Advertisement

ಹಲ್ಲು ನೋವಿಗೆ ಇಲ್ಲಿದೆ ಸರಳ ಪರಿಹಾರ

06:16 PM Mar 06, 2021 | Team Udayavani |

ಹಲ್ಲುಗಳ ಆರೋಗ್ಯವು ನಮ್ಮ ಸಂಪೂರ್ಣ ದೇಹದ ಆರೋಗ್ಯಕ್ಕೆ ಅತೀ ಮುಖ್ಯವಾದ ಅಂಶ. ನಾವು ಸೇವಿಸುವ ಎಲ್ಲಾ ವಿಧವಾದ ಆಹಾರವನ್ನು ನಿಗದಿತ ಪ್ರಮಾಣದಲ್ಲಿ ಅಗಿದು ನಮ್ಮಲ್ಲಿ ಜೀರ್ಣಕ್ರಿಯೆ ಸುಗಮವಾಗಿ ಆಗುವಂತೆ ಮಾಡುವಲ್ಲಿ ಹಲ್ಲುಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಇಂತಹ ಹಲ್ಲುಗಳಲ್ಲಿ ನೋವು ಕಾಣಿಸಿಕೊಂಡರೆ ಅದು ನಮ್ಮ ಆರೋಗ್ಯದ ಮೇಲಷ್ಟೇ ಅಲ್ಲದೆ ನಮ್ಮ ದೈನಂದಿನ ಕೆಲಸಗಳ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.

Advertisement

ಉಪ್ಪು ನೀರು ಬಳಸಿ

ಸಾಮಾನ್ಯವಾಗಿ ಹಲ್ಲುಗಳು ಹುಳುಕಾಗಿ, ಆ ಜಾಗದಲ್ಲಿ ಆಹಾರ ಪದಾರ್ಥಗಳು ಸೇರಿಕೊಂಡು ಕೊಳೆತು ಹಲ್ಲಿನಲ್ಲಿ ಸೋಂಕು ಕಂಡುಬರುತ್ತದೆ. ಹಾಗಾಗಿ ಉಪ್ಪುನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಈ ನೋವಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ ಹಲ್ಲುನೋವಿನಿಂದ  ಉಪಶಮನವನ್ನು ಕಾಣಬಹುದಾಗಿದೆ.

ವಿಧಾನ: ಒಂದು ಲೋಟದಷ್ಟು ಉಗುರುಬೆಚ್ಚಗಿನ ನೀರಿಗೆ ಸ್ಪಲ್ಪ ಉಪ್ಪನ್ನು ಬೆರಸಿ ಉಪ್ಪುನೀರನ್ನು ತಯಾರಿಸಿಕೊಳ್ಳಿ. ನಂತರ ಹಲ್ಲಿನ ಸಂದುಗಳಲ್ಲಿರುವ ಆಹಾರ ಪದಾರ್ಥಗಳು ಹೋಗುವಂತೆ ಹಲವು ಬಾರಿ ಬಾಯಿ ಮುಕ್ಕಳಿಸಿ. ಹಲ್ಲು ನೋವಿನ ಸಮಯದಲ್ಲಿ ಪ್ರತಿ ಗಂಟೆಗೊಮ್ಮ ಹೀಗೆ ಬಾಯಿ ಮುಕ್ಕಳಿಸಿದರೆ ಬಹುಬೇಗ ನೋವು ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ ಬಳಸಿ

Advertisement

ಬೆಳ್ಳುಳ್ಳಿಯಲ್ಲಿ ಹಲವಾರು ರೋಗನಿರೋಧಕ ಸತ್ವಗಳಿದ್ದು, ಇದು ಹಲ್ಲನ್ನು ಹುಳುಕು ಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ.

ಹಲ್ಲು ನೋವಿನ ಸಮಯದಲ್ಲಿ ಬೆಳ್ಳುಳ್ಳಿಯನ್ನು ಚೆನ್ನಾಗಿ ಅರೆದು ನೋವಿರುವ ಭಾಗಕ್ಕೆ ಹಚ್ಚಬೇಕು. ಬೆಳ್ಳುಳ್ಳಿಯ ಜೊತೆಗೆ ಉಪ್ಪನ್ನೂ ಸೇರಿಸಬಹುದು. ಒಂದು ವೇಳೆ ಬೆಳ್ಳುಳ್ಳಿಯನ್ನು ಅರೆಯಲು ಸಾಧ್ಯವಾಗದ ಸಮಯದಲ್ಲಿ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಅಗಿದು ಅದರ ರಸವನ್ನು ಸ್ಪಲ್ಪ ಹೊತ್ತು ಬಾಯಲ್ಲಿ ಇಟ್ಟುಕೊಳ್ಳಬೇಕು.

ಇದನ್ನೂ ಓದಿ:ಕಾಂಗ್ರೆಸ್ ಎಲ್ಲವನ್ನೂ ಕೊಟ್ಟಿದ್ದರೆ, ಮೋದಿ ಅಧಿಕಾರದಲ್ಲಿ ಇರುತ್ತಿರಲಿಲ್ಲ: ಯೋಗೇಂದ್ರ ಯಾದವ್

ಲವಂಗ ಬಳಸಿ

ಲವಂಗವು ಹಲ್ಲುನೋವಿಗೆ ರಾಮಬಾಣವಾಗಿ ಕಾರ್ಯನಿರ್ಹಿಸುತ್ತದೆ. ಒಂದೆರಡು ಲವಂಗವನ್ನು ಸ್ಪಲ್ಪ ಜಜ್ಜಿ ನೋವಿರುವ ಹಲ್ಲಿನ ಬಳಿ ಇಟ್ಟುಕೊಳ್ಳಬೇಕು. ಇದು ನೋವಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ.

ಕಿರಾತಕನ ಕಡ್ಡಿ ಬಳಸಿ

ಗ್ರಾಮೀಣ ಪ್ರದೇಶಗಳಲ್ಲಿ ಕಿರಾತಕನ ಕಟ್ಟಿ ಎಂದು ಕರೆಯಲ್ಪಡುವ ಔಷಧಿಯ ಗಿಡಮೂಲಿಕೆ ದೊರೆಯುತ್ತದೆ ಅದನ್ನು ಅರೆದು ನೋವಿರುವ ಹಲ್ಲಿನ ಬಳಿ ಇಟ್ಟುಕೊಳ್ಳುವುದರಿಂದ ನೋವು ಗುಣಮುಖವಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next