Advertisement

ಇನ್ಮುಂದೆ ಮನೆಯಲ್ಲೇ ಕೂತು ನಿಮ್ಮ ಫೋನ್.ನಂ’ನ ಆಧಾರ್ ಗೆ ಲಿಂಕ್ ಮಾಡಿ

06:23 PM Feb 15, 2018 | Sharanya Alva |

ಕೇಂದ್ರ ಸರ್ಕಾರದ ಆದೇಶದಂತೆ ಆಧಾರ್ ಕಾರ್ಡನ್ನು ಬಹುತೇಕ ನಮ್ಮ ಎಲ್ಲ ದಾಖಲೆಗಳಿಗೂ ಲಿಂಕ್ ಮಾಡಬೇಕು,ಅಂತೆಯೇ ಪ್ರತಿಯೊಬ್ಬರು ಆಧಾರ್ ನ ಕಡ್ಡಾಯವಾಗಿ ತಮ್ಮ ಫೋನ್.ನಂ ಗೆ ಲಿಂಕ್ ಮಾಡಿರಲೇಬೇಕು ಇಲ್ಲದಿದ್ದರೆ ತಮ್ಮ ನಂ. ಅಸ್ಥಿಸ್ತ್ವ ಕಳೆದುಕೊಳ್ಳಲಿದೆ.
ಮೊದಲೆಲ್ಲ ನಾವು ಈ ಪ್ರಕ್ರಿಯೆಯನ್ನು ಮಾಡಲು ಸಂಬಂಧಪಟ್ಟ ಗ್ರಾಹಕರ ಕೇಂದ್ರಗಳನ್ನ ಹುಡುಕಿಕೊಂಡು ಹೋಗಬೇಕಿತ್ತು ಆದರೆ UIDAI ಬಿಡುಗಡೆ ಮಾಡಿದ ಹೊಸ ಸೇವೆಯ ಮೂಲಕ ಮನೆಯಲ್ಲೇ ಕೂತು ತುಂಬಾ ಸರಳ ವಿಧಾನದಲ್ಲಿ ಈ ಕೆಲಸವನ್ನು ಮಾಡಬಹುದು.

Advertisement

ಈ ಕೆಳಗೆ ಸಂಪೂರ್ಣ ವಿಧಾನವನ್ನು ಕ್ರಮವಾಗಿ ವಿವರಿಸಿದ್ದೇನೆ :-
1.    ಮೊದಲಿಗೆ ನಿಮ್ಮ ಫೋನ್ ನಿಂದ 14546 ಸುಂಕ ರಹಿತ ಸಂಖ್ಯೆಗೆ ಕರೆ ಮಾಡಿ.
2.     ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ.
3.    ಸಂಖ್ಯೆ 1ನ್ನು ಒತ್ತಿ ನಿಮ್ಮ ರಾಷ್ಟ್ರೀಯತೆ ಆಯ್ಕೆಮಾಡಿಕೊಳ್ಳಿ.
4.    ನಂತರ ನಿಮ್ಮ ಟೆಲಿಕಾಂ ತಂಡದೊಂದಿಗೆ ಆಧಾರ್’ನ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ, ಅದರ ಅನುಮತಿಗಾಗಿ 1ನ್ನು ನಮೂದಿಸಿ.
5.    ನಂತರ ನಿಮ್ಮ 12 ಅಂಕೆಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ.
6.    ನಂತರ ಆ ನಂಬರಿಗೆ ಆಧಾರ್ ವತಿಯಿಂದ ಸಂದೇಶ ಬರುತ್ತದೆ, ಅದರಲ್ಲಿ ತೋರುವ 6 ಅಂಕೆಗಳ ಓ.ಟಿ.ಪಿ ಯನ್ನು ನಮೂದಿಸಿ – ಧೃಡೀಕರಿಸಲು 1ನ್ನು ಒತ್ತಿ.【ಓ.ಟಿ.ಪಿ ಕೋಡ್’ಗೆ 30 ನಿಮಿಷಗಳ ಕಾಲಾವಧಿ ಇರುತ್ತದೆ 】
7.    ಇದರ ಬಳಿಕ ನಿಮ್ಮ ಮೊಬೈಲ್ಗೆ ಈ ಪ್ರಕ್ರಿಯೆ ಯಶಸ್ವಿಯಾಗಿರುವ ಬಗ್ಗೆ ಸಂದೇಶ ಬರುತ್ತದೆ 【 48 ಗಂಟೆಯ ಒಳಗಾಗಿ ಸಂದೇಶ ಬರುತ್ತದೆ 】.


ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮಾರ್ಚ್ 31 2018 ಕೊನೆಯ ದಿನವಾಗಿರುತ್ತದೆ, ಅಷ್ಟರೊಳಗೆ ಲಿಂಕ್ ಮಾಡದಿದ್ದಲ್ಲಿ ನಿಮ್ಮ ನಂ. ಚಾಲನೆಯನ್ನು ಕಳೆದುಕೊಳ್ಳಲಿದೆ.

ಈಗಾಗಲೇ ಏರ್ಟೆಲ್, ಐಡಿಯಾ, & ವೊಡಾಫೋನ್ ಈ ಸೇವೆಯನ್ನು ನೀಡುತ್ತಿದ್ದು ಆಯಾ ಚಂದಾದರರು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ ಹಾಗೆಯೇ ಜಿಯೋ ಬಳಕೆದಾರರು ಸಿಮ್ ಕೊಳ್ಳುವಾಗಲೇ ಆಧಾರ್’ನ ಮೂಲಕ ಪಡೆದ ಕಾರಣ ಅವರು ಮತೊಮ್ಮೆ ಲಿಂಕ್ ಮಾಡುವ ಅವಶ್ಯಕತೆ ಇರುವುದಿಲ್ಲ.

ಆಧಾರ್ ಮತ್ತು ತಾವು ಬಳಸುತ್ತಿರುವ ಸಿಮ್ ಎರಡೂ ಬೇರೆ ಬೇರೆ ರಾಜ್ಯಕ್ಕೆ ಸೇರಿದ್ದರೆ ಈ ವಿಧಾನದ ಮೂಲಕ ಲಿಂಕ್ ಮಾಡಲು ಸಾಧ್ಯವಿಲ್ಲ, ಅದಕ್ಕಾಗಿ ನೀವು ನಿಮ್ಮ ಹತ್ತಿರದ ಯಾವುದೇ ಗ್ರಾಹಕರ ಕೇಂದ್ರಕ್ಕೆ ಹೋಗಿ ಲಿಂಕ್ ಮಾಡಬಹುದು.

Advertisement

*ಸೂರಜ್ ಅಣ್ವೇಕರ್, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next