Advertisement

ಪಾಸ್‌ಪೋರ್ಟ್‌ ಈಗ ಬಲು ಸುಲಭ; ಹೀಗೆ ಮಾಡಿ

01:03 PM Jun 27, 2018 | Sharanya Alva |

ನವದೆಹಲಿ/ಲಕ್ನೋ: ಪಾಸ್‌ಪೋರ್ಟ್‌ ಬೇಕಿದ್ದರೆ ಸರತಿ ಸಾಲಲ್ಲಿ ಇನ್ನು ನಿಲ್ಲಬೇಕಾಗಿಲ್ಲ. ದೇಶದ ಯಾವುದೇ ಭಾಗ ದಿಂದ ಬೇಕಿದ್ದರೂ ಅರ್ಜಿ ಹಾಕಬಹುದು. ಮೊಬೈಲ್‌ ಆ್ಯಪ್‌ ಮೂಲಕ ಸುಲಭ ವಾಗಿ ಅರ್ಜಿ ಸಲ್ಲಿಸುವ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ.

Advertisement

“ಪಾಸ್‌ಪೋರ್ಟ್‌ ಸೇವಾ ದಿನ’ ಪ್ರಯುಕ್ತ ನವದೆಹಲಿಯಲ್ಲಿ ಮಂಗಳವಾರ ಆಯೋಜಿ ಸಲಾಗಿದ್ದ ಅಧಿಕಾರಿಗಳ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಈ ಸೇವೆಗೆ ಚಾಲನೆ ನೀಡಿದ್ದಾರೆ. ಆ್ಯಪ್‌ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು “ಪಾಸ್‌ಪೋರ್ಟ್‌ ಕ್ರಾಂತಿ’ ಎಂದು ಅವರು ಬಣ್ಣಿಸಿದ್ದಾರೆ. ಮೊಬೈಲ್‌ ಆ್ಯಪ್‌ ಮೂಲಕ ವ್ಯಕ್ತಿ ಸಲ್ಲಿಸಿರುವ ಮಾಹಿತಿ ಆಧಾರದಲ್ಲಿ ಪೊಲೀಸ್‌ ದೃಢೀಕರಣ (ಪೊಲೀಸ್‌ ವೆರಿಫಿಕೇಶನ್‌) ಪ್ರಕ್ರಿಯೆ ನಡೆಸಲಾಗುತ್ತದೆ. ಅದರಲ್ಲಿ ನೀಡಲಾಗಿರುವ ವಿಳಾಸಕ್ಕೇ ಪಾಸ್‌ಪೋರ್ಟ್‌ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ ಸುಷ್ಮಾ.

ಇದೀಗ ಹಜ್‌ ಯಾತ್ರೆ ವಿಭಾಗ ಅಲ್ಪ ಸಂಖ್ಯಾತರ ಅಭಿವೃದ್ಧಿ ಸಚಿವಾಲಯಕ್ಕೆ ವರ್ಗಾ ವಣೆಯಾಗಿರುವುದರಿಂದ ಪಾಸ್‌ಪೋರ್ಟ್‌ ನೀಡಿಕೆ ಮಾತ್ರ ವಿದೇಶಾಂಗ ಇಲಾಖೆ ವ್ಯಾಪ್ತಿಯಲ್ಲಿದೆ. 251 ಪಾಸ್‌ಪೋರ್ಟ್‌ ಕೇಂದ್ರಗಳ ಪೈಕಿ ಈಗಾಗಲೇ 212ನ್ನು 2 ಹಂತಗಳಲ್ಲಿ ಸ್ಥಾಪನೆ ಮಾಡಲಾಗಿದೆ.

ಮೂರನೇ ಹಂತದಲ್ಲಿ 388 ಹೆಚ್ಚುವರಿ ಕೇಂದ್ರ ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಲಾಗಿದೆ. ಆ ಪೈಕಿ 2 ಈಗಾಗಲೇ ಆರಂಭವಾಗಿದೆ ಎಂದಿದ್ದಾರೆ. ಜತೆಗೆ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿಯೂ ಪಾಸ್‌ಪೋರ್ಟ್‌ ಕೇಂದ್ರ ಆರಂಭಿಸಲಾಗುತ್ತದೆ ಎಂದು ಸುಷ್ಮಾ ಮಾಹಿತಿ ನೀಡಿದ್ದಾರೆ. 

