Advertisement
ಬೆಂಗಳೂರಿನಲ್ಲಿ ಸದ್ಯ 1.20 ಕೋಟಿ ಜನರು ನೆಲೆಸಿದ್ದು, ನಿತ್ಯ 30 ಲಕ್ಷ ಜನರು ನಗರಕ್ಕೆ ಬಂದು ಹೋಗುತ್ತಿದ್ದಾರೆ. ಇದನ್ನು ಮೀರಿ ನಿತ್ಯ ರಾಜ್ಯದ ವಿವಿಧ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಸಾವಿರಾರು ಜನರು ನಗರಕ್ಕೆ ಆಗಮಿಸುತ್ತಿದ್ದಾರೆ. ಜನದಟ್ಟಣೆ ಹೆಚ್ಚಾದಂತೆ ಕಟ್ಟಡಗಳು, ವಾಹನಗಳು, ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಬೆಂಗಳೂರಿನ ಮೇಲೆ ಒತ್ತಡ ಹೆಚ್ಚುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ದೆಹಲಿಯಂತಹ ಪರಿಸ್ಥಿತಿ ಬೆಂಗಳೂರಿಗೆ ಬರುವುದರಲ್ಲಿ ಅನುಮಾನವಿಲ್ಲ.
Related Articles
Advertisement
ನಗರದಲ್ಲಿನ ಹಲವಾರು ರೀತಿಯ ಮಾಲಿನ್ಯವನ್ನು ಕೆಲವೊಂದು ಮರಗಳು ತನ್ನ ಎಲೆಗಳಲ್ಲಿ ಹಿಡಿದಿಟ್ಟುಕೊಳ್ಳುತ್ತವೆ. ಅಂತಹ 150ಕ್ಕೂ ಹೆಚ್ಚು ಪ್ರಬೇಧದ ಮರಗಳ ಪಟ್ಟಿ ಹಾಗೂ ನಗರದಲ್ಲಿ ಮಾಲಿನ್ಯ ನಿಯಂತ್ರಣ, ವಾತಾವರಣಕ್ಕೆ ಅನುಗುಣವಾಗಿ ನೆಡಬೇಕಾದ ಮರಗಳ ಕುರಿತ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿ ವರ್ಷಗಳು ಕಳೆದಿವೆ. ಒಂದೊಮ್ಮೆ ವರದಿ ಅನುಷ್ಠಾನಗೊಳಿಸಿದರೆ, ಸ್ವಲ್ಪಮಟ್ಟಿಗೆ ಮಾಲಿನ್ಯ ನಿಯಂತ್ರಣವಾಗಲಿದೆ. -ಯಲ್ಲಪ್ಪ ರೆಡ್ಡಿ, ಪರಿಸರವಾದಿ ನಿತ್ಯ ನಗರದಲ್ಲಿ ಸಾವಿರಾರು ವಾಹನಗಳು ನೋಂದಾಣಿಯಾಗುತ್ತಿವೆ. ಜತೆಗೆ ನಗರದಲ್ಲಿನ 15 ವರ್ಷಕ್ಕೂ ಹಳೆಯ ವಾಹನಗಳಿಂದಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಕೂಡಲೇ ಸರ್ಕಾರ ಇಂತಹ ವಾಹನಗಳನ್ನು ನಿಷೇಧಿಸಬೇಕು. ಜತೆಗೆ ಸಮೂಹ ಸಾರಿಗೆ ಸುಲಭವಾಗಿ ಸಾರ್ವಜನಿಕರಿಗೆ ದೊರೆಯುವಂತಾಗಬೇಕು.
-ಶ್ರೀಹರಿ, ಸಂಚಾರ ತಜ್ಞ ನಗರದ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು
– 15 ವರ್ಷ ಮೀರಿದ ವಾಹನಗಳನ್ನು ನಿಷೇಧಿಸಬೇಕು.
– ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳನ್ನಾಗಿ ಪರಿವರ್ತಿಸಬೇಕು.
– ಮೆಟ್ರೊ ಕಾಮಗಾರಿಗಾಗಿ ಮರಗಳನ್ನು ಕಡಿಯುವುದಕ್ಕಿಂತಲೂ ಮರುನಾಟಿಗೆ ಹೆಚ್ಚು ಆದ್ಯತೆ ನೀಡಬೇಕು.
– ಮೆಟ್ರೊ ಬಳಕೆದಾರರ ಸಂಖ್ಯೆ ಹೆಚ್ಚಿಸಲು ಮೆಟ್ರೊ ಪ್ರಯಾಣ ದರ ಕಡಿಮೆ ಮಾಡಬೇಕು.
– ಮೆಟ್ರೊ ನಿಲ್ದಾಣಗಳಿಂದ ಲಾಸ್ಟ್ ಮೈಲ್ ಕನೆಕ್ಟಿವಿಟಿ ವ್ಯವಸ್ಥೆ ಮಾಡಬೇಕು.
– ಹೊಸ ವಾಹನಗಳ ನೋಂದಣಿ ನಿಯಂತ್ರಿಸಬೇಕು.
– ಅರಣ್ಯೀಕರಣಕ್ಕೆ ಒತ್ತು ನೀಡಬೇಕು.
– ಬಿಎಂಟಿಸಿ ಹಾಗೂ ಮೆಟ್ರೊ ನಿಲ್ದಾಣಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. * ವೆಂ. ಸುನೀಲ್‌ಕುಮಾರ್