಮೆ ಮಾಡುತ್ತವೆ. ಬಳಸಿ ಹಳೆಯದಾದ ಪ್ಲಾಸ್ಟಿಕ್ ಬ್ರಶ್‌ಗಳು ಮತ್ತು ಅವುಗಳ ಪ್ಯಾಕೆಟ್‌ಗಳನ್ನು ಪುನರ್ಬಳಸುವುದು, ರಿಸೈಕ್ಲಿಂಗ್ ಅಥವಾ ಕಾಂಪೋಸ್ಟ್ ಮಾಡುವುದು ನಿಜಕ್ಕೂ ಒಂದು ಬೃಹತ್ ಸಮಸ್ಯೆ.
- ಬಿದಿರಿನಲ್ಲಿ ಫಂಗಸ್‌ನಿರೋಧಕ ಗುಣವೂ ಇದೆ. ಬಿದಿರು ಮತ್ತು ಮರದಿಂದ ಕಟ್ಟಿಂಗ್ ಬೋರ್ಡ್ ಮತ್ತು ಪಾತ್ರೆಗಳನ್ನು ನಿರ್ಮಿಸುವುದಕ್ಕೆ ಒಂದು ಉದ್ದೇಶವಿರುತ್ತದೆ. ಬಿದಿರಿನ ಅಂತರ್ಗತ ಗುಣಗಳು ಅದರ ಮೇಲ್ಮೈಯನ್ನು ಪ್ರವೇಶಿಸುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವಂತಿವೆ. ಇದರಿಂದಾಗಿ ಸೂಕ್ಷ್ಮಜೀವಿಗಳಿಂದ ದೀರ್ಘಾವಧಿಯಲ್ಲಿ ರಕ್ಷಣೆ ಸಿಗುತ್ತದೆ.
- ಬಿದಿರು ಒಂದು ಹುಲ್ಲಿನ ಜಾತಿಯ ಸಸ್ಯವಾದ್ದರಿಂದ ಇದನ್ನು ಎಲ್ಲಿ ಬೇಕಾದರಲ್ಲಿ ಪರಿಸರಕ್ಕೆ ಧಕ್ಕೆ ಉಂಟು ಮಾಡದೆಯೇ ಬೆಳೆಸಬಹುದಾಗಿದೆ. ಇದರ ಕಾಂಡಗಳು ಕ್ಷಿಪ್ರವಾಗಿ ಬೆಳೆಯುತ್ತವೆ ಮತ್ತು ಅವುಗಳಿಗೆ ಯಾವುದೇ ರಸಗೊಬ್ಬರ ಅಥವಾ ಕೀಟನಾಶಕ ಬೇಕಾಗಿಲ್ಲ.
- ಬಿದಿರು ಸಂಪೂರ್ಣವಾಗಿ ನೈಸರ್ಗಿಕ ವಾತಾವರಣದಲ್ಲಿ ಬೆಳೆಯುತ್ತದದಾದ್ದರಿಂದ ಅದು ಬಳಕೆಗೆ ಸಂಪೂರ್ಣ ಸುರಕ್ಷಿತ. ಬಿದಿರನ ಕಾಂಡಗಳನ್ನು ಕತ್ತರಿಸುವಲ್ಲಿ ಅಥವಾ ಸಂಸ್ಕರಿಸುವಲ್ಲಿ ಯಾವುದೇ ವಿಷಕಾರಿ ಸಂಯುಕ್ತಗಳನ್ನು ಬಳಸುವುದಿಲ್ಲ. ಏಶ್ಯಾ ಮತ್ತು ಆಫ್ರಿಕಾದ ಹಲವು ಪ್ರದೇಶಗಳು ಮತ್ತು ಸಂಸ್ಕೃತಿಗಳಲ್ಲಿ ಬಿದಿರಿನ ಮೊಳಕೆ ಅಥವಾ “ಕಣಿಲೆ’ ಖಾದ್ಯವಾಗಿ ಬಳಕೆಯಾಗುತ್ತದೆ.
- ಬಿದಿರಿನಿಂದ ಮಾಡಿರುವ ಹಲ್ಲುಜ್ಜುವ ಬ್ರಶ್‌ಗಳು ಪ್ಲಾಸ್ಟಿಕ್ ಬ್ರಶ್‌ಗಳಿಗಿಂತ ಸ್ವಲ್ಪ ಹೆಚ್ಚು ಬೆಲೆಯನ್ನು ಹೊಂದಿರಬಹುದು. ಆದರೆ ಅವುಗಳ ಬಳಕೆಯಿಂದ ಅಂತಿಮವಾಗಿ ನಮಗೆ ಮತ್ತು ಈ ಸುಂದರ ಜಗತ್ತಿಗೆ ಉಂಟಾಗುವ ಪ್ರಯೋಜನಗಳು ಬೆಲೆಕಟ್ಟಲಾಗದವುಗಳಾಗಿವೆ.
Related Articles
Advertisement
ಅಸೋಸಿಯೇಟ್ ಪ್ರೊಫೆಸರ್, ಎಂಸಿಡಿಒಎಸ್, ಮಾಹೆ,
ಮಣಿಪಾಲ