ಮಂಗಳೂರು: ಇತ್ತೀಚೆಗೆ ಮಿಡತೆ ಕೀಟ ಹಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ. ಹಾಗೂ ಕಾಣಿಸಿಕೊಂಡ ವಿಡತೆಗಳು ಮರುಭೂವಿಯ ಲೋಕಸ್ಟ ಗಳಾಗಿರುವುದಿಲ್ಲ. ಮಿಡತೆಗಳು ಬೆಳೆಗೆ ಹಾನಿ ಮಾಡಿದಲ್ಲಿ ಅವುಗಳ ನಿಯಂತ್ರಣಕ್ಕಾಗಿ ಕೀಟವು ಬೆಳೆಗಳಲ್ಲಿ ಕಂಡುಬಂದಲ್ಲಿ, ಡ್ರಮ್, ಪಾತ್ರೆ ಅಥವಾ ಫಲಕಗಳನ್ನು ಬಡಿಯುವುದರ ಮೂಲಕ ಹೆಚ್ಚು ಶಬ್ದ ಮಾಡಿ ಮಿಡತೆ ಸಮೂಹವನ್ನು ಇತರೆಡೆಗೆ ಓಡಿಸಬಹುದು ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಮರಿಹುಳುವಾಗಿದ್ದಲ್ಲಿ ಬಾಧಿತ ಪ್ರದೇಶದಲ್ಲಿ ಕನಿಷ್ಠ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿಗಳನ್ನು ನಿರ್ಮಿಸಿ ಮರಿಹುಳುಗಳನ್ನು ಸೆರೆ ಹಿಡಿದು ನಾಶಪಡಿಸಬಹುದು. ಮಿಡತೆ ಹಗಲಿನಲ್ಲಿ ಚಲಿಸಿ ರಾತ್ರಿವೇಳೆ ಮರಗಿಡಗಳ ಮೇಲೆ ಆಶ್ರಯ ಪಡೆಯುವುದರಿಂದ ಟ್ರ್ಯಾಕ್ಟರ್ ಮೌಂಟೆಡ್ ಸ್ಪ್ರೆಯರ್‌ಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸಬಹುದು. ಆದರೆ ಈ ಕೀಟನಾಶಕ ಗಳನ್ನು ಜಲಮೂಲಗಳ ಸಮೀಪ ಸಿಂಪಡಿಸದಂತೆ ಮುನ್ನೆಚ್ಚರಿಕೆ ವಹಿಸ ಬೇಕಾಗುತ್ತದೆ.
ಬೆಳೆ ಅಥವಾ ಮರಗಳ ಮೇಲೆ ಮರುಭೂಮಿ ಮಿಡತೆ ಕಂಡುಬಂದಲ್ಲಿ ಕೀಟನಾಶಕ ಕ್ಲೊರೋಪೈರಿಪಾಸ್ ಶೇ. 20 ಎ.ಸಿ ಪ್ರತಿ ಹೆಕ್ಟೇರ್‌ಗೆ 1.2 ಲೀ., ಕೀಟನಾಶಕ ಕ್ಲೊರೋಪೈರಿಪಾಸ್ ಶೇ. 50 ಇ.ಸಿ. ಪ್ರತಿ ಹೆಕ್ಟೇರ್‌ಗೆ 480 ಎಂ.ಎಲ್., ಕೀಟನಾಶಕ ಡೆಲ್ಟಮೆಥ್ರಿನ್ 2.8 ಇ.ಸಿ. ಪ್ರತಿ ಹೆಕ್ಟೇರ್‌ಗೆ 450 ಎಂ.ಎಲ್., ಕೀಟನಾಶಕ ಫಿಪ್ರೋನಿಲ್ ಶೇ. 5 ಎಸ್.ಸಿ. ಪ್ರತಿ ಹೆಕ್ಟೇರ್‌ಗೆ 125 ಎಂ.ಎಲ್., ಕೀಟನಾಶಕ ಫಿಪ್ರೋನಿಲ್ ಶೇ. 2.8 ಇ.ಸಿ ಪ್ರತಿ ಹೆಕ್ಟೇರ್‌ಗೆ 225 ಎಂ.ಎಲ್., ಕೀಟನಾಶಕ ಲಾಮಾಸಹಲೋಥ್ರಿನ್ ಶೇ. 5.0 ಇ.ಸಿ. ಪ್ರತಿ ಹೆಕ್ಟೇರ್‌ಗೆ 400 ಎಂ.ಎಲ್., ಕೀಟನಾಶಕ ಲಾಮಾಸಹ ಲೋಥ್ರಿನ್ ಶೇ. 10.0 ಡಬ್ಲ್ಯೂಪಿ ಪ್ರತಿ ಹೆಕ್ಟೇರ್‌ಗೆ 200 ಗ್ರಾಂ., ಕೀಟನಾಶಕ ಮಲಾಥಿಯಾನ್ ಶೇ. 50 ಇ.ಸಿ. ಪ್ರತಿ ಹೆಕ್ಟೇರ್‌ಗೆ 1.85 ಲೀ., ಕೀಟನಾಶಕ ಮಲಾಥಿಯಾನ್ ಶೇ. 25 ಡಬ್ಲ್ಯೂಪಿ ಪ್ರತಿ ಹೆಕ್ಟೇರ್‌ಗೆ 3.7 ಕಿ.ಗ್ರಾಂ. ಕೀಟನಾಶಕಗಳನ್ನು ಬಳಸಿ ಹತೋಟಿ ಮಾಡಬಹುದು ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.
ಕೀಟನಾಶಕ
ಬೇವಿನ ಮೂಲದ ಕೀಟನಾಶಕಗಳನ್ನು (0.15% ಇ.ಸಿ 3ಎಂ.ಎಲ್./ಲೀ.) ಬೆಳೆಗಳಲ್ಲಿ ಸಿಂಪಡಿಸುವುದರಿಂದ ಕೀಟವು ಬೆಳೆ ಹಾನಿ ಮಾಡುವುದು ಕಡಿಮೆಯಾಗುತ್ತದೆ. ಕೀಟ ಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕುವುದರಿಂದ ಕೀಟವನ್ನು ಬೇರೆಡೆಗೆ ಓಡಿಸಬಹುದು.