ಮದುವೆ ಪ್ರಮಾಣ ಪತ್ರ ಬೇಡ: ಪಾಸ್‌ಪೋರ್ಟ್‌ ಪಡೆಯುವಾಗ ಇನ್ನು ಮುಂದೆ ವೈವಾಹಿಕ ಮಾಹಿತಿ ದೃಢೀಕರಣಗೊಳಿಸಬೇಕಾದ ಅಗತ್ಯವೂ ಇರುವುದಿಲ್ಲ. ಕೆಲವೊಂದು ಸಂದರ್ಭದಲ್ಲಿ ಪುರುಷ ಅಥವಾ ಮಹಿಳೆಗೆ ವೈವಾಹಿಕ ವಿಚಾರ ಬಹಿರಂಗಪಡಿಸಲು ಅನಾನುಕೂಲವಾಗುತ್ತದೆ. ಈ ಬಗ್ಗೆ ಮನವಿಗಳು ಬಂದ ಹಿನ್ನೆಲೆಯಲ್ಲಿ ಹಾಲಿ ನಿಯಮವನ್ನೇ ಕೈಬಿಡಲಾಗಿದೆ ಎಂದೂ ಸುಷ್ಮಾ ಘೋಷಿಸಿದ್ದಾರೆ.

Advertisement

ಹೀಗೆ ಮಾಡಿ 
*ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಐಫೋನ್‌ ನಲ್ಲಿರುವ ಆ್ಯಪ್‌ ಸ್ಟೋರ್‌ ಮೂಲಕ ಪಾಸ್‌ ಪೋರ್ಟ್‌ ಆ್ಯಪ್‌ ಡೌನ್‌ ಲೋಡ್‌ ಮಾಡಿ.

*ಬಳಿಕ ಪಾಸ್‌ಪೋರ್ಟ್‌ ಕಚೇರಿ ಯನ್ನು ಆಯ್ಕೆ ಮಾಡಿ. ಹೆಸರು, ಹುಟ್ಟಿದ ದಿನಾಂಕ, ಇ-ಮೇಲ್‌, ಲಾಗ್‌ ಇನ್‌ ಐಡಿ ನಮೂದಿಸಿ.

*ಲಾಗ್‌ ಇನ್‌ ಐಡಿ ಮತ್ತು ಇ-ಮೇಲ್‌ ದೃಢೀಕರಣ ಬಳಿಕ ಪಾಸ್‌ವರ್ಡ್‌, ಹಿಂಟ್‌ ಕ್ವೆಶ್ಚನ್‌, ಕ್ಯಾಪ್ಚ (CAPTCHA)ಕೋಡ್‌ ಎಂಟರ್‌ ಮಾಡಿ 

*ನಿಗದಿತ ಪಾಸ್‌ ಪೋರ್ಟ್‌ ಕಚೇರಿಯಲ್ಲಿ ದಾಖಲಾಗಿರುವ ಇ-ಮೇಲ್‌ಗೆ ಲಿಂಕ್‌ ಬರುತ್ತದೆ. ಅದನ್ನು ಕ್ಲಿಕ್‌ ಮಾಡಿ ಖಾತೆ ಆಕ್ಟಿವೇಟ್‌ ಮಾಡಿ. ಅಲ್ಲಿ ನೀಡಿರುವ ಸೂಚನೆ ಪಾಲಿಸಿ.

ಹೀಗೆ ಲಿಂಕ್‌ ಮೂಲಕ ಖಾತೆ ಆ್ಯಕ್ಟಿವೇಟ್‌ ಆದ ಬಳಿಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ದೃಢೀಕರಣಕ್ಕೆ ಅಗತ್ಯವಾಗಿರುವ ದಾಖಲೆಗಳು, ಪಾಸ್‌ಪೋರ್ಟ್‌ ಕೇಂದ್ರ, ಶುಲ್ಕಗಳ ವಿವರ ಕೂಡ ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next